1. ಸುದ್ದಿಗಳು

ರೇಷನ್‌ ಕಾರ್ಡ್‌ ಲಿಂಕ್‌ ಮಾಡಿಸಿದ ರೈತರ ಖಾತೆಗೆ ಬರಲಿದೆ 4 ಸಾವಿರ ರೂಪಾಯಿ

Maltesh
Maltesh
Farmers link ration card and get 4 thousand rupees

ಪ್ರಧಾನ ಮಂತ್ರಿ ಕಿಸಾನ್ ಯೋಜನೆ 2021 ರಲ್ಲಿ, ಕೇಂದ್ರ ಸರ್ಕಾರವು, ದೊಡ್ಡ ಬದಲಾವಣೆಯನ್ನು ಮಾಡಿದೆ.  ಅದರ ಅಡಿಯಲ್ಲಿ ರೈತರು ಇ-ಕೆವೈಸಿ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಅಂದರೆ, ಈಗ ರೈತರು ಹೊಸ ನಿಯಮದೊಂದಿಗೆ ಮುಂದಿನ ಕಂತಿಗೆ ಅರ್ಜಿ ಸಲ್ಲಿಸಬೇಕು.

ಕಿಸಾನ್ ಸಮಾನ್ ನಿಧಿ ಯೋಜನೆ(ಪಿಎಂ ಕಿಸಾನ್ ಸಮಾನ್ ನಿಧಿ) ಮತ್ತೆ ಬದಲಾವಣೆಯಾಗಿದೆ. ಈಗ ಕಿಸಾನ್ ಯೋಜನೆ(ಪಿಎಂ ಕಿಸಾನ್ ಕಂತು) ನೋಂದಣಿಗೆ ಪಡಿತರ ಚೀಟಿಯನ್ನು ಕಡ್ಡಾಯಗೊಳಿಸಲಾಗಿದೆ. ನೀವೂ ಕಿಸಾನ್ ಯೋಜನೆಯ ಫಲಾನುಭವಿಗಳಾಗಿದ್ದರೆ, ತಕ್ಷಣವೇ ಪಡಿತರ ಚೀಟಿಯನ್ನು ಮಾಡಿಸಿ.   ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಈಗ 11 ನೇ ಕಂತನ್ನು ಈಗಾಗಲೇ ಕೋಟ್ಯಾಂತರ ಜನ ಅನ್ನದಾತರ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ.

ಪಿಎಂ ಕಿಸಾನ್ ಪೋರ್ಟಲ್ ನಲ್ಲಿ ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸುವುದು ಕಡ್ಡಾಯವಾಗಿದೆ. ನಿಮ್ಮ ನೋಂದಣಿಯಲ್ಲಿ ಪಡಿತರ ಚೀಟಿ ಸಂಖ್ಯೆಯನ್ನು ನೀಡುವುದು ನಿಮಗೆ ಕಡ್ಡಾಯವಾಗಿರುತ್ತದೆ. ಅದೇ ಸಮಯದಲ್ಲಿ, ಪಡಿತರ ಚೀಟಿಯ ಕಡ್ಡಾಯ ಅವಶ್ಯಕತೆಯೊಂದಿಗೆ, ನೋಂದಣಿ ಸಮಯದಲ್ಲಿ, ದಾಖಲೆಗಳ ಸಾಫ್ಟ್ ಕಾಪಿಗಳನ್ನು (ಪಿಡಿಎಫ್) ಮಾತ್ರ ಮಾಡಿ ಪೋರ್ಟಲ್ ನಲ್ಲಿ ಅಪ್‌ಲೋಡ್ ಮಾಡಬೇಕಾಗುತ್ತದೆ. ಇದಲ್ಲದೇ ರೈತರಿಗೆ ಕೆವೈಸಿ ಕಡ್ಡಾಯಗೊಳಿಸಲಾಗಿದೆ.ರಾಜ್ಯ ಸರ್ಕಾರಿ ನೌಕರರಿಗೆ Good News: ವರ್ಷಾಂತ್ಯಕ್ಕೆ ದೊರೆಯಲಿದೆ ಕೇಂದ್ರ ಮಾದರಿ ವೇತನ! ಯಾವಾಗ ದೊರೆಯಲಿದೆ ಗೊತ್ತೆ?

