ಕೃಷಿ ಮಸೂದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿರುವ ಸಮಯದಲ್ಲಿ ಹಲವಾರು ರಾಜ್ಯ ಸರಕಾರಗಳು ರೈತರಿಗೆ ಒಳ್ಳೆಯ ಉಡುಗೋರೆಯನ್ನು ನೀಡುತ್ತಿವೆ.
ರೈತರ ಪ್ರತಿಭಟನೆ ತೀವ್ರಗೊಳ್ಳುತ್ತಿರುವ ಮಧ್ಯೆ ರಾಜಸ್ಥಾನ ಸರ್ಕಾರವು ರೈತರಿಗೆ ಬಂಪರ್ ಗಿಫ್ಟ್ ಅನ್ನು ನೀಡಿದ್ದು, ಸೌರ ಪಂಪ್ ಅಳವಡಿಸಲು 11.85 ಕೋಟಿ ರೂಪಾಯಿ ಅನುದಾನಗಳನ್ನು ಬಿಡುಗಡೆ ಮಾಡಿದೆ, ಹಾಗೂ ಇದರಿಂದ 5000 ರೈತರಿಗೆ ಪ್ರಯೋಜನವಾಗಲಿದೆ ಎಂದು ಹೇಳಿದೆ.
ರಾಜ್ಯದಲ್ಲಿರುವ ಬುಡಕಟ್ಟು ರೈತರ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ರಾಜಸ್ಥಾನ ಮುಖ್ಯಮಂತ್ರಿಯಾದ ಅಶೋಕ್ ಗೆಹ್ಲಟ್ ಅವರು 2020-21 ನೇ ಸಾಲಿನ ಬಜೆಟ್ ನಲ್ಲಿ 5000 ಜನರಿಗೆ ಉಪಯೋಗವಾಗುವಂತೆ ಸೌರ ಪಂಪ್ಸೆಟ್ ಯೋಜನೆಯನ್ನು ಘೋಷಣೆ ಮಾಡಿದ್ದಾರೆ.
ಯೋಜನೆಗಾಗಿ ಸರ್ಕಾರವು 11.85 ಕೋಟಿ ರೂಪಾಯಿಗಳ ಅನುದಾನಗಳನ್ನು ಬಿಡುಗಡೆ ಮಾಡಿದೆ. ಇದರ ಮೂಲಕ ರೈತರಿಗೆ ಕೃಷಿಯಲ್ಲಿ ಹೆಚ್ಚಿನ ಇಳುವರಿ ಪಡೆಯಲು ಸಹಾಯವಾಗುತ್ತದೆ ಹಾಗೂ ವಿದ್ಯುತ್ ಬಿಲ್ಲನ್ನು ಕಡಿತಗೊಳಿಸಲು ಹೆಚ್ಚು ಸಹಕಾರಿಯಾಗುತ್ತದೆ.
ಲೇಖಕರು:ಚಿನ್ನಪ್ಪ ಎಸ್. ಅಂಗಡಿ
Share your comments