ನಿಮ್ಮ ಜಮೀನಿನ ಪಹಣಿ ಯಾರ ಹೆಸರಿನಲ್ಲಿದೆ, ನಿಮ್ಮ ಜಮೀನಿನ ಮೇಲಿರುವ ಸಾಲ ಸೇರಿದಂತೆ ಇನ್ನಿತರ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಪಡೆಯಬಹುದು. ಇದಕ್ಕಾಗಿ ನೀವು ಯಾವ ನಾಡ ಕಚೇರಿಗೆ ಹೋಗಬೇಕಾಗಿಲ್ಲ. ಮನೆಯಲ್ಲಿಯೇ ಕುಳಿತು ನಿಮ್ಮ ಮೊಬೈಲ್ ನಲ್ಲಿಯೇ ಎಲ್ಲಾ ಮಾಹಿತಿ ಪಡೆಯಬಹುದು. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ಮಾಹಿತಿ....
ಭೂಮಿ ತಂತ್ರಾಶದಲ್ಲಿ ಪಹಣಿ, ಆರ್.ಟಿ.ಸಿ ಸೇರಿದಂತೆ ಎಲ್ಲಾ ಸೌಲಭ್ಯವನ್ನು ಒದಗಿಸಲಾಗಿದೆ. ನಿಮ್ಮ ಕೆಲಸ ಬಿಟ್ಟು ನಾಡಕಚೇರಿಗಳ ಮುಂದೆ ಸರದಿಯಲ್ಲಿ ನಿಂತು ನಿಮ್ಮ ಅಮೂಲ್ಯ ಸಮಯ ಹಾಳುಮಾಡಬಾರದೆಂದು ಈ ಸೌಲಭ್ಯ ಒದಗಿಸಾಗಿದೆ. ನಿಮ್ಮ ಅಂಗೈಯಲ್ಲಿನ ಮೊಬೈಲ್ನಲ್ಲೇ ಪರಿಶೀಲಿಸಿಕೊಳ್ಳುವ ಅವಕಾಶ ಇದೆ.
ಇದಕ್ಕಾಗಿ ನೀವು ಈ ಮುಂದಿನ ಲಿಂಕ್ http://www.landrecords.karnataka.gov.in ಮೇಲೆ ಕ್ಲಿಕ್ ಮಾಡಬೇಕು. ನಿಮಗೆ ಕನ್ನಡದಲ್ಲಿ ನೋಡಬೇಕೋ ಅತವಾ ಇಂಗ್ಲೀಷ್ ನಲ್ಲಿ ನೋಡಬೇಕೋ ಎಂಬುದನ್ನು ನಿರ್ಧರಿಸಿ ಅಲ್ಲಿ ಆಯ್ಕೆ ಮಾಡಿಕೊಳ್ಳಬೇಕು. ಕನ್ನಡ ಮೇಲೆ ಕ್ಲಿಕ್ ಮಾಡಿದರೆ ಕನ್ನಡದಲ್ಲಿ ಮಾಹಿತಿ ಕಾಣುತ್ತದೆ. ಇಂಗ್ಲೀಷ್ ನಲ್ಲಿ ಬೇಕಾದರೆ ಭೂಮಿ ಚಿತ್ರದ ಮೇಲೆ ಕ್ಲಿಕ್ ಮಾಡಬೇಕು. ಫಾರ್ ಸಿಟಿಜನ್ ಸರ್ವಿಸೆಸ್ ಮೇಲೆ ಕ್ಲಿಕ್ ಮಾಡಿದರೆ ಆರ್ಟಿಸಿ, ರೇವಿನ್ಯೂ ಮ್ಯಾಪ್, ವೀವ್ ಆರ್ಟಿಸಿ ಇನ್ಫಾರ್ಮೆಷನ್, ಸೇರಿದಂತೆ ಇತರ ಸೌಲಭ್ಯಗಳು ಅಲ್ಲಿ ಕಾಣುತ್ತದೆ. ಯಾವುದನ್ನು ಬೇಕೋ ಅದರ ಮೇಲೆ ಕ್ಲಿಕ್ ಮಾಡಿ ಮಾಹಿತಿ ಪಡೆಯಬಹುದು. ಒಂದು ವೇಳೆ ನಿಮಗೆ ಕನ್ನಡದಲ್ಲಿ ಮಾಹಿತಿ ಬೇಕಾದರೆ ಕನ್ನಡ ಕ್ಲಿಕ್ ಮಾಡಿದರೆ ಭೂಮಿ ವೆಬ್ ಸೈಟ್ ಕಾಣುತ್ತದೆ. ನಾಗರಿಕ ಸೇವೆಗಳಿಗಾಗಿ ಬೇಕಾದರೆ ಅಲ್ಲಿ ಕ್ಲಿಕ್ ಮಾಡಬೇಕು.
