ಕೊರೋನಾದಂತಹ ಸಂಕಷ್ಟದಲ್ಲಿ ರೈತರು ಖಾತೆಯಲ್ಲಿ ಹಣವಿಲ್ಲದೆ ಆರ್ಥಿಕ ಕಷ್ಟದಲ್ಲಿರುವಾಗ ಮತ್ತೊಮ್ಮೆ ಸರ್ಕಾರ ರೈತರ ಖಾತೆಗೆ ಹಣ ಜಮಾ ಮಾಡಿದೆ. Pmkissan, ಪ್ರಧಾನ್ ಮಂತ್ರಿ ಫಸಲ್ ಭೀಮಾ ಯೋಜನೆಯ ನಂತರ ಇದೀಗ ಸರ್ಕಾರ ಮತ್ತೆ ಹಣ ಜಮಾ ಮಾಡಿದೆ.
ಈ ಬಾರಿ ಮಳೆಯ ಕಾರಣದಿಂದ ಕೈಯ್ಯಿಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಹಾಗಾಗಿ ರೈತರು ಈ ಬಾರಿ ತುಂಬಾ ಕಷ್ಟದಲ್ಲಿದ್ದಾರೆ, ಗದಗ್ ಜಿಲ್ಲೆಯ ರೈತರು ಹೆಸರು ಬೆಳೆದು ಕಟಾವಿಗೆ ಬಂದಾಗ ಮಳೆಯ ಕಾರಣದಿಂದ ಎಲ್ಲ ಉದುರಿಹೋದವು, ಮುಂದೆ ಶೇಂಗಾ ಬೆಳೆ ಬೆಳೆದು ಕಟಾವಿಗೆ ಬಂದಾಗ ಸುರಿದ ಮಳೆಯ ಕಾರಣದಿಂದ ನೆಲದಲ್ಲಿಯೇ ಶೇಂಗಾ ಕೀಳುವಾಗ ಉಳಿದವು ಇನ್ನು ಉಳ್ಳಾಗಡ್ಡಿಯ ಕತೆಯಂತೂ ಕೇಳುವಹಾಗೆಇಲ್ಲ, ಸುಳಿರೋಗ ಹಾಗೂ ಕೊಳೆರೋಗಕ್ಕೆ ತುತ್ತಾಗಿ ಎಲ್ಲ ಕೊಳೆತು ಹೋಗಿವೆ ಹೀಗಾಗಿ ರೈತರು ತುಂಬಾ ಆರ್ಥಿಕ ಸಂಕಷ್ಟದಲ್ಲಿದ್ದಾರೆ.
ಒಂದೆಡೆ ಬೆಲೆ ಇದ್ದಾಗ ಬೆಳೆ ಇರುವುದಿಲ್ಲ ಮತ್ತೊಂದೆಡೆ ಬೆಳೆ ಇದ್ದಾಗ ಬೆಲೆ ಇರುವುದಿಲ್ಲ, ಹೀಗೆ ರೈತರ ಜೀವನದಲ್ಲಿ ನೆಮ್ಮದಿ ಅನ್ನುವುದೇ ಇಲ್ಲದಂತಾಗಿದೆ. ಇಂತಹ ಸಮಯದಲ್ಲಿ ಕರ್ನಾಟಕದ ಗದಗ್ ಜಿಲ್ಲೆಯಲ್ಲಿ ರೈತರ ಖಾತೆಗೆ ಹಣ ಜಮಾಗಿದೆ. ಈ ಹಿಂದೆ ಜಿಲ್ಲೆಯ ರೈತರು ಗ್ರಾಮ ಲೆಕ್ಕಾಧಿಕಾರಿಗಳ ಬಲಿ ಅರ್ಜಿಯನ್ನು ಸಲ್ಲಿಸಿದ್ದೆವು ಹಾಗೂ ಇದೀಗ ಹಣ ಜಮಾ ಆಗಿದೆ. ಐದು ಎಕರೆ (2ಹೆಕ್ಟಾರಿಗಿಂತ )ಹೆಚ್ಚಿಗೆ ಭೂಮಿ ಹೊಂದಿರುವ ರೈತರ ಖಾತೆಗೆ 13, 599 ರೂಪಾಯಿ ಹಾಗೂ ಕಡಿಮೆ ಹಣ ಇದ್ದವರ ಖಾತೆಗೆ ಕಡಿಮೆ ಹಣ ಜಮಾ ಆಗಿದೆ.
ಹಾಗಾಗಿ ಈ ಹಿಂದೆ ನೀವೇನಾದರೂ ಅರ್ಜಿ ಸಲ್ಲಿಸಿದ್ದರೆ ಈ ಕೂಡಲೇ ನಿಮ್ಮ ಅಕೌಂಟ್ ಚೆಕ್ ಮಾಡಿಕೊಳ್ಳಿ.
ಲೇಖಕರು: ಚಿನ್ನಪ್ಪ ಎಸ್. ಅಂಗಡಿ
Share your comments