ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ 10 ಕೋಟಿ ಡಾಲರ್ ಬಹುಮಾನವನ್ನು ಘೋಷಿಸಿದ್ದಾರೆ, ಇದು ಯಾವುದಕ್ಕೆ ಅಂತ ತಿಳಿಯೋಣ ಬನ್ನಿ.
ಇಂದಿನ ಕಾಲದಲ್ಲಿ ಪ್ರತಿಯೊಬ್ಬರು ವಾಹನಗಳನ್ನು ಬಳಸುವುದು ಸರ್ವೇಸಾಮಾನ್ಯ,ವಾಹನಗಳು ಇಂಗಾಲದ ಡೈಆಕ್ಸೈಡನ್ನು ಉಗುಳುತ್ತವೆ, ಇದರ ಕಾರಣದಿಂದ ನಮ್ಮ ಪರಿಸರಕ್ಕೆ ಹೆಚ್ಚಿನ ತೊಂದರೆ ಆಗುತ್ತೆ. ಹಾಗಾಗಿ ನಾವು ಇಂಗಾಲದ ಡೈಆಕ್ಸೈಡ್ ಬಳಕೆಯನ್ನು ಕಡಿಮೆ ಮಾಡುವ ಅಥವಾ ಹೀರುವ ತಂತ್ರಜ್ಞಾನವನ್ನು ಅವಿಷ್ಕಾರ ಮಾಡಬೇಕಾಗಿದೆ.
ಇದಕ್ಕಾಗಿ ವಿಶ್ವದ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಅವರು ಇಂಗಾಲದ ಡೈಆಕ್ಸೈಡನ್ನು ಹೀರುವಂತಹ ಉತ್ತಮ ತಂತ್ರಜ್ಞಾನ ಅವಿಷ್ಕಾರ ಮಾಡುವವರಿಗೆ 10 ಕೋಟಿ ಡಾಲರ್ ಅಂದರೆ ಸರಿಸುಮಾರು 973 ಕೋಟಿ ರೂಪಾಯಿಗಳನ್ನು ನೀಡುವುದಾಗಿ ಟ್ವೀಟ್ ಮಾಡಿದ್ದಾರೆ.ಹಾಗೂ ಈ ಕುರಿತು ಹೆಚ್ಚಿನ ಮಾಹಿತಿಯನ್ನು ಮುಂದಿನವಾರ ಟ್ವೀಟ್ ಮಾಡುವುದಾಗಿ ಟೆಸ್ಲಾ ಕಾರ್ ಕಂಪನಿಯ ಮಾಲೀಕರಾದ ಅವರು ಹೇಳಿದ್ದಾರೆ.
Share your comments