ಜಾಗತಿಕ ಹಸಿವಿನ ಸೂಚ್ಯಾಂಕದಲ್ಲಿ ಪ್ರಸಕ್ತ ವರ್ಷ ಭಾರತಕ್ಕೆ ಕಡಿಮೆ ಸ್ಥಾನ ಬಂದಿದ್ದು, ಭಾರತದಲ್ಲಿ ಹಸಿವಿನ ಪ್ರಮಾಣ ಹೆಚ್ಚಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಭಾರತದಲ್ಲೇ ಹಸಿವಿನ ಪ್ರಮಾಣ ಹೆಚ್ಚಾಗಿದೆ ಎನ್ನುವ ಅಂಶವು 2022ರ ಜಾಗತಿಕ ಹಸಿವಿನ ಸೂಚ್ಯಂಕ (ಗ್ಲೋಬಲ್ ಹಂಗರ್ ಇಂಡೆಕ್ಸ್ - ಜಿಎಚ್‌ಐ)ದಿಂದ ಬಹಿರಂಗವಾಗಿದೆ. ಜಗತ್ತಿನ 121 ದೇಶಗಳ ಪೈಕಿ ಭಾರತ 107ನೇ ಸ್ಥಾನ ಪಡೆದಿದೆ.
ಇದನ್ನೂ ಓದಿರಿ: ATM ನಿರಾಕರಿಸಿದ 500 ರೂ.ಗಳನ್ನು ನೀಡದ ಬ್ಯಾಂಕಿಗೆ ದಂಡ! ಖರ್ಚು, ಬಡ್ಡಿ ಸೇರಿ ಗ್ರಾಹಕನಿಗೆ ₹1,02,700 ಪರಿಹಾರ!
ಭಾರತವು ಹಸಿವಿನ ಸೂಚ್ಯಾಂಕದಲ್ಲಿ 2020ರಲ್ಲಿ 101ನೇ ಸ್ಥಾನದಲ್ಲಿತ್ತು. ಈ ಬಾರಿ ಕಳೆದ ವರ್ಷಕ್ಕಿಂತಲೂ ಕಡಿಮೆ ಸ್ಥಾನ ಪಡೆದಿರುವುದು ಕಳವಳಕ್ಕೆ ಕಾರಣವಾಗಿದೆ. ಕೊರೊನಾ ನಂತರದಲ್ಲಿ ದೇಶದಲ್ಲಿ ಬಡತನ ಮತ್ತು ನಿರುದ್ಯೋಗ ಸಮಸ್ಯೆ ಹೆಚ್ಚಾಗಿತ್ತು. ಇದೀಗ ಜಿಎಚ್‌ಐ ವರದಿಯಲ್ಲಿ ಹಸಿವಿನ ಪ್ರಮಾಣವೂ ಭಾರತದಲ್ಲಿ ಹೆಚ್ಚಾಗಿರುವುದು ಬೆಳಕಿಗೆ ಬಂದಿದೆ.
ಅಷ್ಟೇ ಅಲ್ಲದೇ ಏಷ್ಯಾ ಖಂಡದಲ್ಲಿ ಈ ಬಾರಿಯ ಹಸಿವಿನ ಸೂಚ್ಯಾಂಕದಲ್ಲಿ ಭಾರತವು ಅತ್ಯಂತ ಹಸಿವಿನ ದೇಶ ಎಂಬ ಅಂಶ ಬಹಿರಂಗವಾಗಿದೆ. ಸೂಚ್ಯಂಕದಂತೆ ಅಫ್ಗಾನಿಸ್ತಾನ ಹೊರತುಪಡಿಸಿದರೆ ಭಾರತದ ನೆರೆಯ ದೇಶಗಳಾದ ಶ್ರೀಲಂಕಾ (64), ನೇಪಾಳ (81), ಬಾಂಗ್ಲಾದೇಶ (84) ಮತ್ತು ಪಾಕಿಸ್ತಾನ (99) ದೇಶಗಳು ಸೂಚ್ಯಾಂಕದಲ್ಲಿ ಭಾರತಕ್ಕಿಂತ ಉತ್ತಮ ಸ್ಥಾನದಲ್ಲಿವೆ. ಈ ಬಾರಿಯ ಹಸಿವಿನ ಸೂಚ್ಯಾಂಕದಲ್ಲಿ ಅಫ್ಗಾನಿಸ್ತಾನ 109ನೇ ಸ್ಥಾನ ಪಡೆದಿದೆ.
ಇದನ್ನೂ ಓದಿರಿ: ಬೆಂಗಳೂರು ಜಿಕೆವಿಕೆಯಲ್ಲಿ ನವೆಂಬರ್ 3ರಿಂದ ಬೃಹತ್ ಕೃಷಿ ಮೇಳ! ಏನೇನಿರಲಿದೆ ಗೊತ್ತೆ?
ಭಾರತದಲ್ಲಿ ಮಕ್ಕಳ ಅಪೌಷ್ಟಿಕತೆ ಪ್ರಮಾಣವು ಶೇ 19.3ರಷ್ಟಿದ್ದು, ವಿಶ್ವ ದಲ್ಲಿಯೇ ಇದು ಅತ್ಯಧಿಕವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಒಟ್ಟಾರೆ 29.1 ಅಂಕಗಳನ್ನು ಪಡೆದಿರುವ ಭಾರತ ದಲ್ಲಿ ಹಸಿವಿನ ಪ್ರಮಾಣ ಅಪಾಯಕಾರಿ ಮಟ್ಟದಲ್ಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಅಪೌಷ್ಟಿಕತೆ, ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ತೂಕ ಕಡಿಮೆ ಇರುವುದು, ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಎತ್ತರ ಕಡಿಮೆ ಇರುವುದು ಹಾಗೂ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮರಣ ಪ್ರಮಾಣವನ್ನು ಪರಿಗಣಿಸಿ ಜಿಎಚ್‌ಐ ಅಂಕಗಳನ್ನು ನೀಡುತ್ತಿದೆ.
ಇದನ್ನೂ ಓದಿರಿ:KVK ನೇಮಕಾತಿ 2022: ಸಬ್ಜೆಕ್ಟ್ ಮ್ಯಾಟರ್ ಸ್ಪೆಷಲಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಜಾಗತಿಕ ಹಸಿವಿನ ಸೂಚ್ಯಂಕವು (ಜಿಎಚ್‌ಐ) ಜಾಗತಿಕ, ಪ್ರಾದೇಶಿಕ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಹಸಿವನ್ನು ಸಮಗ್ರವಾಗಿ ಅಳೆಯುವ ಸಾಧನವಾಗಿದೆ. ಅದ್ಯಾಗೂ ಈ ವರದಿಯಲ್ಲಿನ ಅಂಶಗಳನ್ನು ಕೇಂದ್ರ ಸರ್ಕಾರ ನಿರಾಕರಿಸಿದೆ. ವರದಿಯನ್ನು ಸೂಕ್ತ ಮಾನದಂಡದ ಆಧಾರದ ಮೇಲೆ ಮಾಡಿಲ್ಲ. ತಪ್ಪು ಮಾಹಿತಿಯಿಂದ ಕೂಡಿದೆ ಎಂದು ಹೇಳಿದೆ.
Share your comments