1. ಸುದ್ದಿಗಳು

ಅಬ್ಬರಿಸಲು ಸಜ್ಜಾದ ದೇಶದ ಮೊದಲ Cyclone..ಏಲ್ಲೆಲ್ಲಿ Effect..!

KJ Staff
KJ Staff

ದಕ್ಷಿಣ ಬಂಗಾಳ ಕೊಲ್ಲಿಯ ಮಧ್ಯ ಭಾಗಗಳ ಮೇಲಿನ ಕಡಿಮೆ ಒತ್ತಡದ ಪ್ರದೇಶವು ಪೂರ್ವ-ಈಶಾನ್ಯದ ಮೇಲೆ ಪ್ರಭಾವ ಬೀರಲಿದೆ. ಮತ್ತು ಚಂಡ ಮಾರುತವು ಆಗ್ನೇಯ ಬಂಗಾಳ ಕೊಲ್ಲಿ ಮತ್ತು ಪಕ್ಕದ ