1..
ಕಲ್ಯಾಣ ಕರ್ನಾಟಕ ಮಾನವ ಕೃಷಿ ಅಭಿವೃದ್ಧಿ ವಿಭಾಗದಡಿಯಲ್ಲಿ ಕಲ್ಯಾಣ ಕರ್ನಾಟಕ ವಿಭಾಗ ವ್ಯಾಪ್ತಿಯ 7 ಜಿಲ್ಲೆಗಳಲ್ಲಿನ ರೈತರಿಗೆ, ವಿವಿಧ ಹಣ್ಣಿನ ಸಸಿಗಳನ್ನು ಪೂರೈಸುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕøತಿಕ ಸಂಘ ಕಲಬುರಗಿ ವಿಭಾಗ ಕಾರ್ಯದರ್ಶಿ ಅವರು ತಿಳಿಸಿದ್ದಾರೆ. ಕಲಬುರಗಿ ಬೀದರ, ರಾಯಚೂರು, ಕೊಪ್ಪಳ, ಬಳ್ಳಾರಿ, ಯಾದಗಿರ, ಹಾಗೂ ವಿಜಯನಗರ, ಸೇರಿದಂತೆ 7 ಜಿಲ್ಲೆಗಳ ರೈತರಿಂದ ಆನ್‍ಲೈನ್ ಮುಖಾಂತರ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬಹುದು.ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 9.
2..
ಧಾರವಾಡದ ಗ್ರಾಮೀಣ ಮತ್ತು ಸಣ್ಣ ಉದ್ಯಮ ವಿಭಾಗ, ಜಿಲ್ಲಾ ಪಂಚಾಯತ್ ಧಾರವಾಡ ವತಿಯಿಂದ 2022-23 ನೇ ಸಾಲಿನ ವಿಚಾರಗೋಷ್ಠಿಗಳು, ಕ್ಷೇತ್ರೋತ್ಸವಗಳು ಮತ್ತು ವಸ್ತು ಪ್ರದರ್ಶನ ಯೋಜನೆಯಡಿ,7 ದಿನಗಳ ಜಿಲ್ಲಾ ಮಟ್ಟದ ಕೈಗಾರಿಕಾ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಏರ್ಪಡಿಸಲಾಗಿದೆ. ಕಲಾಭವನದ ಕಡಪಾ ಮೈದಾನದಲ್ಲಿ ಮಾ.8 ರಿಂದ 14 ರ ವರೆಗೆ ನಡೆಯುವ ಈ ವಸ್ತು ಪ್ರದರ್ಶನದಲ್ಲಿ ಗ್ರಾಮೀಣ ಭಾಗದ ಕುಶಲಕರ್ಮಿಗಳು, ಹಾಗೂ ಗುಡಿ ಕೈಗಾರಿಕೆಗಳ ಉತ್ಪನ್ನಗಳಿಗೆ ಪ್ರಚಾರ ಒದಗಿಸಿ, ಮಾರುಕಟ್ಟೆ ಸೌಲಭ್ಯವನ್ನು ಒದಗಿಸುವ ದೃಷ್ಟಿಯಿಂದ ವಸ್ತು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.
ಶೇ 90 ರಷ್ಟು ಸಬ್ಸಿಡಿಯಲ್ಲಿ ಕೃಷಿ ಉತ್ಪನ್ನಗಳ ಸಂಸ್ಕರಣಾ ಸಲಕರಣೆಗಳಿಗಾಗಿ ಅರ್ಜಿ ಆಹ್ವಾನ
*-*-*-*
3..
