1. ಸುದ್ದಿಗಳು

ಅಡಿಕೆ ಬೆಳೆಗಾರರಿಗೆ ಸಿಹಿಸುದ್ದಿ: ಅಡಿಕೆಯಲ್ಲಿ ಹಾನಿಕಾರಕ ಅಂಶವಿಲ್ಲ; ಎಂ.ಎಸ್. ರಾಮಯ್ಯ ಇನ್ಸ್‌ಟಿಟ್ಯೂಟ್‌ ವರದಿ

Hitesh
Hitesh
Good news for groundnut growers: Nuts are free of harmful substances; M.S. Ramaiah Institute Report

ಅಡಿಕೆ ಬೆಳೆಗಾರರಿಗೆ ಎಂ.ಎಸ್. ರಾಮಯ್ಯ ಇನ್‌ಸ್ಟಿಟ್ಯೂಟ್‌ನ ವಿಜ್ಞಾನಿಗಳು ನೀಡಿರುವ ವರದಿ ತುಸು ನಿರಾಳತೆಯನ್ನು ನೀಡಿದೆ.

Bbc ಬಿಬಿಸಿಯ ನವದೆಹಲಿ ಕಚೇರಿಯ ಮೇಲೆ IT ದಾಳಿ!

ಅಡಿಕೆ ಹಾನಿಕಾರಕ ಎಂಬ ವದಂತಿಗಳು ಹೆಚ್ಚಾದ ಬೆನ್ನಲ್ಲೇ ಅಡಿಕೆ ಬೆಳೆಗಾರರು ಇನ್ನಿಲ್ಲದ ಸಂಕಷ್ಟವನ್ನು ಎದುರಿಸಿದ್ದರು. 

ಅಡಿಕೆ ಹಾನಿಕರವಲ್ಲ, ಔಷಧೀಯ ಗುಣವಿರುವ ಸಾಂಪ್ರದಾಯಿಕ ಬೆಳೆ ಎಂದು ಎಂ.ಎಸ್. ರಾಮಯ್ಯ ಇನ್‌ಸ್ಟಿಟ್ಯೂಟ್‌ನ ವಿಜ್ಞಾನಿಗಳು ಸಂಶೋಧನಾ ವರದಿ ನೀಡಿದ್ದಾರೆ. ಈ ವರದಿ ಇದೀಗ ಅಡಿಕೆ ಬೆಳೆಗಾರರಲ್ಲಿ ನಿರಾಳತೆ ಮೂಡಿಸಿದೆ.

ಈ ವರದಿಯನ್ನು ಶೀಘ್ರ ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾಗುವುದು ಎಂದು ಅಡಿಕೆ ಕಾರ್ಯಪಡೆ ಅಧ್ಯಕ್ಷರೂ ಆಗಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಿಳಿಸಿದ್ದಾರೆ.  

ಉತ್ಪನ್ನಗಳ ಮಾರುಕಟ್ಟೆಯ ಇಂದಿನ ದರ ವಿವರ.. ತರಕಾರಿಯಿಂದ ಧಾನ್ಯದ ವರೆಗೆ ಇಲ್ಲಿದೆ ಮಾಹಿತಿ

ಈ ಕುರಿತು ವಿಧಾನ ಪರಿಷತ್ತಿನಲ್ಲಿ ಬಿಜೆಪಿಯ ಪ್ರತಾಪ್‌ಸಿಂಹ ನಾಯಕ್‌ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಹಿಂದಿನ ಕೇಂದ್ರ ಸರ್ಕಾರ, ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎಂದು ಸುಪ್ರೀಂಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿದ್ದರಿಂದ ಅಡಿಕೆ ಬೆಳೆ ಮೇಲೆ ನಿಷೇಧದ ತೂಗುಗತ್ತಿ ಇತ್ತು.

ಅದಕ್ಕಾಗಿ ಅಡಿಕೆ ಕಾರ್ಯಪಡೆಯಿಂದಲೇ ವೈಜ್ಞಾನಿಕ ಸಂಶೋಧನೆ ನಡೆಸಲು ರಾಮಯ್ಯ ಇನ್‌ಸ್ಟಿಟ್ಯೂಟ್‌ಗೆ ವಹಿಸಲಾಗಿತ್ತು. ಈಗ ವರದಿ ಬಂದಿದೆ ಎಂದು ಹೇಳಿದರು.  

