1. ಸುದ್ದಿಗಳು

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬಂಧನ!

Hitesh
Hitesh
Former US President Donald Trump arrested!

ರೈತರಿಗೆ ಪ್ರಮುಖ ಸುದ್ದಿಗಳನ್ನು ಪರಿಚಯಿಸುವ ಉದ್ದೇಶದಿಂದ ಕೃಷಿ ಜಾಗರಣ ಅಗ್ರಿನ್ಯೂಸ್‌ ಪರಿಚಯಿಸಿದ್ದು, ಇಂದಿನ ಪ್ರಮುಖ ಸುದ್ದಿಗಳು ಈ ರೀತಿ ಇವೆ.

1.ವೀಳ್ಯದೆಲೆಗೆ ಗ್ರೀನ್ ಟೀ ರೂಪ ನೀಡಿದ ಕನ್ನಡಿಗ!
2. ಸ್ಟ್ಯಾಂಡಪ್ ಇಂಡಿಯಾ ಮೂಲಕ 1.8 ಲಕ್ಷ ಉದ್ಯಮಿಗಳಿಗೆ ಸಾಲ
3. ನಮ್ಮೂರು ನಮ್ಮ ಕೆರೆ: ರಾಜ್ಯದಲ್ಲಿ 116 ಕೆರೆಗಳ ಪುನಶ್ಚೇತನ!
4. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಏಪ್ರಿಲ್‌ 7ರ ವರೆಗೆ ಮಳೆ
5. ಜಲ ಜೀವನ್ ಮಿಷನ್; ಲಕ್ಷಾಂತರ ಹಳ್ಳಿಗಳಿಗೆ ನೀರು
6. ಸರ್ಕಾರಿ ನೌಕರರಿಗೆ ಶೀಘ್ರ 3 ತಿಂಗಳ ಬಾಕಿ ಡಿ.ಎ
7. 50 ಕ್ವಿಂಟಾಲ್‌ ಒಣಮೆ.ಣಸಿನ ಕಾಯಿ ರಾಶಿಗೆ ಬೆಂಕಿ ಹಚ್ಚಿದ ದುಷ್ಕರ್ಮಿ!
8. 30 ಕುರಿಗಳ ಮೇಲೆ ಲಾರಿ ಚಲಾಯಿಸಿದ ಚಾಲಕ!
9. ನಟ ಕಿಚ್ಚ ಸುದೀಪ್‌ಗೆ ಬೆದರಿಕೆ ಪತ್ರ!
10. ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬಂಧನ!

2. 'ಸ್ಟ್ಯಾಂಡಪ್ ಇಂಡಿಯಾ' ಯೋಜನೆಯು ಏಳು ವರ್ಷ ಪೂರೈಸಿದೆ.

ಮಹಿಳೆಯರು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಡಗದವರಲ್ಲಿ ಉದ್ಯಮಶೀಲತೆಯನ್ನು ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಈ ಯೋಜನೆಯನ್ನು ಪರಿಚಯಿಸಿದೆ.

ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು, 'ಸ್ಟ್ಯಾಂಡಪ್ ಇಂಡಿಯಾ'

ಯೋಜನೆಯ ಮೂಲಕ 40,600 ಕೋಟಿ ರೂ.ಗಿಂತ ಹೆಚ್ಚಿನ ಸಾಲವನ್ನು ಮಂಜೂರು ಮಾಡಿರುವುದು ನನಗೆ ತುಂಬಾ ಹೆಮ್ಮೆ ಮತ್ತು ತೃಪ್ತಿ ತಂದಿದೆ.

ದೇಶಾದ್ಯಂತ 1.8 ಲಕ್ಷಕ್ಕೂ ಹೆಚ್ಚು ಉದ್ಯಮಿಗಳಿಗೆ ಸಾಲದ ಖಾತೆಗಳು ಇದೆ ಎಂದಿದ್ದಾರೆ.  
---------------------

3. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ‘ನಮ್ಮೂರು ನಮ್ಮ ಕೆರೆ’ ಯೋಜನೆಯಡಿ ಈ ವರ್ಷ 100 ದಿನಗಳಲ್ಲಿ ರಾಜ್ಯದಲ್ಲಿ 116 ಕೆರೆಗಳ ಪುನಶ್ಚೇತನ

ಕಾರ್ಯ ಕೈಗೊಳ್ಳಲಾಗಿದೆ ಎಂದು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್. ಮಂಜುನಾಥ್‌ ತಿಳಿಸಿದ್ದಾರೆ.