2023-24 ನೇ ಸಾಲಿಗೆ ಭಾರತ ಸರ್ಕಾರವು ಅಗ್ನಿವೀರ್ ನೇಮಕಾತಿ ಯೋಜನೆಯಡಿ ಸಶಸ್ತ್ರ ಪಡೆಗೆ ನೇಮಕಾತಿ ಮಾಡಿಕೊಳ್ಳಲು ಆನ್‍ಲೈನ್ ನೋಂದಣಿಯನ್ನು ಆರಂಭಿಸಿದ್ದು, ಮಾರ್ಚ್ 15 ರವರೆಗೆ ನೋಂದಣಿ ಮಾಡಿಕೊಳ್ಳಬಹುದು. ಅಗ್ನಿವೀರ್ ನೇಮಕಾತಿಯ ಪರೀಕ್ಷೆಗಳು ಏಪ್ರಿಲ್ 17 ರಿಂದ ಆರಂಭವಾಗಲಿದ್ದು ಫೇಸ್-1 ರಲ್ಲಿ ಆನ್‍ಲೈನ್ ಕಂಪ್ಯೂಟರ್ ಆಧಾರಿತ ಸಾಮಾನ್ಯ ಪ್ರವೇಶ ಪರೀಕ್ಷೆ ಮತ್ತು ಫೇಸ್-2 ರಲ್ಲಿ ನೇಮಕಾತಿ ರ್ಯಾಲಿ ಮತ್ತು ವೈದ್ಯಕೀಯ ಪರೀಕ್ಷೆ ನಡೆಯಲಿದೆ. ಆನ್‍ಲೈನ್ ನೋಂದಣಿ ಮತ್ತು ಪರೀಕ್ಷೆ ಕುರಿತಾದ ಹೆಚ್ಚಿನ ಮಾಹಿತಿಯನ್ನು ವೆಬ್‍ಸೈಟ್ ಗೆ ಭೇಟಿ ನೀಡಿ ಪಡೆದುಕೊಳ್ಳಬಹು..
-*-*-*
4..
ನಿಯಮ ಉಲ್ಲಂಘಿಸಿದ್ದರೆ ಶೇ50ರಷ್ಟು ರಿಯಾಯಿತಿ ಪಾವತಿ ಮಾಡುವುದಕ್ಕೆ ಸಂಬಂಧಿಸಿದಂತೆ ಜನರಿಂದ ಅತ್ಯುತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ.ಶೇ50ರಷ್ಟು ದಂಡ ಕಡಿತವಾದ ಬೆನ್ನಲ್ಲೇ ಸಾವಿರಾರೂ ಜನ ಸರತಿ ಸಾಲಿನಲ್ಲಿ ನಿಂತಂತೆ ಹಲವರು ದಂಡ ಪಾವತಿ ಮಾಡುತ್ತಿದ್ದಾರೆ. ಬಾಕಿ ಇರುವ ಸಂಚಾರ ನಿಯಮ ಉಲ್ಲಂಘನೆ ದಂಡ ವಸೂಲಿಗೆ ಸಂಬಂಧಿಸಿದಂತೆ ರಾಜ್ಯ ಸಾರಿಗೆ ಇಲಾಖೆಯು ಶೇ.50 ರಷ್ಟು ರಿಯಾಯಿತಿ ಘೋಷಿಸಿದೆ. ಇದಕ್ಕೆ ಸಂಬಂಧಿಸಿದಂತೆ ಜನರಿದಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಟ್ರಾಫಿಕ್ ಪೊಲೀಸ್ ಖಜಾನೆಗೆ ಕೋಟಿ ಕೋಟಿ ರೂಪಾಯಿ ಸಂಗ್ರಹವಾಗಿದೆ. ಇದೀಗ ಶೇ 50ರಷ್ಟು ದಂಡ ಪಾವತಿಗೆ ಮಾರ್ಚ್ 4ರಿಂದ 15 ದಿನಗಳ ಕಾಲಾವಕಾಶ ನೀಡಿದೆ. ಈ ಮೂಲಕ ಮತ್ತೇ ದಿನಗಳವರೆಗೆ ಕಾಲಾವಕಾಶವನ್ನು ವಿಸ್ತರಿಸಲಾಗಿದೆ.
