1. ಸುದ್ದಿಗಳು

ಸರ್ಕಾರದ ಸಹಾಯದೊಂದಿಗೆ Dairy ಉದ್ಯಮ ಮಾಡಬೇಕೆ? ಇಲ್ಲಿದೆ Complete details.

Kalmesh T
Kalmesh T
double profit from the dairy industry. Government supports to farmers. Banks are also lending loan

ದಿನೇ ದಿನೇ ಬೆಳೆಯುತ್ತಿರುವ ಜನಸಂಖ್ಯೆ ಪ್ರಮಾಣ ನೋಡಿದಾಗ ಕೃಷಿ ಮತ್ತು ಕೃಷಿಯೇತರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವವರ ಸಂಖ್ಯೆ ಗಣನೀಯ ಪ್ರಮಾಣದ ವ್ಯತ್ಯಾಸದಲ್ಲಿದೆ. ಒಂದೆಡೆ ಕೃಷಿ ಚಟುವಟಿಕೆಗಳು ಅಷ್ಟೇನು ಲಾಭದಾಯಕವಲ್ಲ ಎನ್ನುವಂತಿದ್ದರೂ ನೂತನ ಆವಿಷ್ಕಾರಗಳ ನೆರವಿನೊಂದಿಗೆ ಹೊಸ ತಂತ್ರಜ್ಞಾನಗಳ ಅಳವಡಿಸಿಕೊಂಡು ಕೃಷಿ, ಕೃಷಿಯೇತರ ಕಾರ್ಯಗಳಿಗೆ ಮುಂದಾದವರು ಲಕ್ಷಗಟ್ಟಲೇ ಗಳಿಸುತ್ತಿರುವ ಉದಾಹರಣೆಗಳು ಸಾಕಷ್ಟಿವೆ.

ಭಾರತ ದೇಶದಲ್ಲಿ ಪಶುಪಾಲನೆಗೆ ತನ್ನದೇಯಾದ ದೊಡ್ಡ ಇತಿಹಾಸವಿದೆ. ಹಾಗೆಯೇ ದಿನಗಳು ಬದಲಾದಂತೆ ಅದರಲ್ಲಿ ಸಾಕಷ್ಟು ಮಾರ್ಪಾಡುಗಳು ಕೂಡ ಆಗಿವೆ. ಹೊಸ ಬದಲಾವಣೆಯೊಂದಿಗೆ ಹಾಲು ಮತ್ತು ಹಾಲಿನ ಉತ್ಪನ್ನಗಳ ಬೇಡಿಕೆಯಲ್ಲಿ ಸ್ಥಿರವಾದ ಹೆಚ್ಚಳ ಕಂಡುಬಂದಿದೆ. ಜನಸಂಖ್ಯೆಯ ಹೆಚ್ಚಳದೊಂದಿಗೆ, ಹಾಲು ಮತ್ತು ಹಾಲಿನ ಉತ್ಪನ್ನಗಳ ಬೇಡಿಕೆಯಲ್ಲಿ ಸ್ಥಿರವಾದ ಹೆಚ್ಚಳ ಕಂಡುಬಂದಿದೆ. ಭಾರತದಲ್ಲಿ ಹಾಲಿನ ಉತ್ಪಾದನೆಯು 1991 ರಿಂದ 2019ರ ಕಾಲದಲ್ಲಿ ಸುಮಾರು 55 Million ಟನ್‌ಗಳಿಂದ 187 Million ಟನ್‌ಗಳವರೆಗೆ ಹೆಚ್ಚಿದೆ.

ಇದನ್ನು ಓದಿರಿ:

ATM ಸೇಫ್ಟಿಗೆ ಗ್ರಾಹಕರಿಗೆ ಪವರ್‌ಫುಲ್‌ ಟಿಪ್ಸ್‌ ನೀಡಿದ SBI

Russia-ukraine war ಪರಿಣಾಮ, ಮನೆ ಕಟ್ಟುವ plan ನಲ್ಲಿರುವವರಿಗೆ ಕಾದಿದೆ ಶಾಕ್! ನೀವು ಇದನ್ನು ಓದಲೇಬೇಕು.