ರಾಜ್ಯದಲ್ಲಿ ಅಂದಾಜು 36 ಸಾವಿರ ಕೆರೆಗಳಿರುವ ಮಾಹಿತಿ ಇದೆ ಎಂದಿದ್ದಾರೆ. ಧರ್ಮಸ್ಥಳದ ಧರ್ಮಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು

ಹಾಗೂ ಹೇಮಾವತಿ ವಿ.ಹೆಗ್ಗಡೆ ಅವರು 2016ರಲ್ಲಿ ಪಾರಂಪರಿಕ ಕೆರೆಗಳ ಪುನಶ್ಚೇತನಕ್ಕಾಗಿ ‘ನಮ್ಮೂರು ನಮ್ಮ ಕೆರೆ’ ಕಾರ್ಯಕ್ರಮವನ್ನು ಪ್ರಾರಂಭಿಸಿದರು.
---------------------
4. ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿದ್ದು, ಏಪ್ರಿಲ್‌ 7ರವರೆಗೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಚಾಮರಾಜನಗರ, ರಾಮನಗರ, ಬೆಂಗಳೂರು, ಮೈಸೂರು, ಮಂಡ್ಯ ಹಾಗೂ ಕೋಲಾರದಲ್ಲಿ ಮಳೆಯಾಗಿರುವುದು ವರದಿ ಆಗಿದೆ.

ಇನ್ನು ರಾಜ್ಯದಲ್ಲಿ ಮುಂದಿನ ಮೂರು ದಿನಗಳ ಕಾಲ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಏಪ್ರಿಲ್‌ 5ರವರೆಗೆ ದಕ್ಷಿಣ ಒಳನಾಡಿನಲ್ಲಿ, ಏಪ್ರಿಲ್‌ 6 ಮತ್ತು ಏಪ್ರಿಲ್‌ 7ರಂದು ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ.

ಏ.5 ರಂದು ಚಾಮರಾಜನಗರ ಮತ್ತು ಕೋಲಾರದಲ್ಲಿ ಹಾಗೂ ಏಪ್ರಿಲ್‌ 6ರಂದು ಉತ್ತರ ಒಳನಾಡಿನ ಬೀದರ್‌,

ಕಲಬುರಗಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳಲ್ಲಿ ಮಳೆಯಾಗಲಿದೆ.

ಏಪ್ರಿಲ್‌ 7ರಂದು ಕರಾವಳಿ ಮತ್ತು ಉತ್ತರ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ ಚಿತ್ರದುರ್ಗ, ದಾವಣಗೆರೆ ಹಾಗೂ

ಕೊಡಗು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.  
--------------------- 

ಜಲ ಜೀವನ್ ಮಿಷನ್; ಲಕ್ಷಾಂತರ ಹಳ್ಳಿಗಳಿಗೆ ನೀರು

---------------------
5. ಜಲ ಜೀವನ್ ಮಿಷನ್ ಯೋಜನೆಯಡಿ 60% ಗ್ರಾಮೀಣ ಕುಟುಂಬಗಳಿಗೆ ನಲ್ಲಿಗಳ ಮೂಲಕ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.

ಭಾರತದಲ್ಲಿ 1.55 ಲಕ್ಷಕ್ಕೂ ಹೆಚ್ಚು ಹಳ್ಳಿಗಳಲ್ಲಿ (ಒಟ್ಟು ಹಳ್ಳಿಗಳ 25%), ಇದುವರೆಗೆ 'ಹರ್ ಘರ್ ಜಲ್'(Har Ghar Jal) ಯೋಜನೆ ಅನುಷ್ಠಾನ ಮಾಡಿರುವುದು ವರದಿ ಆಗಿದೆ.   

2023ರ ಮೊದಲ ಮೂರು ತಿಂಗಳಲ್ಲಿ, ಸರಾಸರಿ 86,894 ಹೊಸ ಟ್ಯಾಪ್ ವಾಟರ್ ಸಂಪರ್ಕಗಳನ್ನು ಪ್ರತಿದಿನ ಒದಗಿಸಲಾಗಿದೆ ಎನ್ನಲಾಗಿದೆ.  
-------------------------
6. ಸರ್ಕಾರಿ ನೌಕರರಿಗೆ 3 ತಿಂಗಳ ಬಾಕಿ ಡಿಎ ನೀಡುವುದಾಗಿ ಸರ್ಕಾರ ಘೋಷಿಸಿದೆ.

