1. ಸುದ್ದಿಗಳು

ದೀಪಾವಳಿ ವ್ಯಾಪಾರ ಐಡಿಯಾಗಳು: ಈ ವ್ಯವಹಾರ ಆರಂಭಿಸಿದ್ರೆ ಬಂಪರ್‌ ಲಾಭ ಫಿಕ್ಸ್

Maltesh
Maltesh
Diwali Business Ideas: Bumper profit fix if starting this business

ಯಶಸ್ವಿ ಮತ್ತು ಲಾಭದಾಯಕ ವ್ಯಾಪಾರವನ್ನು ಪ್ರಾರಂಭಿಸಲು ಈ ಹಬ್ಬದ ಋತುವಿನ ಲಾಭವನ್ನು ಪಡೆದುಕೊಳ್ಳಿ. ದೀಪಾವಳಿ ಹಬ್ಬದ ಸಮಯದಲ್ಲಿ ಕಡಿಮೆ ಹೂಡಿಕೆಯಲ್ಲಿ ಸುಲಭವಾಗಿ ಲಾಭ ಗಿಟ್ಟಿಸಿಕೊಳ್ಳುವ ಕೆಲವು ಯಶಸ್ವಿ ವ್ಯಾಪಾರ ಕಲ್ಪನೆಗಳನ್ನು ನಾವು ಇಲ್ಲಿ ಪಟ್ಟಿ ಮಾಡಿದ್ದೇವೆ.

ನಿಮ್ಮ ಸ್ವಂತ ಯಶಸ್ವಿ ವ್ಯಾಪಾರವನ್ನು ಪ್ರಾರಂಭಿಸಲು ನೀವು ಅನುಸರಿಸಬೇಕಾದ ಕೆಲವು ಲಾಭದಾಯಕ ವ್ಯಾಪಾರ ಕಲ್ಪನೆಗಳು ಇಲ್ಲಿವೆ .

ಸಿಹಿ ತಿಂಡಿ ವ್ಯಾಪಾರ

ಜನರು ಸಿಹಿ ಮತ್ತು ಖಾರದ ತಿಂಡಿಗಳನ್ನು ಇಷ್ಟಪಡುತ್ತಾರೆ ಮತ್ತು ಹಬ್ಬದ ಈ ಸಮಯದಲ್ಲಿ, ತಿಂಡಿಗಳು ಪ್ರಮುಖ ಆಯ್ಕೆ ಆಗಿರುತ್ತವೆ. ಆದರೆ ದೈನಂದಿನ ಒತ್ತಡದ ಜೀವನದಿಂದ, ಜನರು ತಮ್ಮ ಮನೆಯಲ್ಲಿ ಸಿಹಿ ಅಥವಾ ಖಾರದ ತಿಂಡಿಗಳನ್ನು ಮಾಡಲು ಆಸಕ್ತಿ ತೋರುವುದು ಕಡಿಮೆ. ಹೀಗಾಗಿ ಸಿಹಿ ತಿಂಡಿಯ ಚಿಕ್ಕ ಉದ್ದಿಮೆಯನ್ನು ಆರಂಭಿಸುವುದು ಉತ್ತಮವಾದ ಆಯ್ಕೆ ಆಗಿದೆ.

ಗುಣಮಟ್ಟವು ನಿಜವಾಗಿಯೂ ಉತ್ತಮವಾಗಿದೆ ಎಂದು ನೀವು ಖಚಿತಪಡಿಸಿಕೊಂಡರೆ ತಿಂಡಿ-ತಯಾರಿಸುವ ವ್ಯವಹಾರವು ಹೆಚ್ಚು ಲಾಭದಾಯಕವಾಗಿರುತ್ತದೆ . ನಿಮ್ಮ ತಿಂಡಿಗಳನ್ನು ಹೆಚ್ಚು ಆಕರ್ಷಕವಾಗಿಸಲು, ನೀವು ಫ್ಯಾನ್ಸಿ ಪ್ಯಾಕೇಜಿಂಗ್, ಕಸ್ಟಮೈಸ್ ಮಾಡಿದ ಉಡುಗೊರೆ ಪ್ಯಾಕ್‌ಗಳು ಮತ್ತು ಗ್ರಾಹಕರನ್ನು ಕರೆತರಲು ಆಕರ್ಷಕ ಡೀಲ್‌ಗಳು ಮತ್ತು ಕೊಡುಗೆಗಳನ್ನು ಸೇರಿಸಬಹುದು.

ಇದನ್ನೂ ಓದಿರಿ: 1 ಕೋಟಿಗೂ ಹೆಚ್ಚು ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಕೇಂದ್ರದಿಂದ ದೀಪಾವಳಿ ಬಂಪರ್‌ ಗಿಫ್ಟ್‌!

