1. ಸುದ್ದಿಗಳು

ರಾಜ್ಯದ ಒಟ್ಟು 130 ತಾಲೂಕುಗಳನ್ನು ‘ಪ್ರವಾಹ ಪೀಡಿತ’ ಎಂದು ಘೋಷಿಸಿದ ರಾಜ್ಯ ಸರ್ಕಾರ

ಮಳೆ ಮತ್ತು ಪ್ರವಾಹದಿಂದ ತೀವ್ರ ಹಾನಿಗೊಳಗಾದ ರಾಜ್ಯದ 23 ಜಿಲ್ಲೆಗಳ 130 ತಾಲ್ಲೂಕುಗಳನ್ನು ‘ಪ್ರವಾಹಪೀಡಿತ ತಾಲ್ಲೂಕುಗಳೆಂದು ರಾಜ್ಯ ಸರ್ಕಾರ ಘೋಷಿಸಿದೆ.

ಕಳೆದ ಆಗಸ್ಟ್‌ ತಿಂಗಳಲ್ಲಿ ಸುರಿದ ವ್ಯಾಪಕ ಮಳೆಯಿಂದಾಗಿ ರಾಜ್ಯದ ಹಲವೆಡೆ ಪ್ರವಾಹ ಉಂಟಾಗಿತ್ತು. ಹೀಗಾಗಿ ಪ್ರಾಕೃತಿಕ ವಿಕೋಪಕ್ಕೆ ಒಳಗಾಗಿರೋ ರಾಜ್ಯದ ಒಟ್ಟು 23 ಜಿಲ್ಲೆಗಳ 130 ತಾಲೂಕುಗಳನ್ನು ಅತಿವೃಷ್ಟಿ ಪೀಡಿತ ತಾಲೂಕುಗಳು ಎಂದು ಸರ್ಕಾರ ಘೋಷಣೆ ಮಾಡಿದೆ. ಈ ಸಂಬಂಧ ಕಂದಾಯ ಇಲಾಖೆ ಮತ್ತು ವಿಪತ್ತು ನಿರ್ವಹಣಾ ಇಲಾಖೆಯ ಕಾರ್ಯದರ್ಶಿ ಅಧಿಕೃತ ಆದೇಶ ಹೊರಡಿಸಿದ್ದಾರೆ.

ಪ್ರವಾಹಪೀಡಿತ ಎಂದು ಘೋಷಿಸಿದ ತಾಲ್ಲೂಕುಗಳಲ್ಲಿ ರಾಜ್ಯ ವಿಪತ್ತು ನಿರ್ವಹಣಾ ನಿಧಿ (ಎಸ್‌ಡಿಆರ್‌ಎಫ್‌) ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ (ಎನ್‌ಡಿಆರ್‌ಎಫ್‌) ಮಾರ್ಗಸೂಚಿ ಪ್ರಕಾರ ಮತ್ತು ಪರಿಹಾರ ನೀಡುವ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿದ ಆದೇಶಗಳ ಪ್ರಕಾರ ಜಿಲ್ಲಾಡಳಿತಗಳು ಕ್ರಮ ತೆಗೆದುಕೊಳ್ಳಬೇಕು ಎಂದೂ ಆದೇಶದಲ್ಲಿ ತಿಳಿಸಲಾಗಿದೆ.

