ರೈತರಿಗಿಲ್ಲಿದೆ ಭರ್ಜರಿ ಗುಡ್ ನ್ಯೂಸ್, ಸಬ್ಸಿಡಿ ದರದಲ್ಲಿ ಯಂತ್ರೋಪಕರಣಗಳನ್ನು ಖರೀದಿಸಲು ಸರ್ಕಾರಿ ಕಚೇರಿಗೆ ಅಲದಾಡುವುದನ್ನು ತಪ್ಪಿಸಲು ಕೇಂದ್ರ ಸರ್ಕಾರವು ಆನ್ ಲೈನ್ ಮೂಲಕವೇ ಅರ್ಜಿ ಸಲ್ಲಿಸಿ ಸಬ್ಸಿಡಿ ದರದಲ್ಲಿ ಯಂತ್ರೋಪಕಣಗಳ ಖರೀದಿ ಮಾಡಲು ಅವಕಾಶ ನೀಡಿದೆ.
ಹೌದು, ಮನೆಯಲ್ಲಿಯೇ ಕುಳಿತು ಆನ್ಲೈನ್ನಲ್ಲಿ ಕೇಂದ್ರ ಸರ್ಕಾರದ SMAM ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿ ಕೃಷಿ ಯಂತ್ರೋಪಕರಣಗಳನ್ನು ಖರೀದಿಸಬಹುದು.. ಅದು ಹೇಗೆ ಸಾಧ್ಯ ಅಂದುಕೊಂಡಿದ್ದೀರಾ... ಇಲ್ಲಿದೆ ಅದಕ್ಕೆ ಸಂಪೂರ್ಣ ಮಾಹಿತಿ.
ಕೃಷಿಯಲ್ಲಿ ಯಂತ್ರೋಪಕರಣಗಳ ಅವಶ್ಯಕತೆಯನ್ನು ಮನಗಂಡು ಕೇಂದ್ರ ಸರ್ಕಾರವು ರೈತರಿಗಾಗಿ Sub mission on Agricultural Mechanization (SMAM) ಯೋಜನೆಯನ್ನು ಜಾರಿಗೆ ತಂದಿದೆ. ಆಧುನಿಕ ಕೃಷಿ ಉಪಕರಣಗಳನ್ನು ಸಬ್ಸಿಡಿ ದರದಲ್ಲಿ ಕೃಷಿ ಯಂತ್ರೋಪಕರಣಗಳನ್ನುಒದಗಿಸುವ ಯೋಜನೆ ಇದಾಗಿದೆ. ಯಂತ್ರೋಪಕರಣಗಳ ಮೇಲೆ ಶೇ. 50 ರಿಂದ 80 ರವರೆಗೆ ಸಬ್ಸಿಡಿ ದೊರೆಯಲಿದೆ.
ದಾಖಲಾತಿಗಳು:
ಗುರುತಿನ ಚೀಟಿ, ಆಧಾರ್ ಕಾರ್ಡ್, ಪಾಸ್ಪೋರ್ಟ್ ಸೈಜ್ ಫೋಟೊ, ಭೂಮಿ ಹಕ್ಕು ಪತ್ರ ( ROR), ಯೋಜನೆಯ ಫಲ ಪಡೆದುಕೊಳ್ಲಲಿರುವ ವ್ಯಕ್ತಿಯ ಬ್ಯಾಕ್ ಖಾತೆಯ ಪಾಸ್ಬುಕ್ನ ಮುಖಪುಟದ ನಕಲು , ಆಧಾರ್ ಕಾರ್ಡ್/ಚುನಾವಣಾ ಗುರುತಿನ ಚೀಟಿಯ ನಕಲು ಪ್ರತಿ, ಎಸ್.ಸಿ ಎಸ್.ಟಿಯವರಾಗಿದ್ದರೆ ಜಾತಿ ಪ್ರಮಾಣ ಪತ್ರದ ನಕಲು ಪ್ರತಿಯನ್ನು ನೀಡಬೇಕಾಗುತ್ತದೆ .
ನೊಂದಣಿ ಮಾಡುವುದು ಹೇಗೆ ?
