1..
ಕರ್ನಾಟಕ ಸರ್ಕಾರದ ಜಿಲ್ಲೆಗೊಂದು ಗೋಶಾಲೆ ಕಾರ್ಯಕ್ರಮದಡಿಯಲ್ಲಿ, ಧಾರವಾಡ ಜಿಲ್ಲೆ ಗರಗ ಹೋಬಳಿ ಮಾದನಬಾವಿ ಗ್ರಾಮದಲ್ಲಿ ಸರ್ಕಾರಿ ಗೋಶಾಲೆಯನ್ನು ಪ್ರಾರಂಭಿಸಲಾಗಿದೆ. ಸದರಿ ಗೋಶಾಲೆಗೆ ನಿರಾಶ್ರಿತ, ಅಶಕ್ತ, ನಿರ್ಗತಿಕ ಹಾಗೂ ಸಾಕಲು ಸಾಧ್ಯವಾಗದೇ ಇರುವ ಹಾಗೂ ನ್ಯಾಯಾಲಯದಿಂದ ವಶಪಡಿಸಿಕೊಂಡಿರುವ ದನ, ಎಮ್ಮೆಗಳನ್ನು ತಂದು ಬಿಡಬಹುದಾಗಿದೆ ಎಂದು ಉಪನಿರ್ದೇಶಕರು (ಆಡಳಿತ) ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಧಾರವಾಡ ಇವರು ತಿಳಿಸಿದ್ದಾರೆ.
*-*-*-*-*-*
2..
ಭಾರತೀಯ ಜನಸಂಖ್ಯೆಯ ಹೆಚ್ಚಿನ ವರ್ಗವು ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವಾಗ, ನಾವು ಈ ಹೊತ್ತಿನಲ್ಲಿ ರೈತರನ್ನು ಬ್ರಾಂಡ್ ಅಗತ್ಯವಿದೆ ಎಂದು ಕೃಷಿ ಜಾಗರಣದ ಎಡಿಟರ್ ಇನ್ ಚೀಫ್ ಎಂ ಸಿ ಡೊಮಿನಿಕ್ ಕರೆ ನೀಡಿದರು. ಒಡಿಶಾ ಯುನಿವರ್ಸಿಟಿ ಆಫ್ ಅಗ್ರಿಕಲ್ಚರ್ ಆಂಡ್ ಟೆಕ್ನಾಲಜಿ ಆಯೋಜಿಸಿರುವ ರೈತ ಮೇಳದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ದೇಶವು ಕೃಷಿ ಮಾಧ್ಯಮದ ಕೊರತೆಯನ್ನು ಹೊಂದಿತ್ತು. ಇದರಿಂದಾಗಿ ಕೃಷಿಕರ ಅನೇಕ ಸಮಸ್ಯೆಗಳನ್ನು ತೋರಿಸಲಾಗಿಲ್ಲ. ಈ ಕೊರಗನ್ನು ಈಡೇರಿಸುವುದಕ್ಕಾಗಿ ಕೃಷಿ ಜಾಗರಣ ಆರಂಭಗೊಂಡಿದೆ. ಕೃಷಿ ಕ್ಷೇತ್ರದಲ್ಲಿ 26 ವರ್ಷಗಳ ಅನುಭವದ ನಂತರ, ನಾವು ರೈತರ ಆಕಾಂಕ್ಷೆಗಳು ಮತ್ತು ವಿಧಾನವನ್ನು ಅರ್ಥಮಾಡಿಕೊಳ್ಳುವ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ ಮತ್ತು ಅದನ್ನು ನೀತಿ ನಿರೂಪಣೆ ಮತ್ತು ಸಂಶೋಧನೆಯಲ್ಲಿ ಸೇರಿಸಬೇಕು ಎಂದು ಅವರು ವೇಳೆ ಹೇಳಿದರು.
