1. ಸುದ್ದಿಗಳು

ಭುವನೇಶ್ವರದಿಂದ ದುಬೈಗೆ ಮೊದಲ ಅಂತರಾಷ್ಟ್ರೀಯ ವಿಮಾನ ಯಾನಕ್ಕೆ ಚಾಲನೆ

Maltesh
Maltesh
First international flight from Bhubaneswar to Dubai launched

ಒಡಿಶಾ ರಾಜಧಾನಿ ಭುವನೇಶ್ವರದಿಂದ ದುಬೈಗೆ ಮೊದಲ ನೇರ ಅಂತಾರಾಷ್ಟ್ರೀಯ ವಿಮಾನ ಒಡಿಶಾ ರಾಜಧಾನಿ ಭುವನೇಶ್ವರದಲ್ಲಿ ನಿನ್ನೆ ದುಬೈಗೆ ಮೊದಲ ನೇರ ಅಂತಾರಾಷ್ಟ್ರೀಯ ವಿಮಾನ ಸೇವೆಗೆ ಚಾಲನೆ ದೊರೆತಿದ್ದು ಗಣನೀಯ ಮೈಲಿಗಲ್ಲು ಸಾಧಿಸಿದಂತಾಗಿದೆ. ಭಾರತದ ಪ್ರಮುಖ ವಿಮಾನಯಾನ ಸಂಸ್ಥೆ ಇಂಡಿಗೋ ಈ ನೇರ ವಿಮಾನಯಾನ ಸೇವೆ ಆರಂಭಿಸಿದ್ದು ಭುವನೇಶ್ವರ, ಒಂದು ಪ್ರಮುಖ ತಾಣವಾಗಿ ಬೆಳೆಯುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ.  ಸೋಮವಾರ, ಬುಧವಾರ ಮತ್ತು ಶುಕ್ರವಾರ ವಾರಕ್ಕೆ ಮೂರುದಿನಗಳು ಸ್ಟೇಟ್ ಆಫ್ ಆರ್ಟ್ ಏರ್ ಬಸ್ ಭುವನೇಶ್ವರದಿಂದ ದುಬೈಗೆ ತಡೆರಹಿತ, ಸುಗಮ ಸೇವೆಯನ್ನು ಒದಗಿಸಲಿದೆ.

ಒಡಿಶಾ ಸರ್ಕಾರ, ನಾಗರಿಕ ಸಮಾಜ, ವ್ಯಾಪಾರ ಮತ್ತು ಕ್ರೀಡಾ ಸಮುದಾಯದ ಸದಸ್ಯರು, ಮತ್ತು ಸ್ವ-ಸಹಾಯ ಗುಂಪುಗಳ ಪ್ರತಿನಿಧಿಗಳನ್ನು ಒಳಗೊಂಡ ನಿಯೋಗವನ್ನು ಹೊತ್ತ ಮೊದಲ ವಿಮಾನವು ಸ್ಥಳೀಯ ಕಾಲಮಾನ ರಾತ್ರಿ 9.45 ಕ್ಕೆ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿತು.

ಫ್ಯಾಷನ್ ಡಿಸೈನ್ ಪದವಿ ಕೋರ್ಸ್‍ಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ

ಬಳ್ಳಾರಿಯ ಸಿದ್ಧ ಉಡುಪು ಸಂಶೋಧನೆ ತರಬೇತಿ ವಿನ್ಯಾಸ ಮತ್ತು ಅಭಿವೃದ್ಧಿ ಕೇಂದ್ರ ಸಂಸ್ಥೆಯು, 2023-24 ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಥಮ ಬಿಎಸ್ಸಿ ವೃತ್ತಿಪರ ಪದವಿ ಕೋರ್ಸ್ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಂಸ್ಥೆಯ ಉಪ ನಿರ್ದೇಶಕರು/ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವೃತ್ತಿಪರ ಪದವಿ ಕೋರ್ಸ್ ಪ್ರವೇಶಾತಿಗೆ ಯಾವುದೇ ದ್ವಿತೀಯ ಪಿಯುಸಿ ವಿಭಾಗದಲ್ಲಿ ತೇರ್ಗಡೆ ಹೊಂದಿರುವ ವಿದ್ಯಾರ್ಥಿಗಳು ಅರ್ಹರಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ನಗರದ ನಲ್ಲಚೆರುವು ಮೊದಲನೇಯ ರೈಲ್ವೇ ಗೇಟ್ ಹತ್ತಿರ, ಜಿಲ್ಲಾ ಕ್ರೀಡಾಂಗಣ ಮೈದಾನ ರಸ್ತೆಯ GRTDC ಕಾಲೇಜಿನ ಪ್ರಾಂಶುಪಾಲರ ಕಚೇರಿ ಸಂಪರ್ಕಿಸಲು ಕೋರಲಾಗಿದೆ.

ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ : ಹವಾಮಾನ ಇಲಾಖೆ ಮುನ್ಸೂಚನೆ

ದಕ್ಷಿಣ ಒಳನಾಡಿನ ಚಾಮರಾಜನಗರ, ಕೊಡಗು, ಮಂಡ್ಯ, ಮೈಸೂರು, ರಾಮನಗರ ಜಿಲ್ಲೆಗಳ ಒಂದೆರಡುಕಡೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಮತ್ತು ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರುವ ಸಾಧ್ಯತೆ ಇದೆ. ಮುಂದಿನ 48 ಘಂಟೆಗಳು ಹವಾಮಾನ ಮುನ್ಸೂಚನೆಯನ್ನು ನೋಡುವುದಾದರೆ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ರಾಮನಗರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಮತ್ತು ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರುವ ಸಾಧ್ಯತೆ ಇದೆ.

ಲಘು ವಾಹನ ಚಾಲನಾ ತರಬೇತಿಗೆ ಅರ್ಜಿ ಆಹ್ವಾನ

20-45 ವರ್ಷ ವಯೋಮಿತಿಯೊಳಗಿನ ಯುವಕರಿಗೆ  ಶಿವಮೊಗ್ಗ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟಿ-ದಾಂಡೇಲಿ ಹಾಗೂ ಟಾಟಾ ಮೋಟಾರ್ಸ್- ಧಾರವಾಡ  ಇವರ ಜಂಟಿ ಸಹಯೋಗದಲ್ಲಿ ಲಘು ವಾಹನ ಚಾಲನಾ ತರಬೇತಿ ನೀಡಲಾಗುತ್ತಿದೆ. ಈ ತರಬೇತಿಯು ಉಚಿತವಾಗಿದ್ದು 30 ದಿನಗಳ ಅವಧಿಯನ್ನು ಹೊಂದಿದೆ ಆದ್ದರಿಂದ ಆಸಕ್ತ ಯುವಕರು ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತರು ತಮ್ಮ ಹೆಸರು, ಹುಟ್ಟಿದ ದಿನಾಂಕ, ಪೂರ್ಣ ವಿಳಾಸ, ಸಂಪರ್ಕ ಸಂಖ್ಯೆ ಸೇರಿದಂತೆ ಹಾಲಿ ಮಾಡುತ್ತಿರುವ ಕೆಲಸ ಇತ್ಯಾದಿ ವಿವರಗಳನ್ನೊಳಗೊಂಡ ಅರ್ಜಿಯನ್ನು ಮೇ 30 ರೊಳಗಾಗಿ ಕೆನರ ಬ್ಯಾಂಕ್ ದೇಶಪಾಂಡೆ ಆರ್‍ಸಿಟಿ, ವಿಸ್ತರಣಾ ಕೇಂದ್ರ ಹಸನಮಾಳ್, ಈ ವಿಳಾಸಕ್ಕೆ ಕಳುಹಿಸಲು ಕೋರಲಾಗಿದೆ. ಇನ್ನು ಈ ತರಬೇತಿಯು ಊಟೋಪಚಾರ ಹಾಗೂ ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿರುತ್ತದೆ.

