1. ಸುದ್ದಿಗಳು

ಯುವಜನತೆಗೆ ಸಿಹಿಸುದ್ದಿ: ಬರೋಬ್ಬರಿ 2.5 ಲಕ್ಷ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ: ಸಚಿವ ಪ್ರಿಯಾಂಕ್‌ ಖರ್ಗೆ

Kalmesh T
Kalmesh T
Good news for youth: Action to fill up 2.5 lakh vacancies: Minister Priyank Kharge

Action to fill up 2.5 lakh vacancies: ರಾಜ್ಯದಲ್ಲಿ ಖಾಲಿ ಇರುವ ಸುಮಾರು 2.5 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

ಈಗಾಗಲೇ ಸಾಕಷ್ಟು ವಿದ್ಯಾಬ್ಯಾಸ ಮಾಡಿಯೂ ಉದ್ಯೋಗವಿಲ್ಲದೇ ಇರುವ ಯುವಜನತೆಗೆ ಇಲ್ಲಿದೆ ಸಿಹಿ ಸುದ್ದಿ.

ಶೀಘ್ರದಲ್ಲೇ ಸರಿ ಸುಮಾರು 2.5 ಲಕ್ಷ ಖಾಲಿ ಇರುವ ಹುದ್ದೆಗಳಿಗೆ ಭರ್ತಿ ಪ್ರಕ್ರಿಯೆ ಆರಂಭ ಮಾಡಲಾಗುವುದು ಎಂದು ಸಚಿಚ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

ನಿರುದ್ಯೋಗಿ ಯುವಜನತೆಗೆ ಹಣಕಾಸು ನೀಡಿದರೆ ಅಷ್ಟೇ ಸಾಲದು, ಅದರೊಟ್ಟಿಗೆ ನೀರುದ್ಯೋಗ ಹೋಗಲಾಡಿಸುವ ನಿಟ್ಟಿನಲ್ಲಿ ಕೆಸಲವನ್ನು ಮಾಡಬೇಕು.

ಆದ್ದರಿಂದ ಸದ್ಯಕ್ಕೆ ರಾಜ್ಯದಲ್ಲಿ ಖಾಲಿಯಿರುವ ಸುಮಾರು 2.5 ಲಕ್ಷ ಉದ್ಯೋಗಗಳನ್ನು ಭರ್ತಿ ಮಾಡುತ್ತೇವೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ ಒಟ್ಟಾರೆ 2.5 ಲಕ್ಷ ಉದ್ಯೋಗಗಳು ಖಾಲಿ ಇರುವ ಮಾಹಿತಿ ಇದೆ. ನಮ್ಮ ಸರ್ಕಾರದಿಂದ ಕೇವಲ ನಿರುದ್ಯೋಗಿ ಯುವಕ, ಯುವತಿಯರಿಗೆ ಭತ್ಯೆ ನೀಡುವುದಿಲ್ಲ.

ಅದರೊಂದಿಗೆ ಉದ್ಯೋಗ ಸೃಷ್ಟಿ ಮಾಡುವ ನಿಟ್ಟಿನಲ್ಲಿ ಎಲ್ಲ 2.5 ಲಕ್ಷ ಉದ್ಯೋಗಗಳನ್ನು ಭರ್ತಿ ಮಾಡುತ್ತೇವೆ ಎಂದು ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ.

ಈ ನಿಟ್ಟಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಿರುದ್ಯೋಗವನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಲು ಉದ್ಯೋಗ ಸೃಷ್ಟಿ ಆಗಬೇಕು. ಆದ್ದರಿಂದ ಈಗ ಖಾಲಿ ಇರುವಂತಹ 2.5 ಲಕ್ಷ ಉದ್ಯೋಗಗಳನ್ನು ಭರ್ತಿ ಮಾಡುತ್ತೇವೆ ಎಂದರು.

ಯಾವುದೇ ಸ್ಕೀಮ್ ಅಥವಾ ಉಚಿತ ಯೋಜನೆ ಜೀವನಪೂರ್ತಿಯಾಗಿ ನೀಡುವುದಕ್ಕೆ ಸಾಧ್ಯವಾಗುವುದಿಲ್ಲ. ಆದ್ದರಿಂದ ಉದ್ಯೋಗ ಭರ್ತಿ ಮೂಲಕ ನಿರುದ್ಯೋಗ ನಿರ್ಮೂಲನೆ ಮಾಡುತ್ತೇವೆ ಎಂದರು.

ಕಾಂಗ್ರೆಸ್‌ 5 ಗ್ಯಾರಂಟಿಗಳಿಗೆ ಷರತ್ತುಗಳು ಅನ್ವಯ:

ಈ ಮೂಲಕ ರಾಜ್ಯದಲ್ಲಿ ಚುನಾವಣೆಗೂ ಮುನ್ನ ಕಾಂಗ್ರೆಸ್‌ ಘೋಷಣೆ ಮಾಡಿದ್ದ 5 ಗ್ಯಾರಂಟಿಗಳು ಹಾಗೂ ಭರವಸೆಗಳಿಗೆ ಕೆಲವು ಷರತ್ತುಗಳು ಅನ್ವಯವಾಗಲಿವೆ ಎಂದು ಪರೋಕ್ಷವಾಗಿ ಹೇಳಿದರು.

ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (chief minister Siddaramaiah) ಅವರು ಯೋಜನೆಗಳಿಗೆ ತಾತ್ವಿಕ ಒಪ್ಪಿಗೆ ನೀಡಿದ್ದಾರೆ. ಮುಂದಿನ ಕ್ಯಾಬಿನೆಟ್ ನಲ್ಲಿ ಅಧಿಕೃತ ಆದೇಶ ಆಗಬಹುದು ಎಂದು ಹೇಳಿದರು.   

ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕಾ ತರಬೇತಿಗಾಗಿ ಅರ್ಜಿ ಆಹ್ವಾನ

Published On: 23 May 2023, 11:47 AM English Summary: Good news for youth: Action to fill up 2.5 lakh vacancies: Minister Priyank Kharge

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.