ತೋಟಗಾರಿಕೆ ಇಲಾಖೆಯ ಮೂಲಕ ರೈತರಿಗೆ (Farmers) ರಿಯಾಯಿತಿ ದರದಲ್ಲಿ ಸವಲತ್ತು ಒದಗಿಸುವ ನಿಟ್ಟಿನಲ್ಲಿ 400 ಕೋ.ರೂ. ಅನುದಾನ ಬಿಡುಗಡೆ (Fund release) ಮಾಡಲಾಗಿದೆ ಎಂದು ಪೌರಾಡಳಿತ, ರೇಷ್ಮೆ ಹಾಗೂ ತೋಟಗಾರಿಕೆ (Horticulture Minister) ಸಚಿವ ಡಾ. ಕೆ.ಸಿ. ನಾರಾಯಣ ಗೌಡ ಹೇಳಿದ್ದಾರೆ.
ತೋಟಗಾರಿಕೆ ಇಲಾಖೆಗಳಲ್ಲಿ ರೈತರಿಗೆ ದೊರೆಯುವ ಸವಲತ್ತು ವಿತರಣೆ ವಿಳಂಬದ ಕುರಿತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಸಲಕರಣೆಗಳನ್ನು ರೈತರಿಗೆ ಉತ್ಪಾದನಾ ಕಂಪನಿಗಳ ಮೂಲಕ ನೇರವಾಗಿ ತಲುಪಿಸಲು ಸರಕಾರ ನಿರ್ಧರಿಸಿದೆ. ಗುಣಮಟ್ಟ ಕಾಪಾಡುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದಾಗಿ ಕೊಂಚ ವಿಳಂಬವೂ ಆಗಿದೆ. ಈಗ ಎಲ್ಲ ಅಡೆತಡೆ ನಿವಾರಣೆಯಾಗಿದೆ. ಪ್ರಕ್ರಿಯೆ ಪೂರ್ಣಗೊಳಿಸಿ ಸಂಪುಟದ ಒಪ್ಪಿಗೆ ನೀಡಲಾಗಿದ್ದು, ಅನುದಾನ ಮಂಜೂರಾಗಿದೆ ಎಂದು ಹೇಳಿದ್ದಾರೆ.
Share your comments