1. ಸುದ್ದಿಗಳು

ರೈತರ ಕಲ್ಯಾಣಕ್ಕೆ 1 ಲಕ್ಷ ಕೋಟಿಯ ಕೃಷಿ ನಿಧಿ

ಕೊರೋನಾ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಕೃಷಿ ಮೂಲಕ ಸೌಕರ್ಯ ಅಭಿವೃದ್ಧಿಗೆ 1 ಲಕ್ಷ ಕೋಟಿ ರೂಪಾಯಿ ಮೌಲ್ಯದ ಹೊಸ ಯೋಜನೆಯೊಂದಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಕೃಷಿ ಉದ್ಯಮ, ಸ್ಟಾರ್ಟ್‌ಅಪ್‌, ಗೋದಾಮು, ಕೋಲ್ಡ್‌ ಸ್ಟೋರೇಜ್‌, ಕೃಷಿ ತಂತ್ರಜ್ಞಾನ ಅಭಿವೃದ್ಧಿ ಮತ್ತು ಕೃಷಿ ಕ್ಷೇತ್ರಕ್ಕೆ ಅನುಕೂಲ ಕಲ್ಪಿಸುವ ಇತರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗೆ ಈ ನಿಧಿ ನೆರವಾಗಲಿದೆ.

ಈ ಯೋಜನೆ 2020-21ರಿಂದ 2029-30ರವರೆಗೆ  ಜಾರಿಯಲ್ಲಿರುತ್ತದೆ. ಈ ಯೋಜನೆಯಡಿ ಒಂದು ಲಕ್ಷ ಕೋಟಿ ರೂಪಾಯಿ ಸಾಲ ವಿತರಿಸಲಾಗುತ್ತದೆ.ಪ್ರಸ್ತುತ ವರ್ಷದಲ್ಲಿ 10 ಸಾವಿರ ಕೋಟಿ ಹಾಗೂ ಮುಂದಿನ ಮೂರು ವರ್ಷಗಳಲ್ಲಿ ತಲಾ 30 ಸಾವಿರ ಕೋಟಿ ರೂಪಾಯಿ ಒದಗಿಸಲಾಗುವುದು ಈ ಸಾಲಕ್ಕೆ ವಾರ್ಷಿಕ ಕೇವಲ ಶೇ. 3 ರಷ್ಟು ಬಡ್ಡಿ ವಿಧಿಸಲಾಗುತ್ತದೆ. 2 ಕೋಟಿ ರೂಪಾಯಿಯವರೆಗಿನ ಸಾಲ ಮೇಲಿನ ಬಡ್ಡಿಯಲ್ಲಿ ಶೇ 3 ರಷ್ಟು ಸರ್ಕಾರ ಭರಿಸಲಿದೆ. ಅರ್ಹ ಕಿರು, ಸಣ್ಣ, ಮಧ್ಯಮ, ಉದ್ದಿಮೆಗಳಿಗೆ ಸಾಲ ಖಾತ್ರಿ ನಿಧಿ ಟ್ರಸ್ಟ್ ಮೂಲಕ 2 ಕೋಟಿ ರೂಪಾಯಿಯವರೆಗೆ ಸಾಲದ ಬೆಂಬಲ ಕೂಡ ದೊರೆಯಲಿದೆ.ಇದನ್ನು ಬಳಕೆಮಾಡಿಕೊಂಡು ಶೈತ್ಯಾಗಾರ, ಗೋದಾಮು, ಬೇಳೆ ಮೌಲ್ಯವರ್ಧನೆಯಂತಹ ಚಟುವಟಿಕೆಯನ್ನು ಕೈಗೊಳ್ಳಬಹುದಾಗಿದೆ. ಕೊರೋನಾ ಕಾರಣ ಉದ್ಭವಿಸಿದ ಪರಿಸ್ಥಿತಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಘೋಷಣೆ ಮಾಡಿತ್ತು.

 

---------

ಕೃಷಿ ವಲಯದಲ್ಲಿ ಖಾಸಗಿ ಹೂಡಿಕೆಯನ್ನು ಉತ್ತೇಜಿಸಲು 1 ಲಕ್ಷ ಕೋಟಿ ರೂಪಾಯಿಗಳ ಕೃಷಿ ಮೂಲ ಸೌಕರ್ಯ ನಿಧಿ ದೊಡ್ಡವೇದಿಕೆಯಾಗಿದೆ. ಇದರಿಂದ ಕೃಷಿ ವಲಯದಲ್ಲಿ ಮಹತ್ವದ ಬದಲಾವಣೆಯಾಗಲಿದೆ.

ನರೇಂದ್ರಸಿಂಗ್ ತೋಮರ್

ಕೇಂದ್ರ ಕೃಷಿ ಸಚಿವ

Published On: 09 July 2020, 04:08 PM English Summary: Government decides to set up 1 lakh crore an agriculture infrastructure fund

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.