ಪಿಎಂ ಕುಸುಮ್-ಬಿ ಯೋಜನೆಯಡಿ ರಾಜ್ಯದಾದ್ಯಂತ 10 ಸಾವಿರ ರೈತರಿಗೆ ರಿಯಾಯಿತಿ ದರದಲ್ಲಿ ಸೋಲಾರ್ ಪಂಪ್ಸೆಟ್ ವಿತರಿಸಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ತಿಳಿಸಿದ್ದಾರೆ. ಇಲ್ಲಿದೆ ಈ ಕುರಿತಾದ ಸಂಪೂರ್ಣ ಮಾಹಿತಿ.
ಇದನ್ನೂ ಓದಿರಿ: ಬ್ರೇಕಿಂಗ್: ಉಚಿತ ಪಡಿತರ ಯೋಜನೆ ನಿಲ್ಲಿಸಲು ಕೇಂದ್ರದ ನಿರ್ಧಾರ!
ರೈತರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಒಟ್ಟಾಗಿ ಗುಡ್ನ್ಯೂಸ್ನೀಡುತ್ತಿದೆ. ಏನಂತೀರಾ? ಇಲ್ಲಿದೆ ಈ ಕುರಿತು ಸಂಪೂರ್ಣ ಮಾಹಿತಿ.
10 ಸಾವಿರ ಸೌರಶಕ್ತಿ ಚಾಲಿತ ಕೃಷಿ ಪಂಪ್ಸೆಟ್ ವಿತರಿಸಲು ರಾಜ್ಯ ಬಿಜೆಪಿ ಸರ್ಕಾರ ನಿರ್ಧರಿಸಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ತಮ್ಮ ಫೇಸಬುಕ್ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಈ ಪಿಎಂ ಕುಸುಮ್ – ಬಿ ಯೋಜನೆಯಡಿ ರಾಜ್ಯದಾದ್ಯಂತ 10 ಸಾವಿರ ರೈತರಿಗೆ ರಿಯಾಯಿತಿ ದರದಲ್ಲಿ ಸೋಲಾರ್ ಪಂಪ್ ಸೆಟ್ ವಿತರಣೆ ಮಾಡಲಾಗುವುದು.
100 ದಿನಗಳಲ್ಲಿ ರೈತರಿಗೆ ₹4.6 ಸಾವಿರ ಕೋಟಿ ಸಾಲ!
ಪ್ರತಿ ಸೋಲಾರ್ ಪಂಪ್ಸೆಟ್ಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ ತಲಾ ಶೇಕಡ 30 ರಷ್ಟು ಹಣವನ್ನು ಕೂಡ ಒದಗಿಸಲಾಗುತ್ತದೆ.
7 HP ವರೆಗಿನ ಸೋಲಾರ್ ಪಂಪ್ಸೆಟ್ಗಳನ್ನು ರೈತರು ಪಡೆಯಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ದಾಖಲೆಗಳನ್ನು (ಎರಡು ಸೆಟ್) ಪರಿಶೀಲನೆಗಾಗಿ ಆನ್ಲೈನ್ನಲ್ಲಿ ನೋಂದಾಯಿಸಿಕೊಂಡ ದಿನಾಂಕದಿಂದ ಐದು ದಿನದೊಳಗಾಗಿ ಸಂಬಂಧಿಸಿದ ವಿದ್ಯುತ್ ಸರಬರಾಜು ಕಂಪನಿಯ ಉಪ – ವಿಭಾಗೀಯ ಕಛೇರಿಗಳಲ್ಲಿ ಸಲ್ಲಿಸುವುದು , ವಿಳಂಭವಾದಲ್ಲಿ , ಜೇಷ್ಠತಾ ಪಟ್ಟಿಯಂತೆ ಮುಂದಿನ ಅರ್ಜಿದಾರರನ್ನು ಆಯ್ಕೆಗೆ ಪರಿಗಣಿಸಲಾಗುವುದು .
ಕೆಐಎಡಿಬಿ ಭೂಸ್ವಾಧೀನ ವಿರೋಧಿಸಿ ಆರಂಭಿಸಿದ ರೈತರ ಪ್ರತಿಭಟನೆಗೆ 100 ದಿನ!
ಸಂಬಂಧಿಸಿದ ಉಪ – ವಿಭಾಗಾಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿ ತಾಳೆಹೊಂದದಿದ್ದಲ್ಲಿ ಅಥವಾ ಸ್ಥಳಪರಿವೀಕ್ಷಣೆಯ ನಂತರ ಕಾರ್ಯಸಾಧ್ಯತೆ ಇಲ್ಲದಿರುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು ಮತ್ತು ಅರ್ಜಿದಾರರ ವಂತಿಗೆಯನ್ನು ಹಿಂತಿರುಗಿಸಲಾಗುವುದು.
ಈಗಾಗಲೇ ಆನ್ಲೈನ್ ಅರ್ಜಿನೊಂದಣಿ ಪ್ರಕ್ರಿಯೆಯು ಚಾಲನೆಯಲ್ಲಿರುತ್ತದೆ . ಆಸಕ್ತಿಯುಳ್ಳ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ವರ್ಗದ ರೈತರು ಆನ್ಲೈನ್ ಮುಖಾಂತರ ಅರ್ಜಿಗಳನ್ನು ಕೆ.ಆರ್.ಇ.ಡಿ.ಎಲ್ . ವೆಬ್ಸೈಟ್ www.kredlinfo.in ನಲ್ಲಿ ನೋಂದಾಯಿಸಿಕೊಳ್ಳಬಹುದು.
ಪೂರಕ ಮಾಹಿತಿ ಮತ್ತು ಮಾರ್ಗಸೂಚಿಗಳನ್ನು WWW.kredlinfo.in ವೆಬ್ಸೈಟ್ನಲ್ಲಿ ನೀಡಲಾಗಿದೆ , ಹೆಚ್ಚಿನ ವಿವರಗಳಿಗೆ ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ : 080-22202100.
Share your comments