ಅಡಿಕೆ ಕ್ಷೇತ್ರ ವ್ಯಾಪ್ತಿ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಈಗಾಗಲೇ ರಾಜ್ಯದಲ್ಲಿ 6.11 ಲಕ್ಷ ಹೆಕ್ಟೇರ್ ಬೆಳೆ ಕ್ಷೇತ್ರವಿದೆ.

ಹೊಸ ದಾಖಲೆ: ಬಾಹ್ಯಾಕಾಶಕ್ಕೆ ಹಾರಿಲಿದ್ದಾರೆ ಅರಬ್‌ನ ಮೊದಲ ಮಹಿಳೆ! 

ಅಡಿಕೆ ಭವಿಷ್ಯವೂ ಗುಟ್ಕಾ ಕಂಪನಿಗಳ ಮೇಲೆ ನಿಂತಿದೆ. ದರ ಕುಸಿದರೆ ರೈತರು ತೀವ್ರ ಸಂಕಷ್ಟ ಅನುಭವಿಸುತ್ತಾರೆ. ಹಾಗಾಗಿ, ಏಕ ಬೆಳೆ ಪದ್ಧತಿ ಸರಿಯಲ್ಲ ಎಂದು ಮನವರಿಕೆ ಮಾಡಬೇಕಿದೆ.

ಉದ್ಯೋಗ ಖಾತ್ರಿಯಲ್ಲಿ ಅಡಿಕೆ ಬೆಳೆಗೆ ಸಹಾಯಧನ, ಪ್ರೋತ್ಸಾಹ ಬೇಡ ಎಂದು ತೋಟಗಾರಿಕಾ ಸಚಿವರನ್ನು ಕೋರಲಾಗಿದೆ ಎಂದು ತಿಳಿಸಿದರು.  

ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ, ಹಾಸನ, ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳ 42,504 ಹೆಕ್ಟೇರ್‌ನಲ್ಲಿ ಎಲೆಚುಕ್ಕಿ ರೋಗ ಕಾಣಿಸಿಕೊಂಡಿದೆ.

ರೋಗ ನಿಯಂತ್ರಣಕ್ಕೆ ಸರ್ಕಾರ ಕ್ರಮ ವಹಿಸುತ್ತಿದೆ. 17,267 ರೈತರಿಗೆ ಔಷಧ ಖರೀದಿಗೆ ಸಹಾಯ ಮಾಡಲಾಗಿದೆ. ಹೆಕ್ಟೇರ್‌ಗೆ  15,000 ಸಾವಿರ ಸಹಾಯಧನ ನೀಡಲಾಗುತ್ತಿದೆ ಎಂದಿದ್ದಾರೆ. 

ChatGPT ಕೋಟ್ಯಾಂತರ ಜನರ ಉದ್ಯೋಗಕ್ಕೆ ಕುತ್ತಾಗಲಿದೆಯೇ ChatGPT, BARD ಎಂಬ ಆವಿಷ್ಕಾರಗಳು ?!

ಅಡಿಕೆ ನಿಷೇಧವೆಂಬ ತೂಗುಗತ್ತಿ

ಅಡಿಕೆ ನಿಷೇಧವೆಂಬ ತೂಗುಗತ್ತಿ ಅಡಿಕೆ ಬೆಳೆಗಾರರನ್ನು ಸದಾ ಕಾಡುತ್ತಲ್ಲೇ ಇದೆ.   ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಅಡಿಕೆ ನಿಷೇಧವೆಂಬ ಆದೇಶ ಈವರೆಗೂ ಊರ್ಜಿತದಲ್ಲಿರುವ ಜೊತೆಗೇ ಮತ್ತೆ ಅಡಿಕೆ ವಿಷಕಾರಿ ಎನ್ನುವ ವಿಚಾರ ಚರ್ಚೆಯಲ್ಲಿದೆ.

ಕೆಲವು ದಿನಗಳ ಹಿಂದಷ್ಟೇ ಜಾರ್ಖಂಡ್  ಸಂಸದ ನಿಶಿಕಾಂತ್ (MP Nishikant ) ಅಡಿಕೆ ವಿಷಕಾರಿಯಾಗಿದ್ದು, ಅಡಿಕೆಯನ್ನು ನಿಷೇಧ ಮಾಡಬೇಕೆಂದು ಕೇಂದ್ರಕ್ಕೆ ಮನವಿ ಮಾಡಿದ್ದರು.  