ಹಣತೆಗಳ  ಮಾರಾಟ ವ್ಯಾಪಾರ

ದೀಪಾವಳಿಯ ಸಮಯದಲ್ಲಿ ಪ್ರತಿ ಮನೆಯ ಹೊರಗೆ ಮಣ್ಣಿನ ದೀಪಗಳನ್ನು ಬೆಳಗಿಸಲಾಗುತ್ತದೆ. ಈ ಆಚರಣೆಯನ್ನು ಪೂರ್ಣಗೊಳಿಸಲು ಈ ಮಣ್ಣಿನ ದೀಪಗಳು ಅವಶ್ಯಕ. ದೀಪಾವಳಿ ಋತುವಿನಲ್ಲಿ, ನೀವು ಹಣತೆಗಳನ್ನು ಮಾರಾಟ ಮಾಡುವ ವ್ಯಾಪಾರವನ್ನು ಪ್ರಾರಂಭಿಸಬಹುದು. ಈ ಸಮಯದಲ್ಲಿ

ಪರಿಸರ ಸ್ನೇಹಿ ಹಣತೆಗಳನ್ನು ಕೈಗೆಟುಕುವ ಬೆಲೆಯಲ್ಲಿ ಖರೀದಿಸಬಹುದು, ಪರಿಸರವನ್ನು ಉಳಿಸಲು ಸಹಾಯ ಮಾಡುತ್ತದೆ. ಈ ವ್ಯವಹಾರವನ್ನು ಕಡಿಮೆ ಬಂಡವಾಳದ ವೆಚ್ಚದೊಂದಿಗೆ ಪ್ರಾರಂಭಿಸಬಹುದು ಮತ್ತು ಅದು ಉತ್ತಮವಾಗಿ ಲಾಭ ಗಿಟ್ಟಿಸುತ್ತದೆ.

ಮೆಹಂದಿ

ಭಾರತದಲ್ಲಿ, ಮಹಿಳೆಯರು ಮತ್ತು ಹುಡುಗಿಯರು ಹಲವಾರು ಹಬ್ಬಗಳಲ್ಲಿ ತಮ್ಮ ಕೈಯಲ್ಲಿ ಮೆಹಂದಿಯನ್ನು ಹಾಕುತ್ತಾರೆ. ಉತ್ತಮ ಮೆಹಂದಿ  ಹಾಕಲು ಪ್ರತಿಯೊಬ್ಬರಿಗು ಕಲೆಯ ಅಗತ್ಯವಿದೆ. ನೀವು ಮಹಿಳೆಯರು ಮತ್ತು ಹುಡುಗಿಯರ ಕೈಗಳಿಗೆ ಮೆಹಂದಿಯನ್ನು  ಹಾಕಬಹುದು ಮತ್ತು ಮೆಹಂದಿ ಸೇವೆಗಳನ್ನು ಒದಗಿಸುವ ಮೂಲಕ ಗಮನಾರ್ಹ ಹಣವನ್ನು ಗಳಿಸಬಹುದು.

ಕರ್ನಾಟಕದಲ್ಲಿ ಇನ್ನೂ 5 ದಿನ ಭಾರೀ ಮಳೆ; ಹವಾಮಾನ ಇಲಾಖೆ ನೀಡಿದ ಎಚ್ಚರಿಕೆ ಏನು ಗೊತ್ತೆ?

ಮನೆ ಸ್ವಚ್ಛಗೊಳಿಸುವ ಸೇವೆಗಳ ವ್ಯಾಪಾರ

ಹಬ್ಬದ ದಿನಗಳು ಮುಂದಿದ್ದಾಗ ಸಾಮಾನ್ಯವಾಗಿ ಎಲ್ಲರು ತಮ್ಮ ತಮ್ಮ ಮನೆ ಹಾಗೂ ಅಂಗಡಿಗಳನ್ನು ಸ್ವಚ್ಛಗೊಳಿಸುವುದು ವಾಡಿಕೆ. ಈ ಸಂದರ್ಭದವನ್ನು ಸರಿಯಾಗಿ ಉಪಯೋಗಿಸಿಕೊಂಡರೆ ಮನೆಗಳನ್ನು ಶುಚಿಗೊಳಿಸುವುದು ಹಾಗೂ ಪೇಟಿಂಗ್‌ ಕಲೆಸವನ್ನು ಗುತ್ತಿಗೆಯ ಮೂಲಕ ಮಾಡಬಹುದು. ಬಹು ಬೇಡಿಕೆಯಾಗಿರುವ ಈ ಉದ್ದಿಮೆಯನ್ನು ಈ ಸಮಯದಲ್ಲಿ ಕೈಗೊಂಡರೆ ಬಂಪರ್‌ ಲಾಭ ನಿಮ್ಮ ಜೇಬು ಸೇರೋದು ಪಕ್ಕ.

Published On: 13 October 2022, 10:25 AM English Summary: Diwali Business Ideas: Bumper profit fix if starting this business

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.