ರೈತರು ತಮ್ಮ ಹೆಸರನ್ನು ನೋಂದಾಯಿಸಲು ವೆಬ್ಸೈಟ್ನಲ್ಲಿ ನಿಮ್ಮ ಜಿಲ್ಲೆ , ತಾಲೂಕು , ಗ್ರಾಮವನ್ನು ಆಯ್ಕೆ ಮಾಡಬೇಕು . ರೈತರ ಹೆಸರು ಆಧಾರ್ ಕಾರ್ಡ್ನಲ್ಲಿ ಇರುವಂತೆ ನೊಂದಾಯಿಸಬೇಕು . ರೈತರ ವಿವರ, ಸಣ್ಣ, ಮಧ್ಯಮ, ದೊಡ್ಡ ಇಳುವರಿದಾರರ ಕುರಿತ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಬೇಕು. ಈ ಮೂಲಕ ವೆಬ್ಸೈಟ್ನಲ್ಲಿ ಹೆಸರು, ವಿವರ ನೊಂದಾಯಿಸಿ ಯೋಜನೆಯ ಲಾಭ ಪಡೆದುಕೊಳ್ಳಬಹುದು.
ಈ ಮಂದಿನ ಲಿಂಕ್ ಕ್ಲಿಕ್ ಮಾಡಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. https://agrimachinery.nic.in/Farmer/SHGGroups/Registration ಈ ಲಿಂಕ್ ಕ್ಲಿಕ್ ಮಾಡಿದರೆ ಡಿಬಿಟಿ (Direct Benefit Transfer in Agriculture Mechanization) ವೆಬ್ ಓಪನ್ ಆಗುತ್ತದೆ. ಅಲ್ಲಿ Registration ಮೇಲೆ ಕ್ಲಿಕ್ ಮಾಡಿದರೆ ನಾಲ್ಕು ಆಯ್ಕೆಗಳು ಕಾಣುತ್ತವೆ. ಅದರಲ್ಲಿ ನೀವು ಫಾರ್ಮರ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಆಧಾರ್, ಮೊಬೈಲ್ ನಂ, ಹೆಸರು (ಆದಾರ್ ನಲ್ಲಿರುವಂತೆ) Option ಕಾಣುತ್ತವೆ. ಆಧಾರ್ ಮೇಲೆ ಕ್ಲಿಕ್ ಮಾಡಿ ವಿವರಗಳನ್ನು ಭರ್ತಿ ಮಾಡಬೇಕು. ಮೇಲೆ ತಿಳಿಸಿದ ದಾಖಲೆಗಳನ್ನು ನಿಮ್ಮ ಮುಂದೆ ಇಟ್ಟುಕೊಂಡು ಮಾಹಿತಿಯನ್ನು ಭರ್ತಿ ಮಾಡಬೇಕು. ಅರ್ಜಿ ಸಲ್ಲಿಸಿದ ನಂತರ ಸ್ಟೇಟಸ್ ಸಹ ತಿಳಿದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ https://agrimachinery.nic.in/ ಲಿಂಕ್ ಮೇಲೆ ಕ್ಲಿಕ್ ಮಾಡಿ, ಅಥವಾ ದಿವಾಕರ್, ಉಪನಿರ್ದೇಶಕರು, ಮೊ. 8277929820 ಗೆ ಕರೆ ಮಾಡಬಹುದು.
ಸೂಚನೆ: ಪೋರ್ಟಲ್ ನಲ್ಲಿ ಹೆಸುರ ನೋಂದಾಯಿಸುವಾಗ ಸರಿಯಾದ ಜಿಲ್ಲೆ, ತಾಲೂಕು, ಬ್ಲಾಕ್ ಮತ್ತು ಗ್ರಾಮವನ್ನು ಆಯ್ಕೆ ಮಾಡಬೇಕು. ಆಧಾರ್ ಕಾರ್ಡ್ ಪ್ರಕಾರ ರೈತನ ಹೆಸರು ಇರಬೇಕು. ರೈತ ವರ್ಗ (ಎಸ್ ಸಿ/ಎಸ್ ಟಿ/ಸಾಮಾನ್ಯ), ರೈತ ಪ್ರಕಾರ (ಸಣ್ಣ/ಸಣ್ಣ/ದೊಡ್ಡ) ರೈತರಿದ್ದರೆ ಮಾಹಿತಿ ಸರಿಯಾಗಿ ಒದಗಿಸಬೇಕು.
Share your comments