ಕರ್ನಾಟಕದ  ಕರಾವಳಿ  ಹಾಗೂ ಶಿವಮೊಗ್ಗ ಜಿಲ್ಲೆಯ ಕೃಷಿಕರ ಅತ್ಯಂತ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ನಿಷೇಧದ ತೂಗುಗತ್ತಿಯಿಂದ ತಪ್ಪಿಸಿಕೊಂಡಿಲ್ಲ.

ಕರ್ನಾಟಕದಲ್ಲಿ ಅದರಲ್ಲೂ ದಕ್ಷಿಣಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಅಡಿಕೆಯನ್ನು ಬೆಳೆಯುವುದು ವಾಡಿಕೆಯಲ್ಲಿದೆ.

ಲಕ್ಷಾಂತರ ಕುಟುಂಬಗಳು ಇದೇ ಬೆಳೆಯನ್ನು ನಂಬಿ ತಮ್ಮ ಜೀವನವನ್ನೂ ಸಾಗಿಸುತ್ತಿದೆ.

ತಂಬಾಕು ರಹಿತ ಅಡಿಕೆಯ ಬಳಕೆಗೆ ಅವಕಾಶ

ಈ ಹಿಂದೆ ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದ ಯುಪಿಎ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 2012ರಲ್ಲಿ ಲೋಕಸಭೆಯಲ್ಲಿ  ಅಡಿಕೆಯನ್ನು ನಿಷೇಧಿಸುವ ಪ್ರಸ್ತಾವನೆಯನ್ನು ಸಲ್ಲಿಸಿತ್ತು.

ಇಲಾಖೆಯ ವರದಿ ಪ್ರಕಾರ ಅಡಿಕೆಯಲ್ಲಿ ತಯಾರಿಸುವಂತಹ ತಂಬಾಕು ಪದಾರ್ಥಗಳನ್ನು ತಿನ್ನುವುದರಿಂದ ಓರಲ್ ಕ್ಯಾನ್ಸರ್ ಆಗುತ್ತಿದೆ ಎನ್ನುವ ಅಂಶವನ್ನೂ ಉಲ್ಲೇಖಿಸಲಾಗಿತ್ತು. ಹೀಗಾಗಿ, ದೇಶದಾದ್ಯಂತ ಅಡಿಕೆ ನಿಷೇಧಿಸುವ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿತ್ತು.

ಆದರೆ ಇದಕ್ಕೆ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತಂಬಾಕು ರಹಿತ ಅಡಿಕೆಯ ಬಳಕೆಗೆ ಅವಕಾಶವನ್ನೂ ನೀಡಲಾಗಿತ್ತು.

ಏರೋ ಇಂಡಿಯಾ ಹೊಸ ದಾಖಲೆ: ಪ್ರಧಾನಿ ನರೇಂದ್ರ ಮೋದಿ ಏನಂದ್ರು ಗೊತ್ತಾ ?

ಗೊಂದಲದಲ್ಲಿ ಅಡಿಕೆ ಬೆಳೆಗಾರರು

ಇದೀಗ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಎನ್.ಡಿ.ಎ ಸರ್ಕಾರವೂ ಸಹ  ಯುಪಿಎ ಸರಕಾರದ ಪ್ರಸ್ತಾವನೆಯನ್ನೇ ಮತ್ತೆ ಲೋಕಸಭೆಯ ಮುಂದಿಟ್ಟಿದೆ. ಈ ಪ್ರಕ್ರಿಯೆಗಳು ಚಾಲ್ತಿರುವಾಗಲೇ ಜಾರ್ಖಂಡ್ ಸಂಸದ ನಿಶಿಕಾಂತ್ ಅಡಿಕೆಯಲ್ಲಿ ವಿಷಕಾರಿ ಅಂಶವಿದ್ದು,

ಇದು ಆರೋಗ್ಯಕ್ಕೆ ಹಾನಿಕಾರಕ ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿರುವುದು ಅಡಿಕೆ ಬೆಳೆಗಾರರನ್ನು ಗೊಂದಲಕ್ಕೀಡು ಮಾಡಿದೆ.  

ಸದಾ ಅಡಿಕೆ  ನಿಷೇಧ ಎನ್ನುವ ಗುಮ್ಮ ಅಡಿಕೆ ಬೆಳೆಗಾರರನ್ನು ಕಾಡುತ್ತಿದ್ದು, ಇದಕ್ಕೆ ಶಾಶ್ವತ ಅಂತ್ಯ ಹಾಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕೆಂದು ಅಡಿಕೆ ಬೆಳೆಗಾರರ ಸಂಘವೂ ಒತ್ತಾಯಿಸಲಾರಂಭಿಸಿದೆ.