ಜನವರಿ 1 ನೇ ತಾರೀಖಿನಿಂದ ರಾಜ್ಯ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಸೇರಿದಂತೆ ಅಖಿಲ ಭಾರತ ಸೇವಾ ಅಧಿಕಾರಿಗಳಿಗೆ ಶೇಕಡಾ 4 ರಷ್ಟು ತುಟ್ಟಿಭತ್ಯೆ ಹೆಚ್ಚಿಸಲಾಗಿದೆ.

ಸರ್ಕಾರಿ ನೌಕರರಿಗೆ ಇದೊಂದು ಭರ್ಜರಿ ಸುದ್ದಿಯಾಗಿದ್ದು, ಶೀಘ್ರವೇ ಡಿಎ ಹೆಚ್ಚಳಕ್ಕೆ ಅನುಮೋದನೆ ಸಿಗಲಿದೆ.

ಜನವರಿ 1ರಿಂದ ಜಾರಿಗೆ ಬರುವಂತೆ ಸರ್ಕಾರಿ ನೌಕರರ ತುಟ್ಟಿ ಭತ್ಯೆಯಲ್ಲಿ ಹೆಚ್ಚಳ ಮಾಡಲಾಗಿದೆ ಎಂದು ತಿಳಿದು ಬಂದಿದ್ದು, ನೌಕರರಿಗೆ ತುಟ್ಟಿಭತ್ಯೆಯನ್ನು ಶೇ.4ರಷ್ಟು ಹೆಚ್ಚಳ ಮಾಡಲಾಗಿದೆ.

ಈ ಹೆಚ್ಚಳದೊಂದಿಗೆ ನೌಕರರ ಒಟ್ಟು ತುಟ್ಟಿಭತ್ಯೆ ಶೇ.42ಕ್ಕೆ ಏರಿಕೆಯಾಗಿದೆ. ಇದರ ಮೂಲಕ ಸರ್ಕಾರಿ ನೌಕರರ ವೇತನದಲ್ಲಿ ಏರಿಕೆಯಾಗಲಿದೆ ಎನ್ನಲಾಗಿದೆ.
-------------------------

7.ಕೆಲವರು ರೈತರು ಬೆಳೆದ ಬೆಳೆಗೆ ಬೆಂಕಿ ಇಟ್ಟು ವಿಕೃತಿ ಮೆರೆಯುವುದು ವರದಿ ಆಗುತ್ತಿರುತ್ತದೆ.

ಅದೇ ರೀತಿ ಘಟನೆ ಇದೀಗ ಆಂಧ್ರಪ್ರದೇಶದ ಎನ್‌ಟಿಆರ್ ಜಿಲ್ಲೆಯಲ್ಲಿ ನಡೆದಿದೆ.

ರೈತರೊಬ್ಬರ 50 ಕ್ವಿಂಟಾಲ್‌ಗೂ ಹೆಚ್ಚಿನ ಒಣಮೆಣಸಿನಕಾಯಿ ರಾಶಿಗೆ ದುಷ್ಕರ್ಮಿಯೊಬ್ಬ ಬೆಂಕಿ ಹಚ್ಚಿದ್ದಾನೆ.

ಬೆಂಕಿಯ ಜ್ವಾಲೆಗೆ ಮೆಣಸಿನಕಾಯಿ ರಾಶಿ ಸುಟ್ಟ ಭಸ್ಮವಾಗಿದ್ದು, ಬರೋಬ್ಬರಿ 15 ಲಕ್ಷ ನಷ್ಟವಾಗಿದ್ದು, ರೈತರ ಆಕ್ರಂದನ ಮುಗಿಲು ಮುಟ್ಟಿತ್ತು.
-------------------------

8.30 ಕುರಿಗಳ ಮೇಲೆ ಲಾರಿ ಚಾಲಕನೊಬ್ಬ ಲಾರಿ ಹತ್ತಿಸಿದ್ದು, ಕುರಿಗಳು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಕುಣಿಗಲ್ ಪಟ್ಟಣದಲ್ಲಿ ಬುಧವಾರ ಮುಂಜಾನೆ ಸಂಭವಿಸಿದೆ.

