1. ಸುದ್ದಿಗಳು

ಗದಗ : ಕಬ್ಬಿನ ಹೊಲದಲ್ಲಿ ಆಕಸ್ಮಿಕ ಬೆಂಕಿ..32 ಎಕರೆ ಕಬ್ಬು ಸಂಪೂರ್ಣ ಬೆಂಕಿಗಾಹುತಿ

Maltesh
Maltesh

ಕಬ್ಬಿನ ಗದ್ದೆಗೆ ಆಕಸ್ಮಿಕ ಬೆಂಕಿ ಬಿದ್ದು ಅಪಾರ ಪ್ರಮಾಣದ ಕಬ್ಬು ಬೆಳೆ ನಾಶವಾದ ಘಟನೆ ಗದಗ  ಜಿಲ್ಲೆಯ ಮುಂಡರಗಿ ತಾಲೂಕಿನ ಬಿದರಳ್ಳಿ ಗ್ರಾಮದಲ್ಲಿ ನಡೆದಿದೆ.

ಬಿದರಳ್ಳಿ  ಗ್ರಾಮದ ರೈತ ವೈ. ಶೇಷಗಿರಿರಾವ್  ಅವರಿಗೆ ಸಂಬಂಧಿಸಿದ ಕಬ್ಬಿನ ಗದ್ದೆಗೆ ಆಕಸ್ಮಿಕ ಬೆಂಕಿ ಬಿದ್ದಿದ್ದು ಅಪಾರ ನಷ್ಟ ಸಂಭವಿಸಿದೆ. ಸುಮಾರು 42 ಎಕರೆ ಪ್ರದೇಶದಲ್ಲಿ 32 ಎಕರೆ  ಕಬ್ಬು ಬೆಳೆಯು ಬೆಂಕಿಗಾಹುತಿಯಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ  ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು.

ಅಗ್ನಿಶಾಮಕ ಸಿಬ್ಬಂದಿ 2 ವಾಹನಗಳ ಸಹಾಯದಿಂದ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು ಪೂರ್ಣ ಜಮೀನು ಸುಟ್ಟು ಕರಕಲಾಗಿದೆ.  ಕಟಾವು ಮಾಡಬೇಕಿದ್ದ ಕಬ್ಬು ಬೆಂಕಿಗೆ ನಾಶವಾಗಿದ್ದು ರೈತರಲ್ಲಿ ನೋವುಂಟು ಮಾಡಿದ್ದು, ಸೂಕ್ತ ಪರಿಹಾರಕ್ಕಾಗಿ ಮನವಿ ಮಾಡಿದ್ದಾರೆ.

ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳ: 200 ಕೋಟಿ ಒಡಂಬಡಿಕೆ..ಕೇಂದ್ರದಿಂದ ಮೆಚ್ಚುಗೆ

ಅರಮನೆ ಮೈದಾನದಲ್ಲಿ ಇತ್ತೀಚಿಗೆ ನಡೆದ ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳ-2023 ಅಭೂತಪೂರ್ವವವಾಗಿ ಯಶಸ್ಸು ಕಂಡಿದೆ. ಮೂರು ದಿನಗಳ ಈ ಮೇಳದಲ್ಲಿ ಸುಮಾರು 2 ಲಕ್ಷ ಮಂದಿ ಭೇಟಿ ನೀಡಿದ್ದು,  ಸುಮಾರು 200 ಕೋಟಿ ರೂ.ಗಳಷ್ಟು ಒಡಂಬಡಿಕೆಯಾಗಿದೆ.

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸಚಿವ ನರೇಂದ್ರ ಸಿಂಗ್‌ ತೋಮರ್‌ , "ಸಿರಿಧಾನ್ಯ ಬೆಳೆಯಲು ಅನ್ನದಾತರು ಪ್ರಶಸ್ತ್ಯ ನೀಡಬೇಕಿದೆ. ಸಿರಿಧಾನ್ಯ ಉತ್ಪನ್ನಗಳಿಗೆ ಕೃಷಿ ಇಲಾಖೆ, ಸಂಘ ಸಂಸ್ಥೆಗಳು, ರೈತ ಸಂಸ್ಥೆಗಳು, ಸಂಘಗಳು ಆರೋಗ್ಯ ಸ್ನೇಹಿ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಅಗತ್ಯವಿದೆ,'' ಎಂದರು.