Living Greens Organics ಜೊತೆ ಒಡಂಬಡಿಕೆ ಮಾಡಿಕೊಂಡ ಕೃಷಿ ಜಾಗರಣ

ಮನೆಯ ಮೇಲ್ಚಾವಣಿಯ ಮೇಲೆ ಕೃಷಿ, ಮೇಲ್ಚಾವಣಿಯ ಮೇಲೆ ಸಾವಯವ ಕೃಷಿ ಹಾಗೂ ಕಿಚನ್‌ ಗಾರ್ಡ್‌ ಸೇರಿದಂತೆ ವಿವಿಧ ಸರಳ ಹಂತದ ಕೃಷಿಯಲ್ಲಿ ತೊಡಗಿಸಿಕೊಂಡಿರುವ ದಿ.ಲಿವಿಂಗ್ ಗ್ರೀನ್ಸ್ ಆರ್ಗಾನಿಕ್ಸ್ ಸಂಸ್ಥೆಯು ಕೃಷಿ ಜಾಗರಣದೊಂದಿಗೆ ಸೋಮವಾರ ಒಡಂಬಡಿಕೆ ಮಾಡಿಕೊಂಡಿತು. ಕೃಷಿ ಜಾಗರಣ ಸಂಸ್ಥೆಯ ಸಂಸ್ಥಾಪಕ ಮತ್ತು ಸಂಪಾದಕರಾದ ಎಂ.ಸಿ ಡೊಮಿನಿಕ್ ಹಾಗೂ ದಿ.ಲಿವಿಂಗ್ ಗ್ರೀನ್ಸ್ ಆರ್ಗಾನಿಕ್ಸ್ ಸಂಸ್ಥೆಯ ಸಿಇಒ ಹಾಗೂ ಸಂಸ್ಥಾಪಕ ಪ್ರತೀಕ್‌ ತಿವಾರಿ ಅವರು ಒಡಂಬಡಿಕೆಗೆ ಸಹಿ ಹಾಕಿದರು.

ನಂತರ ಮಾತನಾಡಿದ ಕೃಷಿ ಜಾಗರಣ ಸಂಸ್ಥೆಯ ಸಂಸ್ಥಾಪಕ ಮತ್ತು ಸಂಪಾದಕರಾದ ಎಂ.ಸಿ ಡೊಮಿನಿಕ್ ಅವರು, ಕೃಷಿ ಜಾಗರಣ ಸಂಸ್ಥೆಯು ಕೃಷಿಗೆ ಸಂಬಂಧಿಸಿದ ಹಾಗೂ ಕೃಷಿಗೆ ಪೂರಕವಾದ ಸಂಸ್ಥೆಗಳೊಂದಿಗೆ ತೊಡಗಿಸಿಕೊಂಡಿದೆ.  ದಿ.ಲಿವಿಂಗ್ ಗ್ರೀನ್ಸ್ ಆರ್ಗಾನಿಕ್ಸ್ ಸಂಸ್ಥೆಯ  ಪ್ರತೀಕ್‌ ತಿವಾರಿ ಮಾತನಾಡಿ ಮನೆಯ ಮೇಲ್ಚಾವಣಿಯ ಮೇಲಷ್ಟೇ ಅಲ್ಲ ಇದೀಗ ಕಾರ್ಖಾನೆಗಳ ಮೇಲ್ಚಾವಣೆಯ ಮೇಲಿನ ಖಾಲಿ ಪ್ರದೇಶದಲ್ಲಿಯೂ ತರಕಾರಿ ಹಾಗೂ ಸಾವಯವ ಕೃಷಿಯನ್ನು ಪೂರಕವಾದ ಸಾಮಾಗ್ರಿಗಳು, ತಿಳಿವಳಿಕೆ ಹಾಗೂ ಕೀಟನಾಶಕಗಳನ್ನೂ ನೀಡುತ್ತಿದೆ ಎಂದು ವಿವರಿಸಿದರು.

Published On: 16 May 2023, 02:54 PM English Summary: First international flight from Bhubaneswar to Dubai launched

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.