ಸರ್ಕಾರ ಹೊರಡಿಸಿರೋ ಆದೇಶದ ಪ್ರಕಾರ ಮುಂಗಾರು ಋತುವಿನಲ್ಲಿ ಸುರಿದ ಭಾರೀ ಮಳೆ ಹಾಗೂ ಮಹಾರಾಷ್ಟ್ರ ರಾಜ್ಯದಲ್ಲಿ ಜಲಾಶಯಗಳು ತುಂಬಿ ತುಳುಕಿದ ಹಿನ್ನೆಲೆ ಹೆಚ್ಚುವರಿ ನೀರನ್ನು ಹೊರಗೆ ಹರಿಯಬಿಡಲಾಗಿತ್ತು. ಇದರಿಂದಾಗಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಭೀತಿ ಉಂಟಾಗಿತ್ತು. ಅದೇ ರೀತಿ ಕರಾವಳಿ, ಮಲೆನಾಡು ಭಾಗದಲ್ಲಿ ಕೂಡ ವಿಪರೀತ ಮಳೆ ಮತ್ತು ಭೂಕುಸಿತದಿಂದ ಪ್ರಾಣ ಹಾನಿ, ಮನೆ ಹಾನಿ, ಬೆಳೆ ಹಾನಿಯಾಗಿತ್ತು. ಇದೀಗ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯನ್ನು ಆಧರಿಸಿ  ಪ್ರವಾಹ ಪೀಡಿತ ತಾಲೂಕಗಳೆಂದು ಘೋಷಿಸಲಾಗಿದೆ

ದಾವಣಗೆರೆ, ಕೊಪ್ಪಳ, ಕೊಡಗು ತಲಾ 3, ಚಾಮರಾಜನಗರ, ಮಂಡ್ಯ ತಲಾ 1, ಮೈಸೂರು, ವಿಜಯಪುರ, ಗದಗ ತಲಾ 4, ಬಳ್ಳಾರಿ, ಹಾವೇರಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ ತಲಾ 6,  ರಾಯಚೂರು, ಯಾದಗಿರಿ, ಬೀದರ್, ಹಾಸನ ತಲಾ 5, ಕಲಬುರ್ಗಿ, ಬಾಗಲಕೋಟೆ ತಲಾ 9, ಬೆಳಗಾವಿ 14, ಧಾರವಾಡ, ಶಿವಮೊಗ್ಗ, ಉಡುಪಿ ತಲಾ 7, ಉತ್ತರ ಕನ್ನಡ ಜಿಲ್ಲೆಯ 10 ತಾಲ್ಲೂಕುಗಳನ್ನು ಪ್ರವಾಹಪೀಡಿತ ಎಂದು ಘೋಷಿಸಲಾಗಿದೆ.

ಜಿಲ್ಲೆ

ಪ್ರವಾಹ ಪೀಡಿತ ತಾಲೂಕುಗಳು

ದಾವಣಗೆರೆ

ಹರಿಹರ, ನ್ಯಾಮತಿ

ಚಾಮರಾಜನಗರ

ಕೊಳ್ಳೇಗಾರ

ಮೈಸೂರು

ಹುಣಸೂರ, ಕೆ.ಆರ್.ನಗರ, ಮೈಸೂರು, ಪಿರಿಯಾಪಟ್ಟಣ

ಮಂಡ್ಯ

ಕೆ.ಆರ್. ಪೇಟೆ

ಕಲಬುರಗಿ

ಅಫಜಲ್ಪುರ, ಆಳಂದ, ಜೇವರ್ಗಿ, ಚಿತ್ತಾಪುರ, ಸೇಡಂ,ಕಾಳಗಿ, ಕಮಲಾಪುರ, ಶಹಾಬಾದ್

ಯಾದಗಿರಿ

ಶಹಾಪುರ, ಹುಣಸಗಿ, ಸೋರಾಪುರ, ಯಾದಗಿರಿ, ವಡಗೇರಾ

ಬೀದರ್

ಔರಾದ, ಬೀದರ್, ಭಾಲ್ಕಿ, ಬಸವಕಲ್ಯಾಣ, ಹುಮನಾಬಾದ್

ಬೆಳಗಾವಿ

ಅಥಣಿ, ಬೈಲಹೊಂಗಲ,  ಬೆಳಗಾವಿ, ಚಿಕ್ಕೋಡಿ, ಗೋಕಾಕ್, ಹುಕ್ಕೇರಿ, ಕಾಗವಾಡ, ಖಾನಾಪುರ, ಕಿತ್ತೂರ, ಮೂಡಲಗಿ, ನಿಪ್ಪಾಣಿ, ರಾಯಬಾಗ, ರಾಮದುರ್ಗ, ಸವದತ್ತಿ