ದೊಡ್ಡ ಸಂಬಳದ ಕೆಲಸಕ್ಕೆ ಬೈ.. ರಾಗಿ ಕೃಷಿಯಲ್ಲಿ ಬಂಪರ್‌ ಯಶಸ್ಸು ಗಳಿಸಿ Millet Man ಆದ ಕಾಮನ್‌ ಮ್ಯಾನ್‌

ಕರ್ನಾಟಕ ಸರ್ಕಾರವು ರೈತ ಸಿರಿ ಯೋಜನೆ ಮೂಲಕ ಸಿರಿಧಾನ್ಯ ಬೆಳೆಯುವ ರೈತರಿಗೆ ಆರ್ಥಿಕ ಸಹಕಾರ ನೀಡಿ ಪ್ರೋತ್ಸಾಹಿಸುತ್ತಿದೆ. ಸ್ವಾಸ್ಥ್ಯ ಹಾಗೂ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಇದು ಸಹಕಾರಿ ಆಗಲಿದೆ ಎಂದು ಹೇಳಿದರು.

ದೇಶದ 1.53 ಲಕ್ಷ ಹಳ್ಳಿಗಳು ಇದೀಗ 'ಹರ್ ಘರ್ ಜಲ್'

ಭಾರತವು ತನ್ನ 74 ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ದೇಶದ 11 ಕೋಟಿಗೂ ಹೆಚ್ಚು ಗ್ರಾಮೀಣ ಕುಟುಂಬಗಳು ಇಂದು ನಲ್ಲಿ ನೀರಿನ ಸಂಪರ್ಕವನ್ನು ಪಡೆಯುತ್ತಿವೆ.

ಭಾರತದಲ್ಲಿ 123 ಜಿಲ್ಲೆಗಳು ಮತ್ತು 1.53 ಲಕ್ಷಕ್ಕೂ ಹೆಚ್ಚು ಹಳ್ಳಿಗಳು 'ಹರ್ ಘರ್ ಜಲ್' ಎಂದು ವರದಿ ಮಾಡಿದೆ, ಅಂದರೆ ಪ್ರತಿ ಮನೆಯು ನಲ್ಲಿಯ ಮೂಲಕ ಶುದ್ಧ ಕುಡಿಯುವ ನೀರಿನ ಸೌಲಭ್ಯವನ್ನು ಹೊಂದಿದೆ.

ಗಮನಿಸಿ: ಪೋನ್‌ಪೇ, ಗೂಗಲ್‌ಪೇನಲ್ಲಿ ಒಂದು ದಿನಕ್ಕೆ ಇನ್ಮುಂದೆ ಇಷ್ಟು ಹಣ ಮಾತ್ರ ಕಳಿಸಬಹುದು!

ಕಳೆದ ವರ್ಷಗಳಲ್ಲಿ ಹಲವಾರು ಅಡೆತಡೆಗಳ ಹೊರತಾಗಿಯೂ, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಪ್ರತಿ ಗ್ರಾಮೀಣ ಮನೆಗಳಿಗೆ ನಲ್ಲಿ ನೀರನ್ನು ಒದಗಿಸಲು ಅವಿರತವಾಗಿ ಶ್ರಮಿಸಿವೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 15 ಆಗಸ್ಟ್ 2019 ರಂದು 2024 ರ ವೇಳೆಗೆ ಪ್ರತಿ ಗ್ರಾಮೀಣ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕವನ್ನು ಒದಗಿಸಲು ಜಲ ಜೀವನ್ ಮಿಷನ್ ಅನ್ನು ಘೋಷಿಸಿದದ್ದರು. ಇದೀಗ ಈ ಮಿಷನ್‌ ಗುರಿಯನ್ನು ಪೂರೈಸಿದ್ದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Fire at Sugarcane Field,32 acre Sugarcane burnt
Published On: 27 January 2023, 04:21 PM English Summary: Fire at Sugarcane Field,32 acre Sugarcane burnt

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.