ಮಾಂಡೌಸ್ ಚಂಡಮಾರುತದ ಪ್ರಭಾವದಿಂದ ರಾಜ್ಯದ ವಿವಿಧೆಡೆ ಮಳೆ ಮುಂದುವರಿದಿದ್ದು, ಸೋಮವಾರವೂ ರಾಜ್ಯದ ವಿವಿಧೆಡೆ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಲೆನಾಡು ಭಾಗದಲ್ಲಿ ಆನೆ ಹಾವಳಿ: ಕೇಂದ್ರಕ್ಕೆ ನಿಯೋಗ ಪ್ರಜ್ವಲ್ ರೇವಣ್ಣ
ಸೋಮವಾರ ಚಾಮರಾಜನಗರ, ಚಿಕ್ಕಮಗಳೂರು, ಕೊಡಗು ಹಾಗೂ ಶಿವಮೊಗ್ಗದಲ್ಲಿ ಭಾರೀ ಮಳೆ ಆಗುವ ಸಾಧ್ಯತೆ ಇದೆ.
ಕಳೆದ 24 ಗಂಟೆಗಳಲ್ಲಿ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಕಡೆಗಳಲ್ಲಿ ಮತ್ತು ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಮಳೆ ಆಗಿದೆ.
Heavy Rain| ರಾಜ್ಯದ ವಿವಿಧೆಡೆ ಧಾರಾಕಾರ ಮಳೆ!
ರಾಜ್ಯದ ವಿವಿಧೆಡೆ ಭಾರೀ ಮಳೆ ಆಗಿದೆ. ಭಾರೀ ಮಳೆಯ ಪ್ರಮಾಣಗಳು (ಸೆಂ.ಮೀ.ಗಳಲ್ಲಿ): ಕೋಲಾರ 8, ಚಿಂತಾಮಣಿ(ಚಿಕ್ಕಬಳ್ಳಾಪುರ ಜಿಲ್ಲೆ), ರಾಯಲ್ಪಾಡು (ಕೋಲಾರ ಜಿಲ್ಲೆ) ತಲಾ 7. ಮುಖ್ಯ ಮಳೆಯ ಪ್ರಮಾಣ (ಸೆಂ. ಮೀ.ಗಳಲ್ಲಿ): ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮಾಲೂರು (ಕೋಲಾರ ಜಿಲ್ಲೆ) ತಲಾ 6, ಹೊಸಕೋಟೆ (ಬೆಂಗಳೂರು ಗ್ರಾಮಾಂತರ ಜಿಲ್ಲೆ), ಗೌರಿಬಿದನೂರು (ಚಿಕಬಳ್ಳಾಪುರ ಜಿಲ್ಲೆ), ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ ಜಿಲ್ಲೆ) ತಲಾ 5; ಬೆಂಗಳೂರು ನಗರ,ಯೆಲಹಂಕ (ಬೆಂಗಳೂರು ನಗರ ಜಿಲ್ಲೆ) ಮಧುಗಿರಿ, ಪಾವಗಡ (ಎರಡೂ ತುಮಕೂರು ಜಿಲ್ಲೆ), ಚಿಕ್ಕಬಳ್ಳಾಪುರ, ತೊಂಡೇಭಾವಿ (ಚಿಕ್ಕಬಳ್ಳಾಪುರ ಜಿಲ್ಲೆ) ತಲಾ 4, ಬೆಂಗಳೂರು ಎಚ್ಎಎಲ್ ವಿಮಾನ ನಿಲ್ದಾಣ, ಹೆಸರಘಟ್ಟ, ಗೋಪಾಲ್ ನಗರ (ಎರಡೂ ಬೆಂಗಳೂರು ನಗರ ಜಿಲ್ಲೆ), ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ ಜಿಲ್ಲೆ), ತುಮಕೂರು, ವೈ ಎನ್ ಹೊಸಕೋಟೆ (ತುಮಕೂರು ಜಿಲ್ಲೆ), ಕುಡತಿನಿ (ಬಳ್ಳಾರಿ ಜಿಲ್ಲೆ), ಚಿತ್ರದುರ್ಗ,ನಾಯಕನಹಟ್ಟಿ (ಚಿತ್ರದುರ್ಗ ಜಿಲ್ಲೆ) ತಲಾ 3, ಎಲೆಕ್ಟ್ರಾನಿಕ್ ಸಿಟಿ (ಬೆಂಗಳೂರು ನಗರ ಜಿಲ್ಲೆ), ಸಿರಾ, ತಿಪಟೂರು (ಎರಡೂ ತುಮಕೂರು ಜಿಲ್ಲೆ), ಹಿರಿಯೂರು (ಚಿತ್ರದುರ್ಗ ಜಿಲ್ಲೆ), ರಾಮನಗರ, ಮಾಗಡಿ (ರಾಮನಗರ ಜಿಲ್ಲೆ), ಗುಬ್ಬಿ, ಬುಕ್ಕಪಟ್ಟಣ (ಎರಡೂ ತುಮಕೂರು ಜಿಲ್ಲೆ), ಕೊಟ್ಟೂರು (ಬಳ್ಳಾರಿ ಜಿಲ್ಲೆ) ತಲಾ 2; ಮಾನ್ವಿ, ಕುರ್ಡಿ (ಎರಡೂ ರಾಯಚೂರು ಜಿಲ್ಲೆ), ಹಗರಿಬೊಮ್ಮನಹಳ್ಳಿ (ಬಳ್ಳಾರಿ ಜಿಲ್ಲೆ), ಹೊಸದುರ್ಗ, ಬಿ ದುರ್ಗ, ಪರಶುರಾಂಪುರ (ಎಲ್ಲಾ ಚಿತ್ರದುರ್ಗ ಜಿಲ್ಲೆ), ಕೃಷ್ಣರಾಜಸಾಗರ, ಶ್ರೀರಂಗಪಟ್ಟಣ (ಎರಡೂ ಮಂಡ್ಯ ಜಿಲ್ಲೆ) ದಾವಣಗೆರೆ, ಚನ್ನಗಿರಿ, ಹರಪನಹಳ್ಳಿ, ಹೊನ್ನಾಳಿ (ಎಲ್ಲವೂ ದಾವಣಗೆರೆ ಜಿಲ್ಲೆ), ಚಾಮರಾಜನಗರ, ಮಂಡ್ಯ, ಶಿವಮೊಗ್ಗ, ಮಿಡಿಗೇಶಿ, ಕುಣಿಗಲ್ (ಎರಡೂ ತುಮಕೂರು ಜಿಲ್ಲೆ), ಶ್ರವಣಬೆಳಗೊಳ (ಹಾಸನ ಜಿಲ್ಲೆ), ಹೆಸರಘಟ್ಟ (ಬೆಂಗಳೂರು ನಗರ ಜಿಲ್ಲೆ), ಮೈಸೂರು, ಶೃಂಗೇರಿ, ಜಯಪುರ, ಅಜ್ಜಂಪುರ( ಎಲ್ಲವೂ ಚಿಕ್ಕಮಗಳೂರು ಜಿಲ್ಲೆ) ತಲಾ 1 ಸೆಂ.ಮೀ ಮಳೆ ಆಗಿರುವುದು ವರದಿ ಆಗಿದೆ.
ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಅತೀ ಕನಿಷ್ಠ ಉಷ್ಣಾಂಶ 13.8 ಡಿಗ್ರಿ ಸೆಲ್ಸಿಯಸ್ ದಾವಣಗೆರೆಯಲ್ಲಿ ದಾಖಲಾಗಿದೆ.
PmKisan | ಪಿ.ಎಂ ಕಿಸಾನ್ ಸಮ್ಮಾನ್ 13ನೇ ಕಂತಿನ ಹಣಕ್ಕೆ ಕ್ಷಣಗಣನೆ!
ಮುಂದಿನ 24 ಗಂಟೆಗಳ ಕಾಲ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಕಡೆಗಳಲ್ಲಿ ಮತ್ತು ಉತ್ತರ ಒಳನಾಡಿನ ಹಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
ಅಲ್ಲದೇ ರಾಜ್ಯಾದ್ಯಂತ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಮಳೆ ಆಗುವ ಸಾಧ್ಯತೆ ಇದೆ.
Heavy Rain| ರಾಜ್ಯದ ವಿವಿಧೆಡೆ ಧಾರಾಕಾರ ಮಳೆ!
ಮೀನುಗಾರರಿಗೆ ಎಚ್ಚರಿಕೆ
ಕರಾವಳಿ ತೀರದಲ್ಲಿ ಬಿರುಗಾಳಿಯ ವೇಗವು ಪ್ರತಿ ಗಂಟೆಗೆ 40ರಿಂದ 45 ಕಿ.ಮೀ ಇರಲಿದ್ದು, 55 ಕಿ.ಮೀ ವರೆಗೆ ತಲುಪುವ ಸಾಧ್ಯತೆ ಇದೆ. ಹೀಗಾಗಿ, ಮೀನುಗಾರರಿಗೆ ಈ ನಿರ್ದಿಷ್ಟ ಅವಧಿಯಲ್ಲಿ ಸಮುದ್ರಕ್ಕೆ ಇಳಿಯದಂತೆ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇನ್ನು ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಹಗುರ ಮಳೆ ಆಗುವ ಬಹಳಷ್ಟು ಸಾಧ್ಯತೆಗಳಿವೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮಂಜುಮುಸುಕಿದ ಬಹಳಷ್ಟು ಸಾಧ್ಯತೆಗಳಿವೆ.
ಉಳಿದಂತೆ ಗರಿಷ್ಠ ಉಷ್ಣಾಂಶ 25 ಮತ್ತು ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇರುವ ಬಹಳಷ್ಟು ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
Share your comments