1. ಸುದ್ದಿಗಳು

ಮೊಬೈಲ್ ನಲ್ಲಿಯೇ ಮತದಾರರ ಗುರುತಿನ ಚೀಟಿ ಡೌನ್ಲೋ ಡ್ ಮಾಡಿಕೊಳ್ಳಲು ಅವಕಾಶ

ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (2020ರ ನವೆಂಬರ್ 18 ರಿಂದ ಡಿಸೆಂಬರ್ 17ರವರೆಗೆ) ಸಂದರ್ಭದಲ್ಲಿ ಹೊಸದಾಗಿ ಮತದಾರರ ಯಾದಿಯಲ್ಲಿ ನೋಂದಣಿಯಾದ 18-19 ವರ್ಷದ ಯುವ ಮತದಾರರು ತಮ್ಮ ಮತದಾರರ ಗುರುತಿನ ಚೀಟಿಯನ್ನು ಆಂಡ್ರಾಯ್ಡ್ ಮೊಬೈಲ್ (Android Mobile) ನಲ್ಲಿ ಡೌನ್‍ಲೋಡ್  ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅರ್ಹ ಮತದಾರರು ಇದರ ಸದುಪಯೋಗ ಪಡೆಯಬೇಕೆಂದು ಗುಲಬರ್ಗಾ ಉತ್ತರ ವಿಧಾನಸಭಾ ಮತಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿಗಳು ತಿಳಿಸಿದ್ದಾರೆ.

ಇದಲ್ಲದೇ www.nvsp.in ವೆಬ್‍ಸೈಟ್‍ನಲ್ಲಿಯೂ ಸಹ ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತದಾರರ ಗುರುತಿನ ಚೀಟಿಯನ್ನು ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ.

ಮತದಾರರ ಗುರುತಿನ ಚೀಟಿಯನ್ನು ಡೌನ್‍ಲೋಡ್ ಮಾಡುವ ಕುರಿತು ತಮ್ಮ ಮತಗಟ್ಟೆ ವ್ಯಾಪ್ತಿಯ ಯುವ ಮತದಾರರಿಗೆ ಮತಗಟ್ಟೆ ಹಂತದ ಅಧಿಕಾರಿಗಳು (ಃಐಔ) ಇದೇ ಮಾರ್ಚ್ 6 ಹಾಗೂ 7 ರಂದು ಎಲ್ಲಾ ಮತಗಟ್ಟೆಗಳಲ್ಲಿ    É ಮಾಹಿತಿ ನೀಡಲಿದ್ದಾರೆ. 

ಮತ್ತಿತರ ಹೆಚ್ಚಿನ ಮಾಹಿತಿಗಾಗಿ ನಗರ ವ್ಯಾಪ್ತಿಯೊಳಪಡುವ ಯುವ ಮತದಾರರು ಕಲಬುರಗಿ ಮಹಾನಗರಪಾಲಿಕೆಯ ಚುನಾವಣೆ ಶಾಖೆಗೆ ಸಂಪರ್ಕಿಸಲು ಕೋರಲಾಗಿದೆ.

ಮಾರ್ಚ್ 3 ರಂದು ಬಹಿರಂಗ ಹರಾಜಿನ ಮೂಲಕ ವಾಹನ ವಿಲೇವಾರಿ

ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡ ಅಶೋಕ ಲೇಲ್ಯಾಂಡ್ (ಲಾರಿ) ಭಾರಿ ಸರಕು ವಾಹನ (ವಾಹನ ಸಂಖ್ಯೆ ಎಪಿ-28 ಟಿಸಿ-8578) ವನ್ನು ಇದೇ ಮಾರ್ಚ್ 3 ರಂದು ಬೆಳಿಗ್ಗೆ 11 ಗಂಟೆಗೆ ಜೇವರ್ಗಿ ತಹಶೀಲ್ದಾರರ ಕಾರ್ಯಾಲಯ ಸಭಾಂಗಣದಲ್ಲಿ ಬಹಿರಂಗ ಹರಾಜು ಪ್ರಕ್ರಿಯೇ ಮೂಲಕ ವಿಲೇವಾರಿ ಮಾಡಲಾಗುತ್ತಿದೆ ಎಂದು ಜೇವರ್ಗಿ ತಹಶೀಲ್ದಾರರು ತಿಳಿಸಿದ್ದಾರೆ. 

ಇಚ್ಛೆಯುಳ್ಳ ಸಾರ್ವಜನಿಕರು ಮೇಲ್ಕಂಡ ದಿನದಂದು ಈ ಬಹಿರಂಗ ಹರಾಜಿನಲ್ಲಿ ಭಾಗವಹಿಸಿ ಈ ವಾಹನವನ್ನು ಖರೀದಿಸಬಹುದಾಗಿದೆ. ಹರಾಜಿನಲ್ಲಿ ಭಾಗವಹಿಸುವ ಸಾರ್ವಜನಿಕರು ಹರಾಜಿಗೆ ನಿಗದಿಪಡಿಸಿದ ಸಮಯಕ್ಕಿಂತ ಮುಂಚಿತವಾಗಿ ಹರಾಜಿನ ಸ್ಥಳದಲ್ಲಿಯೇ 5000 ರೂ.ಗಳ ಠೇವಣಿ ನೀಡಿ ರಸೀದಿ ಪಡೆಯಬೇಕು.

ಈ ವಾಹನವು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ನಿಂತಿರುತ್ತದೆ. ಹರಾಜಿನ ಷರತ್ತು, ನಿಬಂಧನೆ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಜೇವರ್ಗಿ ತಹಶೀಲ್ದಾರರ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.

Published On: 02 March 2021, 07:20 PM English Summary: Download The Electricity Card on Mobile

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.