1. ಸುದ್ದಿಗಳು

ಸರ್ಕಾರಿ ನೌಕರರಿಗೆ ಮತ್ತೆ ಸಿಹಿಸುದ್ದಿ: ಸಿ, ಡಿ ದರ್ಜಿ ನೌಕರರ ವರ್ಗಾವಣೆ ನಿಯಮದಲ್ಲಿ ಬದಲಾವಣೆ; ಪತಿ, ಪತ್ನಿ ಪ್ರಕರಣ ನಿಯಮ ಸಡಿಲ!

Hitesh
Hitesh
Good News for Govt Employees: Change in Transfer Rules for C, D Tailor Employees; Husband and wife case rules are loose!

ರಾಜ್ಯ ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗ ರಚನೆ ಮಾಡುವ ಮೂಲಕ ಸಿಹಿ ಸುದ್ದಿಯೊಂದನ್ನು ನೀಡಿದ್ದ ರಾಜ್ಯ ಸರ್ಕಾರವು ಇದೀಗ ಮತ್ತೊಂದು ಸಿಹಿಸುದ್ದಿಯನ್ನು ನೀಡಿದೆ.

13.5 ಲಕ್ಷ ಸರ್ಕಾರಿ ನೌಕರರಿಗೆ ಸಿಹಿಸುದ್ದಿ: 7ನೇ ವೇತನ ಆಯೋಗ ರಚನೆಗೆ ಅಸ್ತು!

ಈಚೆಗೆ ರಾಜ್ಯದ ಸರ್ಕಾರವು ನೌಕರರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ  7ನೇ ವೇತನ (pay commission) ಆಯೋಗ ರಚನೆ ಮಾಡುವುದಾಗಿ ತಿಳಿಸಿತ್ತು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ವಿಷಯವನ್ನು ತಿಳಿಸಿದ್ದರು.

ಇದೀಗ ಬಹುದಿನಗಳ ಕಾಲ ಕಗ್ಗಂಟಾಗಿದ್ದ ಸರ್ಕಾರದ ವಿವಿಧ ಇಲಾಖೆಗಳ ಸಿ ಮತ್ತು ಡಿ ಶ್ರೇಣಿ ನೌಕರರ ಪತಿ ಮತ್ತು ಪತ್ನಿ ವರ್ಗಾವಣೆ ನಿಯಮಾವಳಿ ತಿದ್ದುಪಡಿಗೆ ಅಸ್ತು ಎಂದಿದೆ.

ಸರ್ಕಾರಿ ನೌಕರರಿಗೆ ಸಿಹಿಸುದ್ದಿ: ಸುಧಾಕರ್ ರಾವ್ ನೇತೃತ್ವದಲ್ಲಿ ಏಳನೇ ವೇತನ ಆಯೋಗ ರಚನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 

ರಾಜ್ಯ ಸರ್ಕಾರವು ವಿವಿಧ ಇಲಾಖೆಗಳ ಸಿ ಮತ್ತು ಡಿ ಶ್ರೇಣಿ ನೌಕರರ ಪತಿ ಹಾಗೂ ಪತ್ನಿ ವರ್ಗಾವಣೆ ನಿಯಮಾವಳಿ ತಿದ್ದುಪಡಿಗೆ  ಗುರುವಾರ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದೆ.

ಸಚಿವ ಸಂಪುಟವು ಇದಕ್ಕೆ ತಿದ್ದುಪಡಿಯನ್ನು ತಂದಿರುವುದರಿಂದ ಹೊಸ ನಿಯಮ ಜಾರಿಯಾಗಲಿದೆ.

ಹೊಸ ನಿಯಮ ಜಾರಿ ಮಾಡುವುದರಿಂದ ಇಲಾಖೆಯ ಸೇವಾ ನಿಯಮದ ಅನ್ವಯ ನಿಗದಿ ಮಾಡಿರುವ ಕನಿಷ್ಠ ಸೇವಾ ಪೂರ್ಣಗೊಳಿಸಿದದ ನಂತರ ಪತಿ, ಪತ್ನಿ ಪ್ರಕರಣದಲ್ಲಿ ಮಾತ್ರ ಅಂತರ್‌ಜಿಲ್ಲೆ ವರ್ಗಾವಣೆಗೆ ಅವಕಾಶ ಸಿಗಲಿದೆ.

