ಡಿಎ ಬಾಕಿ ಕುರಿತಂತೆ ನೌಕರರು ಕಾಯುತ್ತಿದ್ದ ಸುದ್ದಿ ಹೊರಬಿದ್ದಿದೆ. 18 ತಿಂಗಳ ಡಿಎ ಬಾಕಿಯನ್ನು ಮೂರು ಕಂತುಗಳಲ್ಲಿ ಪಡೆಯುತ್ತಾರೆ ಎಂದು ವರದಿ ಸೂಚಿಸಿದೆ. ಇಲ್ಲಿದೆ ವಿವರ
EPF Interest Money: ನೌಕರರಿಗೆ ಸಿಹಿಸುದ್ದಿ- PF ಖಾತೆಗಳಿಗೆ ಬಡ್ಡಿ ಹಣ ವರ್ಗಾವಣೆ! ನಿಮ್ಮ ಬ್ಯಾಲೆನ್ಸ್ ಚೆಕ್ ಮಾಡಿ
ನಿಗಮ ಮಂಡಳಿಯ ವಿವಿಧ ಪ್ರಾಧಿಕಾರಿಗಳ 3 ಲಕ್ಷ ಮತ್ತು ಪಿಂಚಣಿ ಪಡೆಯುತ್ತಿರುವ 4.5 ಲಕ್ಷ ನಿವೃತ್ತ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸ್ಸು ಅನ್ವಯವಾಗಲಿದೆ ಎಂದು ತಿಳಿದು ಬಂದಿದೆ.
ಮೊನ್ನೆಯಷ್ಟೆ ತುಟ್ಟಿಭತ್ಯೆ ಹೆಚ್ಚಿಸಿದ ನಂತರ ಕೇಂದ್ರ ಸರ್ಕಾರಿ ನೌಕರರು ಮತ್ತೊಂದು ಸುದ್ದಿಗಾಗಿ ಕಾಯುತ್ತಿದ್ದರು. 7ನೇ ವೇತನ ಆಯೋಗದ ಶಿಫಾರಸ್ಸಿನಿಂದಾಗಿ 13.5 ಲಕ್ಷಕ್ಕೂ ಹೆಚ್ಚು ಜನರಿಗೆ ಅನುಕೂಲವಾಗಲಿದೆ.
ಕೋವಿಡ್ ಸಾಂಕ್ರಾಮಿಕ (Covid 19) ರೋಗದಿಂದಾಗಿ ಸರ್ಕಾರಿ ನೌಕರರಿಗೆ ಜನವರಿ 2020 ರಿಂದ ಜೂನ್ 2021 ರವರೆಗೆ 18 ತಿಂಗಳ ಡಿಎ (Dearness Allowance) ಬಾಕಿಯನ್ನು ನೀಡಿರಲಿಲ್ಲ.
Employee Provident Fund: ಸರ್ಕಾರಿ ನೌಕರರಿಗೆ ಸುಪ್ರೀಂ ಕೋರ್ಟ್ನಿಂದ ಮಹತ್ವದ ತೀರ್ಪು!
ಇದೀಗ ಅಂತ ನೌಕರರಿಗೆ 7 ನೇ ವೇತನ ಆಯೋಗದ ಹೊಸ ಸುದ್ದಿ ವಿವರಣೆ ನೀಡಿದೆ. ಈ ಬದಲಾವಣೆಯಿಂದಾಗಿ ಸರ್ಕಾರವು ಹೆಚ್ಚುವರಿಯಾಗಿ ಅಂದಾಜು 12,500 ಕೋಟಿ ರೂಪಾಯಿ ಮೀಸಲಿರಿಸುವ ಸಾಧ್ಯತೆ ಇದೆ.
ಆದರೆ ಇದಕ್ಕೂ ಮೊದಲು ಸರ್ಕಾರಿ ನೌಕರರು 31 ಪ್ರತಿಶತದಷ್ಟು ತುಟ್ಟಿಭತ್ಯೆಯನ್ನು(Dearness Allowance) ಪಡೆಯುತ್ತಿದ್ದರು.
ಸೆಪ್ಟೆಂಬರ್ನಲ್ಲಿ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ 4ರಷ್ಟು ಹೆಚ್ಚಿಸಿತ್ತು. ಡಿಎಯನ್ನು ಶೇ.34ರಿಂದ ಶೇ.38ಕ್ಕೆ ಹೆಚ್ಚಿಸಲಾಗಿದೆ.
IIPDF ಸ್ಕೀಮ್ ಅಡಿಯಲ್ಲಿ ಧನಸಹಾಯ: ಖಾಸಗಿ ವಲಯದ ಭಾಗವಹಿಸುವಿಕೆಯ ಉತ್ತೇಜನ
4% DA ಹೆಚ್ಚಳವು ದೇಶಾದ್ಯಂತ 50 ಲಕ್ಷ ಸರ್ಕಾರಿ ನೌಕರರು ಮತ್ತು 61 ಲಕ್ಷ ಪಿಂಚಣಿದಾರರಿಗೆ ಪ್ರಯೋಜನವನ್ನು ನೀಡಿದೆ.