ಲಾರಿ ಚಾಲಕ 30ಕ್ಕೂ ಹೆಚ್ಚು ಕುರಿಗಳ ಮೇಲೆ ಲಾರಿ ಹತ್ತಿಸಿಕೊಂಡು ವಾಹನ ನಿಲ್ಲಿಸದೆ ಪರಾರಿಯಾಗಿದ್ದಾನೆ.

ತುಮಕೂರು ಜಿಲ್ಲೆಯ ಶಿರಾ ಕಡೆಯ ವಲಸೆ ಕುರಿಗಾಹಿಗಳು, ಕುಣಿಗಲ್ ಪಟ್ಟಣದಲ್ಲಿ ವಾಹನ ಸಂಚಾರಕ್ಕೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುವುದನ್ನು

ತಪ್ಪಿಸುವ ಉದ್ದೇಶದಿಂದ ಬುಧವಾರ ನಸುಕಿನಲ್ಲಿ ಕುರಿಗನ್ನು ಸಾಗಿಸುವಾಗ ಈ ದುರ್ಘಟನೆ ಸಂಭವಿಸಿದೆ.
-------------------------

9. ನಟ ಕಿಚ್ಚ ಸುದೀಪ್‌ ಅವರ ಮನೆಗೆ ಅನಾಮಿಕರು ಎರಡು ಬೆದರಿಕೆ ಪತ್ರಗಳನ್ನು ಕಳುಹಿಸಿದ್ದು,

ಪ್ರಕರಣಕ್ಕೆ ಸಂಬಂಧಿಸಿದಂತೆ ಪುಟ್ಟೇನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಮಾರ್ಚ್ 29ಕ್ಕೆ ಬೆದರಿಕೆ ಪತ್ರಗಳು ಬಂದಿವೆ ಎನ್ನಲಾಗಿದ್ದು, ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.

ಸುದೀಪ್‌ ಅವರು ಬಿಜೆಪಿ ಸೇರುತ್ತಾರೆ ಎಂಬ ಚರ್ಚೆ ಪ್ರಾರಂಭವಾದ ಬೆನ್ನಲ್ಲೇ ಈ ಘಟನೆ ನಡೆದಿದೆ.
-------------------------

10.ಕ್ರಿಮಿನಲ್‌ ಪ್ರಕರಣವೊಂದರಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಬಂಧಿಸಲಾಗಿದೆ.

ಅಲ್ಲಿನ ನೀಲಿಚಿತ್ರ ತಾರೆಗೆ ಹಣ ಸಂದಾಯ ಮಾಡಿದ್ದ ಕ್ರಿಮಿನಲ್‌ ಪ್ರಕರಣದಲ್ಲಿ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು.

ಇದೀಗ  ಡೊನಾಲ್ಡ್‌ ಟ್ರಂಪ್ ಅವರನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.

ಅಮೆರಿಕಾದ ಮ್ಯಾನ್‌ಹಾಟನ್‌ ಜಿಲ್ಲಾ ಅಟಾರ್ನಿಯ ಕೋರ್ಟ್‌ ಸಭಾಂಗಣದಲ್ಲಿ ಟ್ರಂಪ್‌ ಶರಣಾಗಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.

ಅಮೆರಿಕದ ಇತಿಹಾಸದಲ್ಲೇ ಕ್ರಿಮಿನಲ್‌ ಆರೋಪದಲ್ಲಿ ವಿಚಾರಣೆಗೆ ಒಳಗಾಗಿ, ಬಂಧಿಸಲ್ಪಟ್ಟ ಮೊದಲ ಮಾಜಿ  ಅಧ್ಯಕ್ಷ ಟ್ರಂಪ್‌ ಆಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.     

ಇದನ್ನೂ ಓದಿರಿ: ವಿದೇಶದಲ್ಲೂ ಸದ್ದು ಮಾಡ್ತಿದೆ ಕನ್ನಡಿಗನ “ವೀಳ್ಯದೆಲೆ ಟೀ”!

Karnataka Election ಕರ್ನಾಟಕ ಚುನಾವಣೆ ದಿನಾಂಕ ಘೋಷಣೆ, ಮೇ 10ಕ್ಕೆ ಕರ್ನಾಟಕ ಚುನಾವಣೆ!  

Published On: 05 April 2023, 04:13 PM English Summary: Former US President Donald Trump arrested!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.