ಸೂಕ್ತ ತರಬೇತಿಯೊಂದಿಗೆ ಆರಂಭಿಸಿ

ಇತ್ತೀಚಿಗೆ  ವಿದ್ಯಾವಂತ ಯುವಕರ ಸಮೂಹ ಹೈನುಗಾರಿಕೆಯಲ್ಲಿ ಆಸಕ್ತಿ ತೋರಿಸುತ್ತಿರುವುದು ಒಂದು ಖುಷಿಯ ಸಂಗತಿ. ಅದರಲ್ಲಿ ಆರ್ಥಿಕ ಸಬಲತೆಯ ಅಂಶವೂ ಮುಖ್ಯವಾಗಿದೆ.  ಭಾರತದಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಬಳಕೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಡೈರಿ ವ್ಯವಹಾರವು ಲಾಭದಾಯಕ ವ್ಯವಹಾರವಾಗುತ್ತಿದೆ. ಅದನ್ನು ಪ್ರಾರಂಭಿಸುವ ಮೊದಲು, ಅದರ ಕುರಿತು ಚೆನ್ನಾಗಿ ತಿಳಿದಿರಬೇಕು. ಇದಕ್ಕಾಗಿ ರೈತರು ಅಥವಾ ಯುವಕರು ಯಾವುದೇ ಹೈನುಗಾರಿಕೆ ಕೇಂದ್ರದಲ್ಲಿ ತರಬೇತಿಯನ್ನು ಪಡೆಯಬಹುದು.

ಇನ್ನಷು ಓದಿರಿ:

Agriculture Budget 2022! ಕೃಷಿಯಲ್ಲಿ Dronesಗಳ ಹಾವಳಿ! ಸರಕಾರದಿಂದ 2.37 ಲಕ್ಷ ಕೋಟಿ ರೂ.ಗಳ Full Support!

ರಾಸಾಯನಿಕ ಕ್ರಿಮಿನಾಶಕ ಸಿಂಪಡಣೆ, ದ್ರಾಕ್ಷಿ ತೋಟಕ್ಕೆ ಹಾನಿ, ಪರಿಹಾರ ನೀಡುವಂತೆ ರೈತರ ಒತ್ತಾಯ

ಡೈರಿ ವ್ಯವಹಾರ ಪ್ರಾರಂಭಿಸುವವರಿಗೆ ಕಿವಿ ಮಾತು

ನೀವು ಈ ವ್ಯಾಪಾರವನ್ನು ಸಣ್ಣ ಅಥವಾ ದೊಡ್ಡ ಪ್ರಮಾಣದಲ್ಲಿ ಪ್ರಾರಂಭಿಸಲು ಬಯಸುವಿರಾದರೆ ಅದಕ್ಕೆ ತಕ್ಕಂತೆ ನಿಮ್ಮ ತಯಾರಿ ಮಾಡಿಕೊಳ್ಳಿ. ಅದಕ್ಕೆ ಪೂರಕವಾಗಿ ಸುಧಾರಿತ ತಳಿಯ ರಾಸುಗಳನ್ನು ಆಯ್ಕೆ ಮಾಡುವುದು ಮುಖ್ಯ. ಇದರಿಂದ ನೀವು ಉತ್ಪಾದನಾ ಸಾಮರ್ಥ್ಯದಿಂದ ಗರಿಷ್ಠ ಲಾಭವನ್ನು ಪಡೆಯಬಹುದು. ಸರ್ಕಾರಿ ಪೋರ್ಟಲ್‌ನಿಂದ ಪ್ರಾಣಿಗಳನ್ನು ಖರೀದಿಸಲು E-Pashuhaat portalನಲ್ಲಿ ಅನುಕೂಲಕ್ಕೆ ತಕ್ಕುದಾಗಿ ಪ್ರಾಣಿಗಳನ್ನು ಖರೀದಿಸಬಹುದು ಮತ್ತು ಮಾರಾಟ ಕೂಡ ಮಾಡಬಹುದು.