ಡಿಎ (Dearness Allowance) ಹೆಚ್ಚಳದ ಕುರಿತು ಕೇಂದ್ರದ ನಿರ್ಧಾರಗಳು ಮತ್ತು ಇತ್ತೀಚಿನ ಪ್ರಕಾರ ಸರ್ಕಾರಿ ನೌಕರರು ತಮ್ಮ ಮುಂದಿನ ಡಿಎ ಹೆಚ್ಚಳವನ್ನು ಮಾರ್ಚ್ 2023 ರಲ್ಲಿ ಪಡೆಯುವ ಸಾಧ್ಯತೆಯಿದೆ.
ಕೇಂದ್ರವು ಡಿಎಯನ್ನು 3 ರಿಂದ 5 ಪ್ರತಿಶತದಷ್ಟು ಹೆಚ್ಚಿಸುವ ಸಾಧ್ಯತೆಯಿದೆ ಎಂದು ವರದಿಗಳಲ್ಲಿ ತಿಳಿದುಬಂದಿದೆ
ಇದಿಷ್ಟು ಸದ್ಯದ 7ನೇ ವೇತನ ಆಯೋಗದ ಕುರಿತಾದ ಸುದ್ದಿಯಾಗಿದೆ.
DA Hike: ಸರ್ಕಾರಿ ನೌಕರರಿಗೆ ಮತ್ತು ನಿವೃತ್ತ ನೌಕರರಿಗೆ ರಾಜ್ಯ ಸರ್ಕಾರದಿಂದ ಬಂಪರ್ ಸುದ್ದಿ! ತುಟ್ಟಿಭತ್ಯೆ ಹೆಚ್ಚಳಕ್ಕೆ ಅನುಮೋದನೆ!
ಏನಿದು 7ನೇ ವೇತನ ಆಯೋಗ
ಭಾರತ ಸರ್ಕಾರದಿಂದ ನಿಯೋಜನೆಗೊಳ್ಳುವ ಈ ಆಯೋಗವು ಕಾಲಕ್ಕನುಗುಣವಾಗಿ ಸರ್ಕಾರಿ ಕೆಲಸಗಾರರ ವೇತನ ಸ್ವರೂಪ ಬದಲಾವಣೆಗೆ ಶಿಫಾರಸ್ಸು ಮಾಡಲೆಂದೇ ರಚಿತವಾಗಿರುತ್ತದೆ.
ಸ್ವತಂತ್ರ ಬಂದಾಗಿನಿಂದ ಇಲ್ಲಿಯವರೆವಿಗೂ ಏಳು ವೇತನ ಆಯೋಗಗಳನ್ನು ರಚಿಸಿ ಅವುಗಳಿಂದ ಸರ್ಕಾರಿ ಕೆಲಸಗಾರರ ವೇತನ ಕುರಿತಾಗಿ ಶಿಫಾರಸ್ಸು ಪಡೆಯಲಾಗಿದೆ.
ಸರ್ಕಾರದ ನಾಗರೀಕ ಸೇವಾ ವಲಯಗಳು ಹಾಗು ದೇಶದ ಸೇನಾ ವಿಭಾಗಗಳಿಗೆ ವೇತನ ಆಯೋಗದ ಶಿಫಾರಸ್ಸು ಬಹು ಮುಖ್ಯವಾಗಿರುತ್ತದೆ.
Tata Group recruitment: ಟಾಟಾ ಗ್ರುಪ್ನಿಂದ ಸಿಹಿಸುದ್ದಿ: ಬರೋಬ್ಬರಿ 45,000 ಹುದ್ದೆಗಳ ನೇಮಕಕ್ಕೆ ತಯಾರಿ!
ವೇತನ ಆಯೋಗದ ಮುಖ್ಯ ಕಚೇರಿ ದೆಹಲಿಯಲ್ಲಿದ್ದು ಭಾರತ ಸರ್ಕಾರ ವೇತನ ಆಯೋಗವನ್ನು ರಚನೆ ಮಾಡುವ ಜವಾಬ್ದಾರಿ ಹಾಗು ಅಧಿಕಾರವನ್ನು ಹೊಂದಿದೆ.
ವೇತನ ಆಯೋಗ ಅಸ್ತಿತ್ವದಲ್ಲಿರುವ ಅವಧಿ ಕೇವಲ ಹದಿನೆಂಟು ತಿಂಗಳುಗಳು ಮಾತ್ರ. ಆಯೋಗ ರಚನೆಯಾದಂದಿನಿಂದ ಹದಿನೆಂಟು ತಿಂಗಳುಗಳ ಒಳಗೆ ವೇತನ ಆಯೋಗವು ತನ್ನ ಸಂಪೂರ್ಣ ಶಿಫಾರಸ್ಸನ್ನು ಸರ್ಕಾರಕ್ಕೆ ಸಲ್ಲಿಸಬೇಕು.
Share your comments