ನಿಮ್ಮ ಮನೆಯಲ್ಲಿ ತರಕಾರಿ ತೋಟ ಮಾಡಲು ನೀವು ಯೋಚಿಸುತ್ತಿದ್ದೀರಾ. ನೀವು ಮನೆಯ ಮೇಲ್ಛಾವಣಿ ಅಥವಾ ಮನೆಯ ಮಂದೆ ವಿವಿಧ ಬಗೆಯ ತರಕಾರಿಗಳನ್ನು ಬೆಳೆಯಬೇಕೆಂದುಕೊಂಡಿದ್ದರೆ ನಿಮಗಾಗಿ ಸಂತಸದ ಸುದ್ದಿ ಇದೆ.
ನೆಕ್ಟ್ ಸ್ಟೋರ್ ಅಡಿಯಲ್ಲಿ ಕೆಲಸ ಮಾಡುತ್ತಿರುವ ಫುಡ್ ಕೇರ್ ಇನ್ ಉಚಿತವಾಗಿ ತರಕಾರಿ ಬೀಜಗಳನ್ನು ವಿತರಿಸಲು ಹೊಸದೊಂದು ವಿಶೇಷ ಅಭಿಯಾನವನ್ನು ಆರಂಭಿಸಿದೆ. ನೀವು ತರಕಾರಿ ಬೀಜಕ್ಕಾಗಿ ಕೇವಲ ಪೋಸ್ಟಲ್ ಚಾರ್ಜ್ ಅಷ್ಟೇ ಕಟ್ಟಬೇಕಾಗುತ್ತದೆ.
ಫುಡ್ ಕೇರ್ ಎಂಬುದು 'Nextztore' ಅಡಿಯಲ್ಲಿ ಕೆಲಸ ಮಾಡುತ್ತಿರುವ ಕೃಷಿ-ಮಾರುಕಟ್ಟೆ ಪೋರ್ಟಲ್ ಆಗಿದೆ. ಇದು ಮನೆಯಲ್ಲಿ ತರಕಾರಿ ತೋಟ' ಎಂಬ ಕಾರ್ಯಕ್ರಮದಡಿ ಗಿಡಗಳನ್ನು ನೆಡಲು ಉಚಿತ ಬೀಜಗಳನ್ನು ನೀಡುತ್ತದೆ.
ಪ್ರತಿ ಬೀಜದ ಪ್ಯಾಕೆಟ್ ನಲ್ಲಿ 5 ಬಗೆಯ ಬೀಜಗಳು 20 ಗ್ರಾಂವರೆಗೆ ಇರುತ್ತದೆ. ಉದಾಹರಣೆಗೆ ಅವರೆಕಾಳು, ಬೆಂಡೆ, ಮೆಣಸಿನಕಾಯಿ, ಟೊಮ್ಯಾಟೊ, ಈರುಳ್ಳಿ ಹೀಗೆ ಐದು ಬಗೆಯ ತರಕಾರಿ ಬೀಜಗಳ ಪ್ಯಾಕೇಟ್ ಇದಾಗಿರುತ್ತದೆ. ಋತುಮಾನಕ್ಕೆ ಅನುಗುಣವಾಗಿ ಬೇರೆ ಬೇರೆ ಬೀಜಗಳ ಪ್ಯಾಕೆಟ್ ಇದಾಗಿರುತ್ತದೆ. ಬೀಜಗಳನ್ನು ಉಚಿತವಾಗಿ ನೀಡಲಾಗುತ್ತದೆ ಆದರೆ ಖರೀದಿದಾರನು ಪ್ಯಾಕಿಂಗ್ ಮತ್ತು ಅಂಚೆ ಶುಲ್ಕಗಳನ್ನು ಮಾತ್ರ ಪಾವತಿಸಬೇಕು.
ಸಾಮಾನ್ಯ ಪೋಸ್ಟ್ 19 ರೂಪಾಯಿ, ಕೊರಿಯರ್/ಸ್ಪೀಡ್ ಪೋಸ್ಟ್ 49 ರೂಪಾಯಿ ಪಾವತಿಸಬೇಕು. ಒಬ್ಬ ವ್ಯಕ್ತಿಗೆ ಒಂದು ಪ್ಯಾಕೆಟ್ ಮಾತ್ರ ನೀಡಲಾಗುವುದು. ಎಲ್ಲಾ ಆರ್ಡರ್ ಗಳನ್ನು ಆನ್ ಲೈನ್ ನಲ್ಲಿ ಮಾಡಬೇಕು.
ಐದು ಬೀಜದ ತಳಿಗಳುಳ್ಳ ಪ್ಯಾಕೇಟ್ ಮೌಲ್ಯ 65 ರೂಪಾಯಿ ಆದರೆ ಈ ಅಭಿಯಾನದ ಅಂಗವಾಗಿ ಬೀಜಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ.
ಇಂಡಿಯಾ ಪೋಸ್ಟ್ : ಸಾಮಾನ್ಯ ಪೋಸ್ಟಲ್ ದರ 19 ರೂಪಾಯಿ ಇರುತ್ತದೆ. ಒಂದು ವೇಳೆ ನೀವು ಸ್ಟೀಡ್ ಪೋಸ್ಟ್ ನಲ್ಲಿ ತರಿಸಬೇಕೆಂದುಕೊಂಡಿದ್ದರೆ 49 ರೂಪಾಯಿ ಪಾವತಿಸಬೇಕಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ Whatsaap :999-545-1245 ಕರೆ ಮಾಡಬಹುದು. ಇನ್ನೂ ಹೆಚ್ಚಿನ ಮಾಹಿತಿಗಾಗಿ Food Care INDIA, Nextztore Global, foodcare.in ಅಥವಾ https://foodcare.in/collections/seed-division/products/free-seed ಲಿಂಕ್ ಕ್ಲಿಕ್ ಮಾಡಿದರೆ ಎಲ್ಲಾ ತರಕಾರಿ ಹಾಗೂ ಇತರ ಬೀಜಗಳ ಮಾಹಿತಿ ಇರುತ್ತದೆ.
Share your comments