ಬಳ್ಳಾರಿ

ಹಡಗಲಿ,ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಸಿರಗುಪ್ಪ, ಹರಪನಹಳ್ಳಿ, ಕಂಪ್ಲಿ

ಕೊಪ್ಪಳ

ಗಂಗಾವತಿ, ಕೊಪ್ಪಳ, ಕಾರಟಗಿ

ರಾಯಚೂರು

ದೇವದುರ್ಗ, ಲಿಂಗಸೂಗುರ, ಮಾನವಿ, ರಾಯಚೂರು, ಸಿಂಧನೂರ

ಬಾಗಲಕೋಟೆ

ಬದಾಮಿ, ಬಾಗಲಕೋಟೆ, ಬೀಳಗಿ, ಗುಳೇದಗುಡ್ಡ, ಹುನಗುಂದ, ಇಳಕಲ್, ಜಮಖಂಡಿ, ಮುಧೋಳ, ರಬಕವಿ,ಬನಹಟ್ಟಿ

ವಿಜಯಪುರ

ಬಬಲೇಶ್ವರ, ಕೊಲ್ಹಾರ,  ಮುದ್ದೇಬಿಹಾಳ, ನಿಡಗುಂದಿ

ಗದಗ

ಮುಂಡರಗಿ, ನರಗುಂದ, ರೋಣ, ಶಿರಹಟ್ಟಿ

ಹಾವೇರಿ

ಹಾನಗಲ್, ಹಾವೇರಿ, ಹಿರೇಕೇರೂರ, ರಾಣಿಬೆನ್ನೂರ,ರಣಹಳ್ಳಿ, ಶಿಗ್ಗಾಂವ್

ಧಾರವಾಡ

ಅಳ್ಳಾವರ, ಧಾರವಾಡ, ಹುಬ್ಬಳ್ಳಿ, ಹುಬ್ಬಳ್ಳಿನಗರ,ಕಲಘಟಗಿ,ಕುಂದಗೋಳ,ನವಲಗುಂದ

ಶಿವಮೊಗ್ಗ

ಭದ್ರಾವತಿ, ಹೊಸನಗರ,ಸಾಗರ, ಶಿಕಾರಿಪುರ, ಶಿವಮೊಗ್ಗ, ಸೊರಬ, ತೀರ್ಥಹಳ್ಳಿ

ಹಾಸನ

ಆಲೂರ, ಅರಕಲಗೂಡ, ಬೇಲೂರ, ಹಾಸನ, ಸಕಲೇಶಪುರ

ಚಿಕ್ಕಮಗಳೂರು

ಚಿಕ್ಕಮಗಳೂರ, ಕೊಪ್ಪ, ಮೂಡಿಗೇರೆ, ನರಸಿಂಹರಾಜಪುರ, ಶೃಂಗೇರಿ, ತರಿಕೇರೆ

ಕೊಡುಗು

ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆ

ದಕ್ಷಿಣಕನ್ನಡ

ಬಂಟ್ವಾಳ, ಬೆಳ್ತಂಗಡಿ, ಕಡಬ, ಮಂಗಳೂರು, ಮೂಡಬಿದರೆ,ಪುತ್ತೂರ

ಉಡುಪಿ

ಬೈಂದೂರ, ಬ್ರಹ್ಮಾವರ, ಹೆಬ್ರಿ, ಕಾಪು, ಕಾರ್ಕಳ, ಕುಂದಾಪುರ, ಉಡುಪಿ

ಉತ್ತರ ಕನ್ನಡ

ಅಂಕೋಲಾ, ಭಟ್ಕಳ, ಹೊನ್ನಾವರ, ಕಾರವಾರ, ಕುಮಟಾ, ಮುಂಡಗೋಡು, ಸಿದ್ದಾಪುರ, ಶಿರಸಿ, ಯಲ್ಲಾಪುರ

Published On: 11 September 2020, 12:22 PM English Summary: Government has declared 130 taluka flood prone

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.