ನೋಂದಣಿ ವೇಳೆ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಮತ್ತು ಘೋಷಣೆಯ ಹಾರ್ಡ್ ಕಾಪಿಗಳನ್ನು ಕಡ್ಡಾಯವಾಗಿ ಸಲ್ಲಿಸುವುದನ್ನು ಸಹ ಕೈಬಿಡಲಾಗಿದೆ. ಈಗ ಫಲಾನುಭವಿಗಳು ಈ ದಾಖಲೆಗಳ ಪಿಡಿಎಫ್ ಫೈಲ್ ಅನ್ನು ರಚಿಸಿ ಅದನ್ನು ಪೋರ್ಟಲ್ ನಲ್ಲಿ ಅಪ್ ಲೋಡ್ ಮಾಡಬೇಕು. ಇದರಿಂದ ರೈತರ ಸಮಯ ಉಳಿತಾಯವಾಗುವುದರ ಜೊತೆಗೆ ಹೊಸ ವ್ಯವಸ್ಥೆಯಲ್ಲಿ ಯೋಜನೆ ಪಾರದರ್ಶಕವಾಗಿರುತ್ತದೆ.

ನಿಟ್ಟುಸಿರು ಬಿಟ್ಟ ರೈತರು

ಯೋಜನೆಯ ಪ್ರಯೋಜನಗಳನ್ನು ಪಡೆಯಲು ಕೇಂದ್ರ ಸರ್ಕಾರವು ಈಗ ಕಡ್ಡಾಯ eKYC ಗಡುವನ್ನು ವಿಸ್ತರಿಸಿದೆ. ಈ ಮಾಹಿತಿಯನ್ನು ಪಿಎಂ ಕಿಸಾನ್ ಪೋರ್ಟಲ್ (pmkisan.gov.in) ನಲ್ಲಿ ನೀಡಲಾಗಿದೆ. ಪಿಎಂ ಕಿಸಾನ್ ವೆಬ್‌ಸೈಟ್‌ನಲ್ಲಿನ ಫ್ಲಾಶ್ ಪ್ರಕಾರ, 'ಎಲ್ಲಾ PMKISAN ಫಲಾನುಭವಿಗಳಿಗೆ eKYC ಗಡುವನ್ನು 31 ಜುಲೈ 2022 ರವರೆಗೆ ವಿಸ್ತರಿಸಲಾಗಿದೆ'. ಮೊದಲು ಅದರ ಗಡುವು ಮೇ 31, 2022 ಆಗಿತ್ತು.PM Kisan 11 ನೇ ಕಂತಿನ ಹಣ ನಿಮ್ಮ ಖಾತೆಗೆ ಇನ್ನೂ ಬಂದಿಲ್ಲವೇ? ಹಾಗಿದ್ದರೆ ಈಗಲೇ ಚೆಕ್‌ ಮಾಡಿ...

ಇ-ಕೆವೈಸಿ ಇಲ್ಲದೆ ಹಣ ಸಿಗೋದಿಲ್ಲ

ಇ-ಕೆವೈಸಿ ಇಲ್ಲದೆ ನಿಮ್ಮ ಖಾತೆಗೆ  ಬರೋದಿಲ್ಲ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 11ನೇ ಕಂತು ಕೂಡ ಬಿಡುಗಡೆಯಾಗಿದೆ. ಆಧಾರ್ ಆಧಾರಿತ OTP ದೃಢೀಕರಣಕ್ಕಾಗಿ, ರೈತರು ಕಿಸಾನ್ ಕಾರ್ನರ್‌ನಲ್ಲಿ ಇ-ಕೆವೈಸಿ ಆಯ್ಕೆಯನ್ನು ಕ್ಲಿಕ್ ಮಾಡಬೇಕಾಗುತ್ತದೆ ಎಂದು ಪಿಎಂ ಕಿಸಾನ್ ಪೋರ್ಟಲ್‌ನಲ್ಲಿ ತಿಳಿಸಲಾಗಿದೆ.

ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಅರ್ಹ ಫಲಾನುಭವಿಗಳು ಹತ್ತಿರದ ಸಿಎಸ್‌ಸಿ ಕೇಂದ್ರಕ್ಕೆ ಭೇಟಿ ನೀಡಬೇಕು. ನಿಮ್ಮ ಮೊಬೈಲ್, ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ನಿಂದಲೂ ನೀವು ಮನೆಯಲ್ಲಿ ಕುಳಿತು ಈ ಕೆಲಸವನ್ನು ಮಾಡಬಹುದು.PM Sinchayi: ರೈತರಿಗೆ ಇಲ್ಲಿದೆ ಭರ್ಜರಿ ಸಬ್ಸಿಡಿ: ನೀರಾವರಿ ಯೋಜನೆಗೆ ಶೇ.90ರಷ್ಟು ಸಹಾಯಧನ

Published On: 28 June 2022, 11:41 AM English Summary: Farmers link ration card and get 4 thousand rupees

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.