ಅಡಿಕೆಗೆ ಬಳಸುವ ರಾಸಾಯನಿಕ ಅಂಶಗಳಿಂದ ಹಾನಿ    

ಅಡಿಕೆ ಬೆಳೆಯಿಂದ ಹಿಡಿದು, ಅಡಿಕೆ ಸಂಸ್ಕರಿಸುವ ಹಂತದಲ್ಲೂ ಅಡಿಕೆಗೆ ರಾಸಾಯನಿಕಗಳನ್ನು ಬಳಸಲಾಗುತ್ತಿದೆ ಎನ್ನುವುದು ಆಗಾಗ ಚರ್ಚೆಯ ಮುನ್ನೆಲೆಗೆ ಬರುತ್ತಲೇ ಇದೆ.  

ಅಡಿಕೆ ಮರದಲ್ಲಿ ಹಿಂಗಾರ ಉದುರಿ ಬೀಳದಂತೆ ಮೈಲುತುತ್ತು (ಕೊಫರ್ ಸಲ್ಫೇಟ್ ) ಸೇರಿದಂತೆ ವಿವಿಧ ರೀತಿಯ ರಾಸಾಯನಿಕಗಳನ್ನು ಅಡಿಕೆಗೆ ಬೆಳೆಯುವ ಮೊದಲೇ  ಸೇರಿಸಲಾಗುತ್ತದೆ.

ಅಡಿಕೆಯನ್ನು ಮಾರಾಟ ಮಾಡುವ ಹಂತದಲ್ಲಿ ಅಡಿಕೆಯನ್ನು ಸಂಸ್ಕರಿಸುವ ಗಾರ್ಬಲ್ ಗಳಲ್ಲಿ ಅಡಿಕೆಯನ್ನು ಪಾಲಿಶ್ ಮಾಡುವುದಕ್ಕಾಗಿ ಸಲ್ಫರ್ ಎಂಬ ಅಂಶವನ್ನೂ ಬಳಸಲಾಗುತ್ತದೆ.

ಅಲ್ಲದೆ ಅಡಿಕೆಯನ್ನು ಶೇಖರಿಸಿಡುವ ಸಂದರ್ಭದಲ್ಲಿ ಅಡಿಕೆಗೆ ಹುಳುಗಳ ಕಾಟ ತಡೆಯಲು ಇನ್ನೊಂದು ರೀತಿಯ ರಾಸಾಯನಿಕ ಇದರಲ್ಲಿ ಸೇರಿಸಲಾಗುತ್ತದೆ.  

ಆ ಬಳಿಕ ಅಡಿಕೆಯನ್ನು ಗುಟ್ಕಾವಾಗಿ ಪರಿವರ್ತಿಸುವ ಸಂದರ್ಭದಲ್ಲೂ ಅಡಿಕೆಗೆ ರಾಸಾಯನಿಕಗಳನ್ನು ಮಿಶ್ರಣ ಮಾಡಲಾಗುತ್ತದೆ.

 ಅಡಿಕೆ ಕ್ಯಾನ್ಸರ್ ಕಾರಕವಾಗಲು ಅಡಿಕೆ ಸಂಗ್ರಹಕಾರರೇ ಕಾರಣ ಎನ್ನುವ ಆರೋಪವೂ ಇದೆ.

ಹೆಚ್ಚಿನ ಬೆಲೆಯ ಆಸೆಗಾಗಿ ರಾಸಾಯನಿಕಗಳನ್ನು ಬಳಸಿ ಅಡಿಕೆಯನ್ನ ದಾಸ್ತಾನು ಇಟ್ಟ ಪರಿಣಾಮವೇ ಅಡಿಕೆ ವಿಷಯುಕ್ತವಾಗಲು ಕಾರಣ ಎಂಬ ಆರೋಪವೂ ಇದೆ. 

Traffic Fine ವಾಹನ ಸವಾರರಿಗೆ ಸಿಹಿಸುದ್ದಿ: ಟ್ರಾಫಿಕ್‌ ಫೈನ್‌ ಡಿಸ್ಕೌಂಟ್‌ ಅವಧಿ ವಿಸ್ತರಣಿ!  

Published On: 15 February 2023, 10:50 AM English Summary: Good news for groundnut growers: Nuts are free of harmful substances; M.S. Ramaiah Institute Report

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.