1. ಸುದ್ದಿಗಳು

ICAR  ಪಿಎಚ್‌ಡಿ ಪ್ರವೇಶದಲ್ಲಿ 4th  ರ‍್ಯಾಂಕ್‌ ಗಳಿಸಿದ ಬಡ ರೈತನ ಮಗಳು..ಸಿಎಂ ಶ್ಲಾಘನೆ

Maltesh
Maltesh
Farmer's daughter who secured 4th rank in ICAR PhD admission.. CM felicitates

ನಾಡಿಗೆ ಕೀರ್ತಿ ತಂದ ಬಡ ರೈತನ ಮಗಳು

ಮೈಸೂರು ಜಿಲ್ಲೆಯ ಯುವತಿಯೊಬ್ಬರು ನವದೆಹಲಿಯ ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ ನಡೆಸಿದ ಪಿಎಚ್‌ಡಿ ಪ್ರವೇಶ ಪರೀಕ್ಷೆಯಲ್ಲಿ ಅಗ್ರ ರ್ಯಾಂಕ್ ಗಳಿಸಿ ನಾಡಿಗೆ ಕೀರ್ತಿ ತಂದಿದ್ದಾರೆ.

Indian Council For Agricultural Research ನಡೆಸಿದ ಪಿ.ಎಚ್.ಡಿ ಪದವಿ ಪ್ರವೇಶ ಪರೀಕ್ಷೆಯ, ಎಸ್.ಟಿ ವಿಭಾಗದಲ್ಲಿ 2ನೇ & ಸಾಮಾನ್ಯ ವಿಭಾಗದಲ್ಲಿ, ಮೈಸೂರಿನ ನಂಜನಗೂಡು ತಾಲೂಕಿನ ಬೊಕ್ಕಳ್ಳಿಯ ಬಡ ರೈತ ಕುಟುಂಬದ ಹರ್ಷಿತಾ ನಾಯಕ್ 4 ಸ್ಥಾನ ಪಡೆದಿದ್ದಾರೆ.

ಯುವತಿಯ ಈ ಸಾಧನೆಯನ್ನು ಪ್ರಶಂಶಿಸಿದ ಮುಖ್ಯಮಂತ್ರಿ ಬೊಮ್ಮಾಯಿ "ನಿಮ್ಮ ಈ ಸಾಧನೆ ನಮಗೆ ಹೆಮ್ಮೆ ತಂದಿದ್ದು ಇತರರಿಗೆ ಪ್ರೇರಣೆಯಾಗಿದೆ" ಎಂದು ಟ್ವೀಟ್‌ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

ಭದ್ರಾ ಮೇಲ್ದಂಡೆ ಯೋಜನೆಗೆ 16 ಸಾವಿರ ಕೋಟಿ-ಬೊಮ್ಮಾಯಿ

ಕೆಲವೇ ದಿನಗಳಲ್ಲಿ ಭದ್ರಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ನೀರಾವರಿ ಯೋಜನೆಯಾಗಿ ಮಾರ್ಪಾಡಾಗಲಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದಿಂದ 16 ಸಾವಿರ ಕೋಟಿ ಅನುದಾನ ಈ ಯೋಜನೆಗೆ ಹರಿದು ಬರಲಿದದ್ದು, ಕರ್ನಾಟಕದ ಮೊದಲ ರಾಷ್ಟ್ರೀಯ ನೀರಾವರಿ ಯೋಜನೆ ಎಂಬ ಖ್ಯಾತಿ ಭದ್ರಾ ಮೇಲ್ದಂಡೆ ಯೋಜನೆಯ ಪಾಲಾಗಲಿದೆ ಎಂದು ಅವರು ತಿಳಿಸಿದರು.

ರಾಜ್ಯದ ಮೊದಲ ಗ್ರೀನ್‌ ಏರ್‌ಫೊರ್ಟ್‌ ಹುಬ್ಬಳ್ಳಿ

ಹುಬ್ಬಳ್ಳಿ ವಿಮಾನ ನಿಲ್ದಾಣ ರಾಜ್ಯದ ಮೊದಲ ಹಸಿರು ವಿಮಾನ ನಿಲ್ದಾಣವಾಗಿ ಖ್ಯಾತಿಗಳಿಸಲಿದೆ. ಹೌದು ಈ ಗೌರವ ಪಡೆದ ದೇಶದ ಬೆರಳಣಿಕೆಯ ಏರ್‌ಪೋರ್ಟ್‌ಗಳಲ್ಲಿ ಗಂಡು ಮೆಟ್ಟಿದ ನಾಡು ಹುಬ್ಬಳ್ಳಿ ಕೂಡ ಒಂದು.

ಇನ್ನು ಈ ಮಾಹಿತಿಯನ್ನು ಟ್ವಿಟರ್‌ನಲ್ಲಿ ಶೇರ್‌ ಮಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಇಲ್ಲಿರುವ  8 ಮೆ.ವ್ಯಾ. ಗ್ರಿಡ್‌-ಸಂಪರ್ಕಿತ ಸೌರ ವಿದ್ಯುತ್‌ ಸ್ಥಾವರದಿಂದಾಗಿ ಏರ್‌ಪೋರ್ಟ್‌ಶೇ.100ರಷ್ಟು ಹಸಿರು ವಿಮಾನ ನಿಲ್ದಾಣವಾಗಿದೆ.

ಈ ಸ್ಥಾವರದಿಂದ ಉತ್ಪತ್ತಿಯಾಗುವ ಸೌರಶಕ್ತಿಯನ್ನು ಹುಬ್ಬಳ್ಳಿಯ ಗ್ರಿಡ್‌ಗೆ ಸರಬರಾಜು ಮಾಡಲಾಗುತ್ತಿದೆ. ಸುಮಾರು 38 ಎಕರೆ ಪ್ರದೇಶದಲ್ಲಿ ಸೌರಶಕ್ತಿ ಘಟಕ ಅಳವಡಿಸಲಾಗಿದ್ದು, ಅಲ್ಲಿವಿದ್ಯುತ್ ಉತ್ಪಾದಿಸಲಾಗುತ್ತಿದೆ.

Published On: 23 November 2022, 02:50 PM English Summary: Farmer's daughter who secured 4th rank in ICAR PhD admission.. CM felicitates

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.