ಬರೋಬ್ಬರಿ 1.5 ಕೋಟಿ ಮೌಲ್ಯದ ಅನಧಿಕೃತ ರಸಗೊಬ್ಬರ ಮತ್ತು ಕೀಟನಾಶಕ ವಶ
*-*-*-*-*-*
3..
ಪ್ರಕೃತಿ, ಸಂಸ್ಕøತಿ ಮತ್ತು ಕೃಷಿಯನ್ನು ಮೇಳೈಸಿಕೊಂಡಿರುವ ಶಿವಮೊಗ್ಗದಲ್ಲಿ ವಿಕಾಸದ ಹೊಸ ಅಧ್ಯಾಯ ಆರಂಭವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು. ಶಿವಮೊಗ್ಗದಲ್ಲಿ ನೂತನವಾಗಿ ನಿರ್ಮಿಸಿರುವ ವಿಮಾನ ನಿಲ್ದಾಣ ಉದ್ಘಾಟಿಸಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ, ಶಿಲಾನ್ಯಾಸವನ್ನು ಇಂದು ನೆರವೇರಿಸಿ ಅವರು ಮಾತನಾಡಿದರು. ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಪ್ರಾರಂಭವಾಗುವ ಮೂಲಕ ಇಲ್ಲಿನ ಧೀರ್ಘ ಕಾಲದ ಬೇಡಿಕೆ ಈಡೇರಿದೆ. ವಿಮಾನ ನಿಲ್ದಾಣ ಅತ್ಯಂತ ಸುಂದರವಾಗಿ ನಿರ್ಮಾಣಗೊಂಡಿದ್ದು ಇದು ಜಿಲ್ಲೆಯ ಜನರ ಕನಸಿನ ಅಭಿಯಾನವಾಗಿದೆ. ರೈಲ್ವೇ-ಏರ್ವೇ-ಹೈವೇ ಮತ್ತು ಡಿಜಿಟಲ್ ಸಂಪರ್ಕದಲ್ಲಿ ದಾಪುಗಾಲು ಇರಿಸಲಾಗುತ್ತಿದೆ ಎಂದು ಅವರು ಹೇಳಿದರು.
*-*-*-*-*-*
4..
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಿನ್ನೆ ದೇಶದ ಅನ್ನದಾತರಿಗೆ ಗುಡ್ನ್ಯೂಸ್ ನೀಡಿದ್ದಾರೆ. ಹೌದು ಬೆಳಗಾವಿಯ ಮಾಲಿನಿ ಸಿಟಿಯಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಪಿಎಂ ಮೋದಿ ಪಿಎಂ ಕಿಸಾನ್ ಯೋಜನೆಯ 13ನೇ ಕಂತಿ ಹಣಕ್ಕೆ ಚಾಲನೆ ನೀಡಿದರು. ರಾಜ್ಯದ 49 ಲಕ್ಷ ರೈತರು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ಆರ್ಥಕ ಸಹಾಯದ ಪ್ರಯೋಜನ ಪಡೆಯಲಿದ್ದಾರೆ. ಈ ಯೋಜನೆಯ ಮೂಲಕ ಅರ್ಹ ಫಲಾನುಭವಿ ರೈತರಿಗೆ ತಲಾ 2000 ರೂಗಳನ್ನು DBT ಮೂಲಕ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ. ಸದ್ಯ ಈ ಕಂತಿನಲ್ಲಿ ರೈತರ ಖಾತೆಗಳಿಗೆ 16,800 ಕೋಟಿ ರೂ. ಮೊತ್ತವನ್ನು ಜಮಾ ಮಾಡಲಾಗಿದೆ.
*-*-*-*-*-*
7th pay commission 7ನೇ ವೇತನ ಆಯೋಗ ಅನುಷ್ಠಾನಕ್ಕೆ ಆಗ್ರಹಿಸಿ ಸರ್ಕಾರಿ ನೌಕರರಿಂದ ಮಾ. 1ರಿಂದ ಕೆಲಸಕ್ಕೆ ಗೈರು!
