1. ಸುದ್ದಿಗಳು

ಖ್ಯಾತ ಪಶುವೈದಕೀಯ ವಿಜ್ಞಾನಿ, ಸಾಹಿತಿ, ಚಿಂತಕ ಡಾ: ಎನ್.ಬಿ.ಶ್ರೀಧರ ಇವರಿಗೆ “ಜೀವಮಾನ ಶ್ರೇಷ್ಟ ಪಶುವೈದ್ಯ ಪ್ರಶಸ್ತಿ”

Kalmesh T
Kalmesh T
Lifetime Best Veterinary Award

ಖ್ಯಾತ ಪಶುವೈದಕೀಯ ವಿಜ್ಞಾನಿ, ಸಾಹಿತಿ, ಚಿಂತಕ ಡಾ: ಎನ್.ಬಿ.ಶ್ರೀಧರ ಇವರಿಗೆ “ಜೀವಮಾನ ಶ್ರೇಷ್ಟ ಪಶುವೈದ್ಯ ಪ್ರಶಸ್ತಿ” ನೀಡಿ ಗೌರವಿಸಲಾಗಿದೆ.

ನಾಡಿನ ಖ್ಯಾತ ಪಶುವೈದ್ಯ ವಿಜ್ಞಾನಿ, ಸಾಹಿತಿ, ಚಿಂತಕ, ಬರಹಗಾರ ಡಾ: ಎನ್.ಬಿ.ಶ್ರೀಧರ, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ ಇವರಿಗೆ ಕರ್ನಾಟಕ ಪಶುವೈದ್ಯಕೀಯ ಸಂಘ ಇವರು ಜೀವಮಾನದಲ್ಲಿ ಪಶುವೈದ್ಯಕೀಯ ರಂಗಕ್ಕೆ ಮಾಡಿದ ಗಣನೀಯ ಸಾಧನೆಗಾಗಿ “ ಡಾ: ಆರ್ ಡಿ ನಂಜಯ್ಯ ಸ್ಮಾರಕ ಜೀವಮಾನದ ಶ್ರೇಷ್ಟ ಪಶುವೈದ್ಯ ಪ್ರಶಸ್ತಿ” ನೀಡಿ ಬೆಂಗಳೂರಿನಲ್ಲಿ 28-29 ಜನವರಿ 2023 ರಂದು ನಡೆದ ರಾಜ್ಯಮಟ್ಟದ ತಾಂತ್ರಿಕ ಸಮ್ಮೇಳನದಲ್ಲಿ ಸನ್ಮಾನಿಸಲಾಗಿದೆ.

ಇವರು ಪಶುವೈದ್ಯಕೀಯ ರಂಗದಲ್ಲಿ ಜಾನುವಾರುಗಳಲ್ಲಿ ಬರುವ ಅನೇಕ ರೀತಿಯ ಸಸ್ಯಜನ್ಯ ನಿಗೂಢ ಕಾಯಿಲೆಗಳ ಬಗ್ಗೆ ಸಂಶೋಧನೆ ನಡೆಸಿ ಅವುಗಳಿಗೆ ಕಾರಣ ಮತ್ತು ಚಿಕಿತ್ಸೆಯನ್ನು ಪತ್ತೆ ಮಾಡಿದ್ದಾರೆ. 

ಈ ಮೂಲಕ ಸಹಸ್ರಾರು ಜಾನುವಾರುಗಳ ಉಳಿವಿಗೆ ಕಾರಣರಾಗಿರುವುದನ್ನು ಮತ್ತು ರೈತರ ಮಾಹಿತಿಗಾಗಿ ಅನೇಕ ತಾಂತ್ರಿಕ ಮಾಹಿತಿಗಳನ್ನು ವಿವಿಧ ಮಾಧ್ಯಮಗಳ ಮೂಲಕ ನೀಡುತ್ತಿರುತ್ತಾರೆ.

ಅಷ್ಟೇ ಅಲ್ಲದೇ ಇವರಿಗೆ ಭಾರತೀಯ ಪಶುವೈದ್ಯಕೀಯ ಔಷಧಶಾತ್ರಜ್ಞರ ಮತ್ತು ವಿಷಶಾಸ್ತ್ರಜ್ಞರ ಸಂಘವು ಈಚೆಗೆ ರಾಷ್ಟ್ರ‍ೀಯ ಫ಼ೆಲೊ ಪ್ರಶಸ್ತಿ ನೀಡಿರುವುದನ್ನು ಈ ಸಂದರ್ಭದಲ್ಲಿ ನೆನೆಯಬಹುದಾಗಿದೆ. ಅಷ್ಟೇ ಅಲ್ಲದೇ ಇವರಿಗೆ ಭಾರತೀಯ ಪಶುವೈದ್ಯಕೀಯ ಔಷಧಶಾತ್ರಜ್ಞರ ಮತ್ತು ವಿಷಶಾಸ್ತ್ರಜ್ಞರ ಸಂಘವು ಈಚೆಗೆ ರಾಷ್ಟ್ರ‍ೀಯ ಫ಼ೆಲೊ ಪ್ರಶಸ್ತಿ ನೀಡಿರುವುದನ್ನು ಈ ಸಂದರ್ಭದಲ್ಲಿ ನೆನೆಯಬಹುದಾಗಿದೆ.

Published On: 02 February 2023, 05:13 PM English Summary: Eminent Veterinary Scientist, Literary, Thinker Dr. NB Sreedhar "Lifetime Best Veterinary Award"

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.