ಈ ಬದಲಾವಣೆಯನ್ನು ನೌಕರರ ವರ್ಗಾವಣೆ ನಿಯಮಕ್ಕೆ ಸೇರಿಸುವುದಾಗಿ ಸರ್ಕಾರ ತಿಳಿಸಿದೆ.  

ಗೋವುಗಳ ಸಂರಕ್ಷಣೆಗೆ ಸರ್ಕಾರಿ ನೌಕರರ ವೇತನ: ಅಸಮಾಧಾನ!

ಶಿಕ್ಷಣ ಇಲಾಖೆಯಲ್ಲಿ ನೇಮಕವಾದ ಪ್ರದೇಶದಲ್ಲಿ ಕನಿಷ್ಠ ಸೇವಾ ಅವಧಿ 5 ವರ್ಷ, ಗೃಹ ಇಲಾಖೆಯಲ್ಲಿ ಕಾನ್ಸ್‌ಟೇಬಲ್‌ಗಳಿಗೆ ಸೇವೆ ಸಲ್ಲಿಸುತ್ತಿರುವವರಿಗೆ 7 ವರ್ಷ ನಿಗದಿ ಮಾಡಲಾಗಿದೆ.

ಇದೇ ಮಾದರಿಯಲ್ಲಿ ವಿವಿಧ ಇಲಾಖೆಗಳಲ್ಲೂ ಕನಿಷ್ಠ ಸೇವಾ ಅವಧಿ ಗುರುತು ಮಾಡಲಾಗಿದೆ.

ಈ ಅವಧಿ ಮುಗಿಸಿದ ನಂತರ ವರ್ಗಾವಣೆಗೆ ಅವಕಾಶ ಸಿಗಲಿದೆ. ಕೆಲವು ಇಲಾಖೆಗಳಲ್ಲಿ ನೌಕರರು 10ರಿಂದ 15 ವರ್ಷಗಳು ಕಳೆದರೂ ಪತಿ, ಪತ್ನಿ ಪ್ರಕರಣಗಳಲ್ಲಿ ವರ್ಗಾವಣೆ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ನಿಯಮದಿಂದ ಕಾನ್ಸ್‌ಟೇಬಲ್‌ಗಳು ಸಮಸ್ಯೆ ಎದುರಿಸುತ್ತಿದ್ದರು.

ಈ ಎಲ್ಲ ಅಂಶಗಳನ್ನು ಗಮನದಲ್ಲಿ ಇರಿಸಿಕೊಂಡು ಹೊಸ ಬದಲಾವಣೆಯನ್ನು ಮಾಡಲಾಗಿದೆ.

ಇದರಿಂದ ಲಕ್ಷಾಂತರ ಸರ್ಕಾರಿ ನೌಕರರಿಗೆ ಅನುಕೂಲವಾಗಲಿದೆ ಎಂದು ಸಚಿವ ಡಾ.ಸುಧಾಕರ್‌ ತಿಳಿಸಿದ್ದಾರೆ. 

ವೃತ್ತಿ ಕೌಟುಂಬಿಕ ಸಮಸ್ಯೆಯಿಂದ ದೂರ: ಪತಿ ಮತ್ತು ಪತ್ನಿ ಇಬ್ಬರೂ ಸರ್ಕಾರಿ ನೌಕರರಾಗಿದ್ದು, ಬೇರೆ ಬೇರೆ ಜಿಲ್ಲೆಗಳಲ್ಲಿದ್ದ ಪ್ರಕರಣಗಳಲ್ಲಿ ಕೌಟುಂಬಿಕ ಸಮಸ್ಯೆಗಳು ಎದುರಾಗುತ್ತಿದ್ದವು.

ಸರ್ಕಾರಿ ನೌಕರಿಯಲ್ಲಿರುವ ಪತಿ ಮತ್ತು ಪತ್ನಿಯರು ಬೇರೆ ಬೇರೆ ಜಿಲ್ಲೆಗಳಲ್ಲಿ ಇದ್ದ ಕಾರಣದಿಂದಲೇ ಕೌಟುಂಬಿಕ ಕಲಹಗಳು ಸೃಷ್ಟಿಯಾಗಿದ್ದೂ ಇದೆ.  

Published On: 18 November 2022, 10:27 AM English Summary: Good News for Govt Employees: Change in Transfer Rules for C, D Tailor Employees; Husband and wife case rules are loose!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.