14,000 jobs in the state : ರಾಜ್ಯದಲ್ಲಿ 14,000 ಉದ್ಯೋಗವಕಾಶಗಳು ಸೃಷ್ಟಿಯಾಗಲಿವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ತಿಳಿಸಿದ್ದಾರೆ.
ತೈವಾನ್ ಮೂಲದ ಚಿಪ್ ತಯಾರಿಕಾ ಕಂಪನಿ ಫಾಕ್ಸ್ ಕಾನ್ (Taiwan-based chip manufacturing company Foxconn), ಕರ್ನಾಟಕದಲ್ಲಿ ಎರಡು ಯೋಜನೆಗಳಲ್ಲಿ ಸುಮಾರು 25,000 ಕೋಟಿ ರೂ ಹೂಡಿಕೆ ಮಾಡಲು ರಾಜ್ಯ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಐಫೋನ್ ಬಿಡಿಭಾಗಗಳನ್ನು ಉತ್ಪಾದಿಸುವ ಘಟಕ (A unit that produces iPhone accessories) ಸ್ಥಾಪಿಸಲು ಸುಮಾರು 13000 ಕೋಟಿ ಹೂಡಿಕೆ ಮತ್ತು ಚಿಪ್ ತಯಾರಿಕೆಯ ಸಾಧನಗಳನ್ನು ತಯಾರಿಸಲು ಅಫ್ರೆಡ್ ಮೆಟೀರಿಯಲ್ಸ್'ನೊಂದಿಗೆ 12000 ಕೋಟಿ ಮೊತ್ತದ ಯೋಜನೆಗೆ ಒಪ್ಪಂದ ಮಾಡಿಕೊಂಡಿದೆ.
ಈ ಎರಡು ಯೋಜನೆಗಳಿಂದ ರಾಜ್ಯದಲ್ಲಿ 14,000 ಉದ್ಯೋಗವಕಾಶಗಳು ಸೃಷ್ಟಿಯಾಗಲಿವೆ. ಇದು ಕರ್ನಾಟಕದಲ್ಲಿ ಮಾತ್ರವಲ್ಲದೆ ಭಾರತದಲ್ಲೇ ತಂತ್ರಜ್ಞಾನದ ಪ್ರಗತಿ ಮತ್ತು ಒಟ್ಟಾರೆ ಸಾಮಾಜಿಕ - ಆರ್ಥಿಕ ಬೆಳವಣಿಗೆಯಲ್ಲಿ ಗಮನಾರ್ಹ ಬದಲಾವಣೆ ತರಲಿದೆ.
ರಾಜ್ಯ ಸರ್ಕಾರದ ಜೊತೆಗಿನ ಒಪ್ಪಂದ ಪತ್ರಕ್ಕೆ ಬಾಕ್ಸ್ ಕಾನ್ ಅಧ್ಯಕ್ಷರಾದ ಯಂಗ್ ಲಿ ಯು ಸೋಮವಾರ ಸಹಿ ಹಾಕಿದ್ದಾರೆ. ಈ ಸಂದರ್ಭದಲ್ಲಿ, ಕೈಗಾರಿಕಾ ಸಚಿವರಾದ ಎಂ.ಬಿ. ಪಾಟೀಲ್ ಉಪಸ್ಥಿತರಿದ್ದರು.
Share your comments