1. ಸುದ್ದಿಗಳು

ಗುಡ್‌ನ್ಯೂಸ್‌: ಕೇಂದ್ರ ಸರ್ಕಾರದಿಂದ ಒಟ್ಟು 10 ಲಕ್ಷ ಉದ್ಯೋಗ ಭರ್ತಿಗೆ ನಿರ್ಧಾರ!

Kalmesh T
Kalmesh T
Goodnews: Central government has decided to fill 10 lakh jobs!

ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್, ಕೇಂದ್ರದ ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಸಂಸತ್ ಮುಂಗಾರು ಅಧಿವೇಶನದಲ್ಲಿ ಕೇಂದ್ರ ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿರಿ: ಬ್ರೇಕಿಂಗ್‌: ದಿನಬಳಕೆಯ ಒಟ್ಟು 14 ಅಗತ್ಯ ವಸ್ತುಗಳ ಮೇಲಿನ ತೆರಿಗೆ ಹಿಂಪಡೆದ ಕೇಂದ್ರ; ಸಚಿವೆ ನಿರ್ಮಲಾ ಸೀತಾರಾಮನ್‌ ಟ್ವೀಟ್‌!

ಬುಧವಾರ ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ನೀಡಿದ ಮಾಹಿತಿಯ ಪ್ರಕಾರ ಮಾರ್ಚ್ 1, 2021 ಕೇಂದ್ರದಲ್ಲಿ ವಿವಿಧ ಇಲಾಖೆಗಳಲ್ಲಿ ಸುಮಾರು 9.79 ಲಕ್ಷ ಹುದ್ದೆಗಳು ಖಾಲಿ ಇದ್ದು, ಒಂದೂವರೆ ವರ್ಷದಲ್ಲಿ 10 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಮಂಜೂರಾದ ಹುದ್ದೆಗಳ ಒಟ್ಟು ಸಂಖ್ಯೆ 4035 ಲಕ್ಷ ಎಂದು ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ವಿವರವಾದ ಮಾಹಿತಿ ನೀಡಿದರು.

ವೆಚ್ಚದ ಇಲಾಖೆಯ ಪಾವತಿ ಸಂಶೋಧನಾ ಘಟಕದ ವಾರ್ಷಿಕ ವರದಿಯ ಪ್ರಕಾರ, ಕಳೆದ ವರ್ಷ ಮಾರ್ಚ್ ವರೆಗೆ ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳ ಆದಿಯಲ್ಲಿ 40,35,202 ಮಂಜೂರಾದ ಹುದ್ದೆಗಳಿವೆ ಪ್ರಸ್ತುತ ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ 30,55,876 ಉದ್ಯೋಗಿಗಳಿದ್ದಾರೆ.

PM Kisan: ರೈತರಿಗೆ ಬರೊಬ್ಬರಿ ₹21,924 ಕೋಟಿ ವರ್ಗಾವಣೆ!

ಕೇಂದ್ರ ಸರ್ಕಾರದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿ ಆಯಾ ಸಚಿವಾಲಯಗಳು ಮತ್ತು ಇಲಾಖೆಗಳ ಜವಾಬ್ದಾರಿಯಾಗಿದೆ.

ಇದು ನಿಯಮಿತ ಪ್ರಕ್ರಿಯೆ ಮುಂದಿನ ಒಂದೂವರೆ ವರ್ಷಗಳಲ್ಲಿ ಹಲವು ಇಲಾಖೆಗಳು ಮತ್ತು ಸಚಿವಾಲಯಗಳಲ್ಲಿ ಒಂದು ಮಿಲಿಯನ್ ಉದ್ಯೋಗಿಗಳನ್ನು ಮಿಷನ್ ಮೋಡ್ ಅಡಿಯಲ್ಲಿ ನೇಮಿಸಿಕೊಳ್ಳಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ ಎಂದು ಜಿತೇಂದ್ರ ಸಿಂಗ್‌ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಡಿಜಿಟಲೀಕರಣ ಅಥವಾ ಇ-ಆಫೀಸ್ ವ್ಯವಸ್ಥೆ ಆರಂಭಿಸಲಾಗಿದೆ ಎಂದು ಸರ್ಕಾರ ಬುಧವಾರ ಲೋಕಸಭೆಗೆ ಮಾಹಿತಿ ನೀಡಿದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ, ಹಣಕಾಸು ಸಚಿವಾಲಯ, ನ್ಯಾಯಾಂಗ ಇಲಾಖೆ,

ಗುಡ್‌ನ್ಯೂಸ್‌: ರೈತ ಕುಟುಂಬಗಳ ವಾರ್ಷಿಕ ಆದಾಯ ₹10,218ಕ್ಕೆ ಏರಿಕೆ! NSS ಸಮೀಕ್ಷಾ ವರದಿ..

ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯ ಮತ್ತು ಆಡಳಿತ ಸುಧಾರಣೆಗಳು ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆ ಸೇರಿದಂತೆ ಹಲವು ಇಲಾಖೆಗಳು ನಾಗರಿಕರು ತಮ್ಮ ಅರ್ಜಿಗಳು ಮತ್ತು ದೂರುಗಳನ್ನು ಸಲ್ಲಿಸಲು ಆನ್‌ಲೈನ್ ಪೋರ್ಟಲ್‌ಗಳನ್ನು ಒದಗಿಸಿದೆ ಎಂದು ಸಿಂಗ್ ಮಾಹಿತಿ ನೀಡಿದರು.

ಡಿಜಿಟಲ್ ಸೆಕ್ರೆಟರಿಯೇಟ್ ಆರಿಯಲ್ಲಿ ಭಾರತ ಸರ್ಕಾರವು ಸಚಿವಾಲಯಗಳ ಎಲ್ಲಾ ಇಲಾಖೆಗಳಲ್ಲಿ ಇ ಆತೀಸ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಕೇಂದ್ರೀಯ ನೋಂದಾವಣೆ ಕಾರ್ಯವನ್ನು ಸಚಿವಾಲಯಗಳಲ್ಲಿ ಡಿಜಿಟಲೀಕರಣಗೊಳಿಸಲಾಗಿದೆ ಎಂದು ಸಿಂಗ್ ಹೇಳಿದರು.

Published On: 22 July 2022, 10:29 AM English Summary: Goodnews: Central government has decided to fill 10 lakh jobs!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.