1. ಸುದ್ದಿಗಳು

ಬಣ್ಣ ಬಣ್ಣ ಗ್ಲಾಸ್‌ ಜಿಮ್‌ ಕಾರ್ನ್‌ ಬಗ್ಗೆ ಗೊತ್ತೆ ?

KJ Staff
KJ Staff
glass gem corn

ಒಂದೊಂದು ಪ್ರದೇಶದಲ್ಲಿ ಒಂದೊಂದು ಮಾದರಿಯ ಬೆಳೆಗಳನ್ನು ಬೆಳೆಯಲಾಗುತ್ತದೆ. ಪ್ರದೇಶದಿಂದ ಪ್ರದೇಶಕ್ಕೆ ಭಿನ್ನ ಮಾದರಿಯ ತಳಿಗಳು ಬೆಳೆಯುವುದನ್ನು ಸಹ ಕಾಣಬಹುದು. ಅಂತದ್ದೇ ಭಿನ್ನವಾದ ಬೆಳೆ ಗ್ಲಾಸ್‌ ಜಿಮ್‌ ಕಾರ್ನ್‌….

ಭಿನ್ನ ಮಾದರಿಯ ಬೆಳೆಗಳಲ್ಲಿ ಬಣ್ಣ ಬಣ್ಣದ ಜೋಳದ ಬೆಳೆಯೂ ಸಹ ಒಂದಾಗಿದೆ. ಸಾಮಾನ್ಯವಾಗಿ ನೀವು ಹಳದಿ ಬಣ್ಣದ, ತಿಳಿ ಹಳದಿ ಬಣ್ಣದ ಜೋಳವನ್ನು ನೋಡಿರುತ್ತೀರಿ. ಆದರೆ, ಬಣ್ಣದ ಜೋಳದ ಬೆಳೆಗಳ ಬಗ್ಗೆ ನಿಮಗೆ ಗೊತ್ತೆ. ಇಲ್ಲಿದೆ ಬಣ್ಣದ ಜೋಳದ ಬಗ್ಗೆ ಇಲ್ಲಿದೆ ಮಾಹಿತಿ..
ಇದನ್ನೂ ಓದಿರಿ: ಸಿಲಿಕಾನ್‌ ಸಿಟಿಯಲ್ಲಿ ಶುರುವಾಯ್ತು ATM ಇಡ್ಲಿ, ವಡೆ, ಸೆಂಟರ್‌..ವಿಡಿಯೋ

ಬಣ್ಣದ ಜೋಳವನ್ನು (Glass gem corn) ಗ್ಲಾಸ್‌ ಜಿಮ್‌ ಕಾರ್ನ್‌ ಎಂದು ಕರೆಯಲಾಗುತ್ತದೆ. ಕಾಮನ ಬಿಲ್ಲಿನಂತೆ ಹಲವು ಬಣ್ಣದಲ್ಲಿ ಗ್ಲಾಸ್‌ ಜಿಮ್‌ ಕಾರ್ನ್‌ ಕಾಣಿಸುತ್ತದೆ. ಇದು ಪಾರಂಪರಿಕ ಬೆಳೆಗಳ ವೈವಿಧ್ಯತೆಯನ್ನು ಆಚರಿಸುವ ಉದಾಹರಣೆಯಾಗಿದೆ. ತೋಟಗಳಲ್ಲಿ ಸದಾ ವಾಣಿಜ್ಯ ಪ್ರಭೇದಗಳಿಗಿಂತ ಹೆಚ್ಚು ಬೆಳೆಯಬಹುದಾಗಿದೆ. ಇದು ನೋಡಲು ಸುಂದರವಾಗಿರುವುದರ ಜೊತೆಗೆ ಆಹಾರಕ್ಕೂ ಉತ್ತಮವಾಗಿದೆ.    

ಗ್ಲಾಸ್ ಜೆಮ್ ಕಾರ್ನ್ ಮಳೆಬಿಲ್ಲಿನ ಬಣ್ಣದ ಕಾರ್ನ್‌ ಅದ್ಭುತವಾದ ರೋಮಾಂಚಕ ತಳಿಯಾಗಿದೆ. ಇದು ಫ್ಲಿಂಟ್ ಕಾರ್ನ್ ಆಗಿದ್ದು, ಪಾಪ್‌ಕಾರ್ನ್ ಮಾಡಲು ಅಥವಾ ಕಾರ್ನ್‌ಫ್ಲೋರ್ ಆಗಿ ರುಬ್ಬಲು ಬೆಳೆಯಲಾಗುತ್ತದೆ.
ಗುಡ್‌ನ್ಯೂಸ್‌: ರೈಲು ಪ್ರಯಾಣಿಕರಿಗೆ ನೀರು ಮತ್ತು ಆಹಾರ ಉಚಿತ- ಆದರೆ ಕಂಡಿಶನ್ಸ್‌ ಅಪ್ಲೈ

ಫ್ಲಿಂಟ್ ಕಾರ್ನ್ನೊಂದಿಗೆ, ಜೋಳವನ್ನು ಒಣಗಲು ಸಸ್ಯಗಳ ಮೇಲೆ ಹಾಕಲಾಗುತ್ತದೆ. ಕರ್ನಲ್‌ಗಳು ಅಂತಿಮವಾಗಿ ತಮ್ಮ ಹೊಳಪು ಮತ್ತು ಕಂಪನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತವೆ ಮತ್ತು ಒಣಗುತ್ತವೆ. ಕಾಳುಗಳು ಫ್ಲಿಂಟ್‌ನಂತೆ ಗಟ್ಟಿಯಾದಾಗ ಮಾತ್ರ ಅವುಗಳನ್ನು ಕೊಯ್ಲು ಮಾಡಲಾಗುತ್ತದೆ.  ಇದರಿಂದ ಫ್ಲಿಂಟ್ ಕಾರ್ನ್ ಎಂಬ ಹೆಸರು ಬಂದಿದೆ.

