1. ಸುದ್ದಿಗಳು

ಉಚಿತ ಹೊಲಿಗೆ ಯಂತ್ರ ಯೋಜನೆ..ಅರ್ಜಿ ಸಲ್ಲಿಕೆ ಹೇಗೆ..? ಯಾವ ದಾಖಲೆಗಳು ಬೇಕು..?

Maltesh
Maltesh
Free sewing Machine scheme how to Aplly

ಆರ್ಥಿಕ  ಸ್ವಾವಲಂಬನೆ ಎನ್ನುವುದು ಈ ಕಾಲದಲ್ಲಿ ಬಹು ಮುಖ್ಯವಾದ ವಿಷಯವಾಗಿದೆ. ಎಲ್ಲರೂ ತಮ್ಮ ಕಾಲ ಮೇಲೆ  ನಿಂತುಕೊಳ್ಳಬೇಕು ಎಂಬ ಬೃಹದಾಸೆಯನ್ನು ಹೊಂದಿರುತ್ತಾರೆ. ಜೊತೆಗೆ ಸ್ವಂತ ಉದ್ದಿಮೆಯ ಕನಸನ್ನು ಕಂಡಿರುತ್ತಾರೆ. ಸದ್ಯ ಮಹಿಳೆಯರನ್ನು ಆರ್ಥಿಕರಾಗಿ ಸ್ವಾವಲಂಬಿಯನ್ನಾಗಿಸಲು ಸರ್ಕಾರಗಳು ಸಾಕಷ್ಟು ಯೋಜನೆಗಳನ್ನು ಕಾಲ ಕಾಲಕ್ಕೆ ಜಾರಿಗಹ ತರುತ್ತಲೇ ಇರುತ್ತವೆ. ಆ ಸಾಲಿಗೆ ಉಚಿತ ಹೊಲಿಗೆ ಯಂತ್ರ ಯೋಜನೆಯು ಒಂದು ಹೇಳಬಹುದು.

ನೀವೂ ಕೂಡ ಮನೆಯಲ್ಲಿ ಕುಳಿತು ಹೊಲಿಗೆ ಕೆಲಸ ಮಾಡುವ ಮೂಲಕ ನಿಮ್ಮ ಆದಾಯವನ್ನು ಗಳಿಸಲು ಬಯಸಿದರೆ, ಈ ಯೋಜನೆ ನಿಮ್ಮ ಉಪಯೋಗಕ್ಕೆ ಬರುತ್ತದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 'ಉಚಿತ ಹೊಲಿಗೆ ಯಂತ್ರ ಯೋಜನೆ 2022' ಅನ್ನು ಪ್ರಾರಂಭಿಸಿದಾರೆ.

Imp Ideas : ತೆರಿಗೆ ಕಟ್ಟದೆಯೇ 10 ಲಕ್ಷದವರೆಗಿನ ಹಣ ಉಳಿತಾಯ! ಇಲ್ಲಿವೆ ಮಹತ್ವದ Tips…!

ಪ್ರಧಾನ ಮಂತ್ರಿ ಹೊಲಿಗೆ ಯಂತ್ರ ಯೋಜನೆ: ನೀವು ಮನೆಯಲ್ಲಿ ಕುಳಿತು ಹೊಲಿಗೆ ಕೆಲಸ ಮಾಡುವ ಮೂಲಕ ನಿಮ್ಮ ಆದಾಯವನ್ನು ಗಳಿಸಲು ಬಯಸಿದರೆ, ಈ ಯೋಜನೆಯು ನಿಮ್ಮ ಉಪಯೋಗಕ್ಕೆ ಬರುತ್ತದೆ.  ದೇಶದ ಮಹಿಳೆಯರಿಗೆ ಉದ್ಯೋಗ ಕಲ್ಪಿಸಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ಏನಿದು ಯೋಜನೆ..?