5..
ಕೊಡಗು ಜಿಲ್ಲೆಯ ಸಹಕಾರ ಸಂಘಗಳ ಅಧ್ಯಕ್ಷರುಗಳಿಗೆ ಆದಾಯ ತೆರಿಗೆ, ಜಿಎಸ್ಟಿ ಮತ್ತು ಸಹಕಾರ ಸಂಘಗಳ ಚುನಾವಣೆ ಕುರಿತು ರಾಜ್ಯಮಟ್ಟದ ವಿಶೇಷ ಶಿಕ್ಷಣ ಕಾರ್ಯಕ್ರಮವನ್ನ ಆಯೋಜಿಸಲಾಗಿದೆ.ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಇವರ ಸಂಯುಕ್ತಾಶ್ರಯದಲ್ಲಿ, ಈ ಕಾರ್ಯಕ್ರಮ ನಡೆಯುತ್ತಿದ್ದು, ಫೆಬ್ರವರಿ, 28 ರಂದು ನಗರದ ಮಯೂರ ವ್ಯಾಲಿ ವ್ಯೂ ಹೋಟೆಲ್ನಲ್ಲಿ ನಡೆಯಲಿದೆ. ಹಿರಿಯ ಸಹಕಾರಿಗಳು ಹಾಗೂ ಪದ್ಮಶ್ರೀ ಪ್ರಶಸ್ತಿ ಭಾಜನರಾದ ರಾಣಿ ಮಾಚಯ್ಯ ಅವರು ಈ ಕಾರ್ಯಕ್ರಮವನ್ನ ಉದ್ಘಾಟಿಸಲಿದ್ದಾರೆ.
*-*-*-*-*-*
6..
ಕೃಷಿ ಇಲಾಖೆಯಿಂದ 2022-23ನೇ ಸಾಲಿನ ಕೃಷಿ ಸಂಸ್ಕರಣೆ ಯೋಜನೆಯಡಿಯಲ್ಲಿ, ಕೃಷಿ ಉತ್ಪನ್ನಗಳ ಸಂಸ್ಕರಣಾ ಸಲಕರಣೆಗಳಿಗಾಗಿ ಬಳ್ಳಾರಿ, ಕುರುಗೋಡು ತಾಲೂಕು ವ್ಯಾಪ್ತಿಯ ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಕೃಷಿ ಸಂಸ್ಕರಣಾ ಯೋಜನೆಯಡಿಯಲ್ಲಿ ಹಿಟ್ಟಿನ ಗಿರಣಿ, ಖಾರ ಕುಟ್ಟುವ ಯಂತ್ರ, ಶ್ಯಾವಿಗೆ ಯಂತ್ರ, ರಾಗಿ ಕ್ಲೀನಿಂಗ್ ಮಿಲ್, ಕಬ್ಬಿನಹಾಲು ತೆಗೆಯುವ ಯಂತ್ರ, ಮೋಟಾರು ಚಾಲಿತ ಸಣ್ಣ ಎಣ್ಣೆ ಗಾಣ ಸೇರಿದಂತೆ ಇತರೆ ಉಪಕರಣಗಳನ್ನು ಸಹಾಯಧನ ರೂಪದಲ್ಲಿ ವಿತರಣೆ ಮಾಡಲಾಗುವುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ.90 ಮತ್ತು ಸಾಮಾನ್ಯ ವರ್ಗದವರಿಗೆ ಶೇ.50 ರಷ್ಟು ಸಹಾಯಧನ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಸಂಪರ್ಕಿಸಬಹುದು ಎಂದು ಸಹಾಯಕ ಕೃಷಿ ನಿರ್ದೇಶಕ ದಯಾನಂದ ಅವರು ತಿಳಿಸಿದ್ದಾರೆ.
*-*-*-*-*-*
Share your comments