ವಿದೇಶಗಳಲ್ಲಿ ಇದನ್ನು ಅಲಂಕಾರ ಉದ್ದೇಶಕ್ಕಾಗಿಯೂ ಬೆಳೆಯಲಾಗುತ್ತದೆ. ಸಾಮಾನ್ಯವಾಗಿ ವಿದೇಶಗಳಲ್ಲಿ ಪಾಪ್‌ ಕಾರ್ನ್‌ ಬಳಕೆ ಹೆಚ್ಚಾಗಿರುವುದರಿಂದ ಇದನ್ನು ಪಾಪ್‌ಕಾರ್ನ್‌ ಮಾಡಲು ಸಹ ಬಳಸಲಾಗುತ್ತದೆ.

ಇದನ್ನು ಓದಿರಿ: ಡ್ರೋನ್ ಖರೀದಿಸಲು ಯೋಜಿಸುತ್ತಿರುವ ರೈತರಿಗೆ ಸುವರ್ಣಾವಕಾಶ, ಸರ್ಕಾರ 50% ಸಬ್ಸಿಡಿ

ಮೊದ ಮೊದಲು ಇದು ಸಾರ್ವಜನಿಕರ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಇಂದಿಗೂ ಈ ಮಾದರಿಯ ಬೆಳೆ ಸಾರ್ವಜನಿಕರನ್ನು ಅಚ್ಚರಿಗೆ ದೂಡುತ್ತದೆ. ಅಷ್ಟೇ ಅಲ್ಲ ಜನ ಸಹ ಈ ಮಾದರಿಯ ಜೋಳದ ಬಗ್ಗೆ ಕುತೂಹಲವನ್ನು ಕಾಯ್ದುಕೊಂಡಿದ್ದಾರೆ.

ಗ್ಲಾಸ್‌ ಜಿಮ್‌ ಕಾರ್ನ್‌ ಬೆಳೆಯುವುದು ಮತ್ತು ಅದರ ಬಳಕೆ ಅಮೆರಿಕನ್‌ ಬುಡಕಟ್ಟು ಜನಾಂಗ ವ್ಯಾಪ್ತಿಯಲ್ಲಿ 1800ರ ದಶಕದ ಹಿಂದೆಯೇ ಪ್ರಾರಂಭವಾಗಿತ್ತು. ಅಮೆರಿಕನ್ ಬುಡಕಟ್ಟು ಜನಾಂಗದವರು ಪೂರ್ವಜರ ರೀತಿಯ ಜೋಳವನ್ನು ಬೆಳೆಯಲು ಪ್ರಾರಂಭಿಸಿದರು. ಸ್ಥಳೀಯ ಬುಡಕಟ್ಟು ಜನಾಂಗದವರು ಸಾಂಪ್ರದಾಯಿಕ, ಸಮರ್ಥನೀಯ ಅಭ್ಯಾಸಗಳನ್ನು ಬಳಸುತ್ತಿದ್ದರು. ಅಲ್ಲದೇ ಜೋಳದ ವಿಧಗಳ ಶ್ರೇಣಿಯನ್ನು ತಿಳಿದಿದ್ದರು.

ಜೋಳ ಅಮೆರಿಕಾದ ಪ್ರಮುಖ ಆಹಾರ ಉಪಕ್ರಮಗಳಲ್ಲಿ ಒಂದಾಗಿತ್ತು. ಇದನ್ನು ವಿವಿಧ ತಳಿಗಳ ಕಸಿ ಮಾಡುವ ಮೂಲಕ ಸೃಷ್ಟಿ ಮಾಡಲಾಗಿದೆ ಎಂದು ಅಂದಾಜಿಸಲಾಗಿದೆ. ಈ ಮಾದರಿಯ ಆಹಾರವನ್ನು ಮೊದಲು ಮೆಕ್ಸಿಕೋದಲ್ಲಿ ಪ್ರಯೋಗಿಸಲಾಗಿತ್ತು. ವಿಶ್ವದ ಅತ್ಯಂತ ಹಳೆಯ ಕೃಷಿ ಬೆಳೆಗಳಲ್ಲಿ ಒಂದಾಗಿದೆ.

ಕಾಲಾಂತರದಲ್ಲಿ ಮೊದಲು ಅಭಿವೃದ್ಧಿಪಡಿಸಿದ ಜೋಳದ ತಳಿಗಳು ನಶಿಸಿದವು. ಇದಾದ ನಂತರ ಇತ್ತೀಚಿನ ವರ್ಷಗಳಲ್ಲಿ ಮತ್ತೆ  ಗ್ಲಾಸ್‌ ಜಿಮ್‌ ಕಾರ್ನ್‌ ಬೆಳೆಯುವುದು ಮುನ್ನೆಲೆಗೆ ಬಂದಿದೆ.    

glass gem corn
Published On: 17 October 2022, 03:16 PM English Summary: Do you know about glass gym corn?

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.