ಗೋ ಉತ್ಪನ್ನಗಳಿಂದಲೂ ಗಳಿಸಬಹುದು

ಡೈರಿ ಉದ್ಯಮವನ್ನು ಪ್ರಾರಂಭಿಸಿದ ನಂತರ, ಮೊದಲು ಮಾಡಬೇಕಾದ ಕೆಲಸವೆಂದರೆ ಪ್ರಾಣಿಗಳನ್ನು ನೋಡಿಕೊಳ್ಳುವುದು. ಸರಿಯಾದ ಮತ್ತು ಪೌಷ್ಟಿಕ ಆಹಾರವನ್ನು ನೀಡುವುದರಿಂದ, ಪ್ರಾಣಿಗಳು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಹೊಂದುತ್ತವೆ. ಇದು ಕಾಲಕ್ಕೆ ತಕ್ಕಂತೆ ಬೆಳೆಯುವ ವ್ಯಾಪಾರ. ನಾವು ಡೈರಿ ವ್ಯವಹಾರದಲ್ಲಿ ಹಾಲು ಅಥವಾ ಹಾಲಿನ ಉತ್ಪನ್ನಗಳನ್ನು ಹೆಚ್ಚಿಸಿದರೆ, ಲಾಭವು ಅನೇಕ ಪಟ್ಟು ಹೆಚ್ಚಾಗುತ್ತದೆ. ಇದಲ್ಲದೆ ಹಸುವಿನ ಸಗಣಿ, ಗಂಜಲು ಮತ್ತು ಸಾವಯವ ಗೊಬ್ಬರ, ಪಂಚಗವ್ಯ, ಪಂಚಾಮೃತಗಳ ಮಾರಾಟ ಮಾಡುವ ಮೂಲಕ ಹೆಚ್ಚುವರಿ ಆದಾಯವನ್ನು ಪಡೆಯಬಹುದು.

ಮತ್ತಷ್ಟು ಓದಿರಿ:

ರೈತ ಬಾಂಧವರಿಗೆ ಅನುಕೂಲವಾದ ಆ್ಯಪ್ ಗಳು ಯಾವವು ?. ಇವುಗಳ ಉಪಯೋಗ ಏನು ..?

Chocolates price hike: ಶೀಘ್ರದಲ್ಲೆ ಗಗನಕ್ಕೆರಲಿದೆ ಚಾಕೊಲೇಟ್ಸ್‌ ಬೆಲೆ.. ಇದೇ ಕಾರಣ

ಡೈರಿ ಉದ್ಯಮಕ್ಕೆ ಸರ್ಕಾರದ ಸಾಥ್‌

ಹೈನುಗಾರಿಕೆಯನ್ನು ಉತ್ತೇಜಿಸಲು ಸರ್ಕಾರದಿಂದ ಸಹಾಯವೂ ಇದೆ. 2020-21ನೇ ಸಾಲಿನಲ್ಲಿ ಡೈರಿ ಸಹಕಾರಿ ಸಂಘಗಳಿಗೆ ವಾರ್ಷಿಕ ಶೇಕಡ 2% ರಂತೆ ಬಡ್ಡಿ ಸಹಾಯಧನ ನೀಡುವ ಸೌಲಭ್ಯವನ್ನು ಆರಂಭಿಸಲಾಗಿದೆ. ಈ ಕಾಮಗಾರಿಯನ್ನು ದೊಡ್ಡ ಮಟ್ಟದಲ್ಲಿ ಆರಂಭಿಸಲು ಬ್ಯಾಂಕ್‌ಗಳಿಂದ Subsidy ಆಧಾರದ ಮೇಲೆ ಸಾಲ ನೀಡಲಾಗುತ್ತದೆ. ಪ್ರಸ್ತುತ, ಕೈಗೆಟುಕುವ ಬಡ್ಡಿದರದಲ್ಲಿ ಸಾಲ ನೀಡುವ ಇಂತಹ ಅನೇಕ ಬ್ಯಾಂಕುಗಳಿವೆ.

Published On: 17 March 2022, 02:35 PM English Summary: double profit from the dairy industry. Government supports to farmers. Banks are also lending loan

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.