PMKSY ಸಬ್ಸಿಡಿಗೆ ಅರ್ಜಿ ಆಹ್ವಾನ | SSLC, PUC ವಿದ್ಯಾರ್ಥಿಗಳಿಗೆ Exam ನಲ್ಲಿ ಈ ಬಾರಿಯು ಕೃಪಾಂಕ
5..
ಪ್ರತಿ ವರ್ಷ ಕೃಷಿ ವಿಜ್ಞಾನ ಮೇಳವನ್ನು ರಾಷ್ಟ್ರ ರಾಜಧಾನಿಯಲ್ಲಿ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ಪೂಸಾ ಮತ್ತು ಭಾರತೀಯ ಕೃಷಿ ಸಂಶೋಧನಾ ಮಂಡಳಿಆಯೋಜಿಸುತ್ತದೆ. ಈ ಬಾರಿಯ ಪೂಸಾ ಕೃಷಿ ವಿಜ್ಞಾನ ಮೇಳ 2023 ಮಾರ್ಚ್ 2 ರಿಂದ 4 ರವರೆಗೆ ನವದೆಹಲಿಯ ಪುಸಾದ ಮೇಳ ಮೈದಾನದಲ್ಲಿ ನಡೆಯುತ್ತಿದೆ. ಮೂರು ದಿನಗಳ ಪೂಸಾ ಕೃಷಿ ವಿಜ್ಞಾನ ಮೇಳ 2023 ಅನ್ನು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಉದ್ಘಾಟಿಸಿದ್ದರು. ಮೇಳದಲ್ಲಿ ದೇಶದ ವಿವಿಧ ಏಜೆನ್ಸಿಗಳಿಂದ ಜೈವಿಕ ಗೊಬ್ಬರಗಳು ಮತ್ತು ಕೃಷಿ-ರಾಸಾಯನಿಕಗಳ ಪ್ರಾತ್ಯಕ್ಷಿಕೆ ಮತ್ತು ಮಾರಾಟ.. ರೈತರ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ. ಸಮರ್ಥ ನೀರಿನ ಬಳಕೆಗಾಗಿ ನೀರಾವರಿ ತಂತ್ರಗಳು ಸೇರಿದಂತೆ ಅನೇಕ ವಿಚಾರಗಳ ಕುರಿತು ಪ್ರಾತ್ಯಕ್ಷಿಕೆ ಹಾಗೂ ಮಾಹಿತಿಯನ್ನು ನೀಡುವ ಈ ಮೇಳ ಇಂದು ಅಂತ್ಯಗೊಳ್ಳಲಿದೆ.
6..
ಮಡಿಕೇರಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ, ನಗರದ ರಾಜಸೀಟು ಉದ್ಯಾನವನದಲ್ಲಿ ನಿರ್ಮಾಣವಾದ ಸಾಹಸ ಕ್ರೀಡೆಯನ್ನು ಶಾಸಕರಾದ ಕೆ.ಜಿ.ಬೋಪಯ್ಯ ಮತ್ತು ಎಂ.ಪಿ.ಅಪ್ಪಚ್ಚು ರಂಜನ್ ಅವರು ಶುಕ್ರವಾರ ವೀಕ್ಷಿಸಿದರು. ನಂತರ ಮಾತನಾಡಿದ ಶಾಸಕರಾದ ಕೆ.ಜಿ.ಬೋಪಯ್ಯ ಅವರು ರಾಜಸೀಟು ಆಕರ್ಷಣೀಯ ಸ್ಥಳವಾಗಿದೆ. ತೋಟಗಾರಿಕೆ ಮತ್ತು ಜಿಲ್ಲಾಡಳಿತದಿಂದ ಬೇರೆ ಬೇರೆ ಮನೋರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದೊಂದು ವಿನೂತನ ಕಾರ್ಯಕ್ರಮವಾಗಿದೆ. ಖಾಸಗಿ ಸಹಭಾಗಿತ್ವದಲ್ಲಿ ಸಾಹಸ ಕ್ರೀಡೆಗೆ ಚಾಲನೆ ನೀಡಲಾಗಿದೆ ಎಂದರು.
Share your comments