1. ಸುದ್ದಿಗಳು

ಇಸ್ರೋ ವಿಜ್ಞಾನಿಗಳ ತಿಂಗಳ ವೇತನ ಎಷ್ಟು ಗೊತ್ತಾ..?

Maltesh
Maltesh
Do you know the monthly salary of ISRO scientists?

ಚಂದ್ರನ ದಕ್ಷಿಣ ಭಾಗದಲ್ಲಿ ಭಾರತದ ಚಂದ್ರಯಾನ 3 ಯಶಸ್ವಿಯಾಗಿ ಲ್ಯಾಂಡಿಂಗ್‌ನಿಂದ ಹಿಡಿದು, ಪ್ರಸ್ತುತ ಸೌರಯಾನ ಆದಿತ್ಯ ಎಲ್-1 ವರೆಗೆ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಅಂತರರಾಷ್ಟ್ರೀಯ ಗಮನವನ್ನು ಸೆಳೆದಿದೆ.

ಈ ಸಾಧನೆಗಳ ಹಿಂದೆ  ಬದ್ಧತೆಯಿರುವ ವಿಜ್ಞಾನಿಗಳು ಭಾರತದ ಬಾಹ್ಯಾಕಾಶ ಕಾರ್ಯಕ್ರಮವನ್ನು ಉತ್ತುಂಗಕ್ಕೆರಿಸಲು ಹಗಲು ರಾತ್ರಿ ಎನ್ನದೆ ಕೆಲಸ ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಈ ವಿಜ್ಞಾನಿಗಳ ಸಂಭಾವನೆ ಎಷ್ಟು ಎಂದು ನೀವು ಎಂದಾದರೂ ಯೋಚಿಸಿದ್ದೀರಾ..?

ಇಸ್ರೋ ಚಂದ್ರಯಾನ ಬೆನ್ನಲ್ಲೆ ಮೊದಲ ಸೌರಯಾನ ಕೂಡ ಯಶಸ್ವಿಯಾಗಿದೆ. ಇದೀಗ ಸೋಷಿಯಲ್‌ಮೀಡಿಯಾಗಳಲ್ಲಿ ಇಸ್ರೋ ವಿಜ್ಞಾನಿಗಳ ವೇತನದ ಕುರಿತು ಕುತೂಹಲಕಾರಿಯಾದ  ಚರ್ಚೆ ನಡೆಯುತ್ತಿದೆ.

ಇಸ್ರೋ ವಿಜ್ಞಾನಿಗಳ ವೇತನ ಎಷ್ಟು ಗೊತ್ತಾ?

ವಿಜ್ಞಾನಿಗಳ ವೇತನ ಶ್ರೇಣಿಯು ಅವರ ಹುದ್ದೆ ಆಧರಿಸಿ ಬದಲಾಗಬಹುದು. ಅವುಗಳಲ್ಲಿ ಪ್ರಮುಖವಾದ ಕೆಲವು ಹುದ್ದೆಗಳ ವೇತನವನ್ನು ನೋಡುವುದಾದದರೆ.

ಇಸ್ರೋ ಸೈಂಟಿಸ್ಟ್ ಇಂಜಿನಿಯರ್ ಆರಂಭಿಕ ವೇತನ ರೂ. 84, 360

ಇಸ್ರೋದ ಅತ್ಯುತ್ತಮ ವಿಜ್ಞಾನಿಗಳು ತಿಂಗಳಿಗೆ 2 ಲಕ್ಷ ರೂ ಪಡೆಯುತ್ತಾರೆ.

ಟಿಕ್ನಿಶಿಯನ್‌: B L-3 (21700 - 69100)

ತಾಂತ್ರಿಕ ಸಹಾಯಕರು: L-7(44900-142400)

ವೈಜ್ಞಾನಿಕ ಸಹಾಯಕರು: L-7(44900-142400)

ಲೈಬ್ರರಿ ಅಸಿಸ್ಟಂಟ್‌: 'A' - L-7 (44900-142400)

ಮೂಲ ವೇತನದ ಜೊತೆಗೆ, ಇಸ್ರೋದಲ್ಲಿ ಕೆಲಸ ಮಾಡುವ ವಿಜ್ಞಾನಿಗಳಿಗೆ ಸವಲತ್ತುಗಳು ಮತ್ತು ಭತ್ಯೆಗಳನ್ನು ನೀಡಲಾಗುತ್ತದೆ. ಕೆಲವು ಭತ್ಯೆಗಳನ್ನು ಮಾಸಿಕ ನೀಡಲಾಗುತ್ತದೆ, ಇತರವುಗಳನ್ನು ವಾರ್ಷಿಕವಾಗಿ ನೀಡಲಾಗುತ್ತದೆ. ಇಸ್ರೋ ವಿಜ್ಞಾನಿಗಳು ನಿವೃತ್ತಿಯ ನಂತರವೂ ಕೆಲವು ಪ್ರಯೋಜನಗಳನ್ನು ಪಡೆಯುತ್ತಾರೆ.

ಇಸ್ರೋ ವಿಜ್ಞಾನಿಗಳಿಗೆ ಭತ್ಯೆಗಳ ವಿವರಗಳು:

ತುಟ್ಟಿಭತ್ಯೆ (ಡಿಎ)

ಮನೆ ಬಾಡಿಗೆ ಭತ್ಯೆ (HRA)

ಭವಿಷ್ಯ ನಿಧಿ (PF)

ಪ್ರಯಾಣ ಭತ್ಯೆ (ಟಿಎ)

ವೈದ್ಯಕೀಯ ಸೌಲಭ್ಯಗಳು

ಪಿಂಚಣಿ

ಕಾರ್ಯಕ್ಷಮತೆಯ ಪ್ರೋತ್ಸಾಹ

Published On: 11 September 2023, 11:34 AM English Summary: Do you know the monthly salary of ISRO scientists?

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.