ಯೋಜನೆಯಡಿ ಕೇಂದ್ರ ಸರಕಾರದಿಂದ ಬಡವರು ಮತ್ತು ಕೂಲಿ ಕಾರ್ಮಿಕರಿಗೆ ಉಚಿತವಾಗಿ ಹೊಲಿಗೆ ಯಂತ್ರಗಳನ್ನು ನೀಡಲಾಗುತ್ತಿದೆ. ಈ ಯೋಜನೆಯ ಮೂಲಕ ಮಹಿಳೆಯರು ಹೊಲಿಗೆ ಯಂತ್ರದೊಂದಿಗೆ ಮನೆಯಲ್ಲೇ ಕುಳಿತು ಉದ್ಯೋಗ ಆರಂಭಿಸಬಹುದು. ಹೊಲಿಗೆ ಯಂತ್ರವನ್ನು ಪಡೆಯಲು ನೀವು ಅರ್ಜಿ ಸಲ್ಲಿಸಬೇಕು. ಪ್ರತಿ ರಾಜ್ಯದ 50,000 ಮಹಿಳೆಯರಿಗೆ ಈ ಯೋಜನೆಯ ಅಡಿಯಲ್ಲಿ ಹೊಲಿಗೆ ಯಂತ್ರಗಳನ್ನು ನೀಡಲಾಗಿದೆ.

ಮಹಿಳೆಯರು ಆರ್ಥಿಕವಾಗಿ ಸ್ವತಂತ್ರರಾಗುವ ಅವಕಾಶ

ಪ್ರಧಾನಮಂತ್ರಿ ಉಚಿತ ಸಹೊಲಿಗೆ ಯಂತ್ರ ಯೋಜನೆಯೊಂದಿಗೆ ದೇಶದ ಮಹಿಳೆಯರು ಆರ್ಥಿಕವಾಗಿ ಸ್ವತಂತ್ರರಾಗುವ ಅವಕಾಶವನ್ನು ಪಡೆಯುತ್ತಾರೆ. 20 ರಿಂದ 40 ವರ್ಷ ವಯಸ್ಸಿನ ಮಹಿಳೆಯರು ಉಚಿತ ಹೊಲಿಗೆ ಯಂತ್ರ ಯೋಜನೆ 2022 ರ ಅಡಿಯಲ್ಲಿ ಅರ್ಜಿ ಸಲ್ಲಿಸಬಹುದು. ಅವರು ಹೊಲಿಗೆ ಯಂತ್ರಕ್ಕಾಗಿ ಒಂದು ರೂಪಾಯಿ ಖರ್ಚು ಮಾಡುವ ಅಗತ್ಯವಿಲ್ಲ.

ಪಿಎಂ ಕಿಸಾನ್: 11ನೇ ಕಂತು ಶೀಘ್ರದಲ್ಲೆ ಬಿಡುಗಡೆ! ಫಲಾನುಭವಿಗಳ ಪಟ್ಟಿಯಲ್ಲಿ ಈಗಲೇ ನಿಮ್ಮ ಹೆಸರು ಪರಿಶೀಲಿಸಿ

ಈ 4 ಸ್ಟೆಪ್ಸ್‌ಗಳಿಂದ E-mail ಐಡಿ ಹಾಗೂ ಮೊಬೈಲ್‌ ನಂಬರ್‌ ಅನ್ನು ಆಧಾರ್‌ ಕಾರ್ಡ್‌ಗೆ ಲಿಂಕ್‌ ಮಾಡಿ

ಸಂಪೂರ್ಣವಾಗಿ ಉಚಿತ

ಸರ್ಕಾರದ ಈ ಯೋಜನೆಯಡಿ ಗ್ರಾಮ ಮತ್ತು ನಗರಗಳ ಮಹಿಳೆಯರು ಅರ್ಜಿ ಸಲ್ಲಿಸಬಹುದು. ಯೋಜನೆಯ ಅಡಿಯಲ್ಲಿ ಹೊಲಿಗೆ ಯಂತ್ರವನ್ನು ಪಡೆಯಲು, ನಿಮಗೆ ಕೆಲ ದಾಖಲೆಗಳು ಬೇಕಾಗುತ್ತವೆ: ಆಧಾರ್ ಕಾರ್ಡ್, ಜನ್ಮ ದಿನಾಂಕ ಪ್ರಮಾಣಪತ್ರ, ಆದಾಯ ಪುರಾವೆ, ಪಾಸ್‌ಪೋರ್ಟ್ ಗಾತ್ರದ ಫೋಟೋ ಮತ್ತು ಮೊಬೈಲ್ ಸಂಖ್ಯೆ ಇತ್ಯಾದಿ. ಅರ್ಜಿದಾರರು ಅಂಗವಿಕಲರಾಗಿದ್ದರೆ ಅಥವಾ ವಿಧವೆಯಾಗಿದ್ದರೆ, ಅವರು ಸಂಬಂಧಿತ ಪ್ರಮಾಣಪತ್ರವನ್ನು ಹೊಂದಿರಬೇಕು.