ಸರ್ವೆನಂಬರ್ , ಮುಟೇಷನ್ ಗಳ ಕ್ರೋಢೀಕೃತರ ವರದಿ ಬೇಕಾದರೆ ಅಲ್ಲಿ ಕ್ಲಿಕ್ ಮಾಡಬೇಕು. ಆಗ ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ, ವಿಲೇಜ್ (ಗ್ರಾಮ) ಆಯ್ಕೆ ಮಾಡಿಕೊಂಡು ಗೆಟ್ ರಿಪೋರ್ಟ್ ಮೇಲೆ ಕ್ಲಿಕ್ ಮಾಡಿದರೆ ಸಾಕು, ನಿಮ್ಮ ಸರ್ವೆನಂಬರ್, ಹಿಸ್ಸಾ ಭರ್ತಿ ಮಾಡಿದರೆ ನೀವು ಮನೆಯಲ್ಲಿಯೇ ಎಲ್ಲಾ ಮಾಹಿತಿಯು ಕ್ಷಣಾರ್ಧದಲ್ಲಿ ಪಡೆಯಬಹುದು.
ನಿಮಗೆ ನೇರವಾಗಿ ಲ್ಯಾಂಡ್ ರೆಕಾರ್ಡ್ ವೆಬ್ ಓಪನ್ ಆಗಬೇಕಾದರೆ https://landrecords.karnataka.gov.in/service2/ ಮೇಲೆ ಕ್ಲಿಕ್ ಮಾಡಿದರೆ ಸಾಕು ಡೈರೆಕ್ಟ್ ಲ್ಯಾಂಡ್ ರೆಕಾರ್ಡ್ ವೆಬ್ ತೆರೆದುಕೊಳ್ಳುತ್ತದೆ. ಇಲ್ಲಿ ನೇರವಾಗಿ ನಿಮ್ಮ ಜಿಲ್ಲೆ. ತಾಲೂಕು, ಹೋಬಳಿ, ಗ್ರಾಮ, ಸರ್ವೆನಂಬರ್ ಕ್ಲಿಕ್ ಮಾಡಿಮಾಹಿತಿ ಪಡೆಯಬಹುದು.
ಗ್ರಾಮವಾರು ಅಥವಾ ವೈಯಕ್ತಿಕ ಜಮೀನಿನ ಖಾತೆ ಬದಲಾವಣೆ, ಹಕ್ಕು ಬದಲಾವಣೆಗೆ ಬಾಕಿ ಇರುವ ವಹಿವಾಟಿನ ವಿವರಗಳು, ವಹಿವಾಟು ಯಾವ ಹಂತದಲ್ಲಿದೆ ಎಂಬ ಮಾಹಿತಿಯನ್ನು ಗಮನಿಸಬಹುದು. ಪಹಣಿ ಗಣಕೀಕೃತಗೊಂಡ ನಂತರದಿಂದ ಜಮೀನಿನ ಮೇಲೆ ಯಾವುದಾದರೂ ವಹಿವಾಟು ನಡೆದಿದ್ದರೆ ಅಂತಹ ವಹಿವಾಟುಗಳ ಸಂಪೂರ್ಣ ಮಾಹಿತಿಯನ್ನು ಒಂದೇ ವರದಿಯಲ್ಲಿ ನೋಡಬಹುದು. ಜಮೀನು ಕೃಷಿಯೇತರ ಬಳಕೆಗಾಗಿ ಭೂ ಪರಿವರ್ತನೆಗಾಗಿ ಅರ್ಜಿ ಸಲ್ಲಿಸಿದಲ್ಲಿ ಅರ್ಜಿಯ ಸ್ಥಿತಿಯನ್ನು ವೀಕ್ಷಿಸಬಹುದು ಹಾಗೂ ತಂತ್ರಾಂಶ ಮೂಲಕ ಭೂ ಪರಿವರ್ತನೆಯಾಗಿರುವ ಆದೇಶಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
Share your comments