1. ಸುದ್ದಿಗಳು

DA Hike : ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್‌ : ಶೀಘ್ರದಲ್ಲೇ ತುಟ್ಟಿಭತ್ಯೆ ಹೆಚ್ಚಳ ಜಾರಿಗೆ!

Kalmesh T
Kalmesh T
DA Hike: Increase in dearness allowance will be implemented soon!

DA Hike : ಅಂದಾಜು ಲೆಕ್ಕದಲ್ಲಿ 1 ಕೋಟಿಗೂ ಅಧಿಕ ಸರ್ಕಾರಿ ನೌಕರರಿಗೆ ಹಾಗೂ ಪಿಂಚಣಿದಾರರಿಗೆ ಕೇಂದ್ರ ಸರ್ಕಾರ ಶೀಘ್ರದಲ್ಲೇ ಸಿಹಿಸುದ್ದಿಯನ್ನು ನೀಡಲಿದೆ.

ಬಹು ದಿನಗಳಿಂದ ಸರ್ಕಾರಿ ನೌಕರರು ಕಾಯುತ್ತಿದ್ದ  ತುಟ್ಟಿಭತ್ಯೆ ಹೆಚ್ಚಳದ (DA Hike) ಕುರಿತು ಇದೀಗ ಕೇಂದ್ರ ಸರ್ಕಾರ ಪ್ರಮುಖ ಮಾಹಿತಿಯೊಂದನ್ನ ತಿಳಿಸಿದೆ. ಅದೇನೆಂದರೆ, ಶೀಘ್ರದಲ್ಲೇ ತುಟ್ಟಿಭತ್ಯೆ ಹೆಚ್ಚಳವನ್ನ ಜಾರಿಗೆ ತರುವ ಕುರಿತು ತಿಳಿಸಿದೆ.

ಕೇಂದ್ರ ಹಣಕಾಸು ಸಚಿವಾಲಯದ ವೆಚ್ಚ ವಿಭಾಗವು ಡಿಎ ಹೆಚ್ಚಳದ ಪ್ರಸ್ತಾವನೆಯನ್ನು ರೂಪಿಸುತ್ತದೆ ಮತ್ತು ಅನುಮೋದನೆಗಾಗಿ ಕೇಂದ್ರ ಸಚಿವ ಸಂಪುಟದ ಮುಂದೆ ಪ್ರಸ್ತಾವನೆಯನ್ನು ಕೂಡ ಇರಿಸುತ್ತದೆ.

ಈ ಪ್ರಕಾರವಾಗಿ ಜುಲೈ 1, 2023 ರಿಂದ ಡಿಎ ಹೆಚ್ಚಳ (DA Hike) ಜಾರಿಗೆ ಬರಲಿದೆ ಎನ್ನುವ ಮಾಹಿತಿ ಕೂಡ ಇದೆ.

ಸಚಿವಾಲಯವೂ ತನ್ನ ಒಂದು ಕೋಟಿಗೂ ಅಧಿಕ ನೌಕರರಿಗೆ (government employees) ಮತ್ತು ಪಿಂಚಣಿದಾರರಿಗೆ (pensioners) ಕೇಂದ್ರ ಸರ್ಕಾರ ಶೀಘ್ರದಲ್ಲೇ ಸಿಹಿಸುದ್ದಿಯನ್ನು ನೀಡುವ ಸಾಧ್ಯತೆಗಳು ಕೂಡ ಇದೆ.

ತುಟ್ಟಿಭತ್ಯೆಯನ್ನು (Dearness allowance) ಶೇಕಡಾ 42 ರಿಂದ ಶೇ. 45ಕ್ಕೆ ಅಂದರೆ ಶೇ. 3 ಪಾಯಿಂಟ್‌ಗಳಷ್ಟು ಹೆಚ್ಚಿಸುವ ಸಾಧ್ಯತೆಯಿದೆ ಎಂದು ವರದಿಗಳು ಹೇಳುತ್ತಿವೆ.

ಈ ಸಂಬಂಧ ಪಿಟಿಐ  (Press Trust Of India) ಜೊತೆ ಮಾತನಾಡಿದ ಅಖಿಲ ಭಾರತ ರೈಲ್ವೇಮೆನ್ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಶಿವ ಗೋಪಾಲ್ ಮಿಶ್ರಾ, "ಜೂನ್ 2023 ರ ಸಿಪಿಐ-ಐಡಬ್ಲ್ಯೂ ಜುಲೈ 31, 2023 ರಂದು ಬಿಡುಗಡೆಯಾಗಿದೆ.

ನಾವು ತುಟ್ಟಿಭತ್ಯೆಯಲ್ಲಿ ಶೇಕಡಾ ನಾಲ್ಕು ಪಾಯಿಂಟ್ ಹೆಚ್ಚಳಕ್ಕೆ ಒತ್ತಾಯಿಸುತ್ತಿದ್ದೇವೆ. ಆದರೆ ಮೂರು ಶೇಕಡಾವಾರು ಅಂಕಗಳಿಗಿಂತ ಸ್ವಲ್ಪ ಹೆಚ್ಚು ತುಟ್ಟಿಭತ್ಯೆ ಕಾರ್ಯರೂಪಕ್ಕೆ ಬರುವ ಸಾಧ್ಯತೆ ಇದೆ.

ಹೀಗಾಗಿ DA ಮೂರು ಶೇಕಡಾ ಪಾಯಿಂಟ್‌ಗಳಿಂದ ಶೇಕಡಾ 45ಕ್ಕೆ ಹೆಚ್ಚಾಗುವ ಸಾಧ್ಯತೆಯಿದೆ" ಎಂದು ಮಾಹಿತಿ ನೀಡಿದ್ದಾರೆ.

ಪ್ರಸ್ತುತ, ಒಂದು ಕೋಟಿಗೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು 42 ಪ್ರತಿಶತ ತುಟ್ಟಿಭತ್ಯೆಯನ್ನು ಪಡೆಯುತ್ತಿದ್ದಾರೆ.

DA ಯಲ್ಲಿ ಕೊನೆಯ ಬಾರಿ ಮಾರ್ಚ್ 24, 2023 ರಂದು ಪರಿಷ್ಕರಣೆಯನ್ನು ಮಾಡಲಾಯಿತು ಮತ್ತು ಜನವರಿ 1, 2023 ರಿಂದ ಜಾರಿಗೆ ಬಂದಿತು.

ಒಟ್ಟಾರೆಯಾಗಿ ಬಹು ದಿನಗಳಿಂದ ಸರ್ಕಾರಿ ನೌಕರರು ಕಾಯುತ್ತಿರುವ ತುಟ್ಟಿಭತ್ಯೆ ಹೆಚ್ಚಳದ ಸುದ್ದಿ ಶೀಘ್ರದಲ್ಲೆ ಅವರಿಗೆ ದೊರೆಯುವ ಸಾಧ್ಯತೆ ಹೆಚ್ಚಿದೆ.

Bank Holidays : ಆಗಸ್ಟ್‌ ತಿಂಗಳ ಬ್ಯಾಂಕ್‌ ರಜಾ ದಿನಗಳು : ಯಾವೆಲ್ಲ ದಿನ ಗೊತ್ತಾ?

Published On: 08 August 2023, 11:34 AM English Summary: DA Hike: Increase in dearness allowance will be implemented soon!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.