ಅರ್ಜಿ ಸಲ್ಲಿಕೆ ಹೇಗೆ..?

ಮೊದಲು ನೀವು www.india.gov.in ವೆಬ್‌ಸೈಟ್‌ಗೆ ಹೋಗಿ . ಇಲ್ಲಿಂದ ಉಚಿತ ಹೊಲಿಗೆ ಯಂತ್ರವನ್ನು ಪಡೆಯಲು ನೀಡಿರುವ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ. ಇದರ ನಂತರ ಈ ಅರ್ಜಿ ನಮೂನೆಯಲ್ಲಿ ನಿಮ್ಮ ವಿವರಗಳನ್ನು ಭರ್ತಿ ಮಾಡಿ. ಕೊನೆಯಲ್ಲಿ, ಕೇಳಲಾದ ನಿಮ್ಮ ಡಾಕ್ಯುಮೆಂಟ್‌ಗಳ ಫೋಟೋ ಸ್ಥಿತಿಯನ್ನು ಲಗತ್ತಿಸಬೇಕು.

ಮಹತ್ವದ ನ್ಯೂಸ್‌: ಕ್ರೆಡಿಟ್‌ ಕಾರ್ಡ್‌ಗಳಿಗೆ ಹೊಸ ನಿಯಮ ತಂದ RBI..ಭಾರೀ ಬದಲಾವಣೆ

ನೌಕರರಿಗೆ Good News! EPFO ಉದ್ಯೋಗಿಗಳ ಖಾತೆಗೆ ಶೀಘ್ರದಲ್ಲೆ ಬರಲಿದೆ ಬಡ್ಡಿ ಹಣ! ಈಗಲೇ ಚೆಕ್‌ ಮಾಡಿ

ಅರ್ಜಿ ನಮೂನೆಯನ್ನು ಪರಿಶೀಲಿಸಲಾಗುತ್ತದೆ

ಅರ್ಜಿ ನಮೂನೆಯನ್ನು ಸಂಬಂಧಪಟ್ಟ ಕಚೇರಿಗೆ ಸಲ್ಲಿಸಿದ ನಂತರ, ನಿಮ್ಮ ಅರ್ಜಿಯನ್ನು ಪರಿಶೀಲಿಸಲಾಗುತ್ತದೆ. ಇದರ ನಂತರ ನಿಮ್ಮ ಅರ್ಜಿ ನಮೂನೆಯನ್ನು ಸಂಬಂಧಪಟ್ಟ ಕಚೇರಿಯ ಅಧಿಕಾರಿ ಪರಿಶೀಲಿಸುತ್ತಾರೆ. ಇದರ ನಂತರ ನಿಮಗೆ ಉಚಿತ ಹೊಲಿಗೆ ಯಂತ್ರವನ್ನು ನೀಡಲಾಗುವುದು.

ಯೋಜನೆಗೆ ಅರ್ಹತೆ

ಪ್ರಧಾನ ಮಂತ್ರಿ ಉಚಿತ ಹೊಲಿಗೆ ಯಂತ್ರ ಯೋಜನೆ 2022 ಅಡಿಯಲ್ಲಿ ಅರ್ಜಿ ಸಲ್ಲಿಸುವ ಮಹಿಳೆಯರ ವಯಸ್ಸು 20 ರಿಂದ 40 ವರ್ಷಗಳ ನಡುವೆ ಇರಬೇಕು. ಯೋಜನೆಯಡಿ ಅರ್ಜಿ ಸಲ್ಲಿಸುವ  ಕಾರ್ಮಿಕ ಮಹಿಳೆಯ ಪತಿಯ ಆದಾಯ ರೂ.12,000 ಮೀರಬಾರದು. ಆರ್ಥಿಕವಾಗಿ ದುರ್ಬಲವಾಗಿರುವ ಮಹಿಳೆಯರು ಮಾತ್ರ ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಈ ಕೇಂದ್ರ ಯೋಜನೆಗಾಗಿ, ಪ್ರತಿ ರಾಜ್ಯದಲ್ಲಿ 50 ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರಗಳನ್ನು ನೀಡಲಾಗುತ್ತದೆ.

Published On: 20 May 2022, 03:50 PM English Summary: Free sewing Machine scheme how to Aplly

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.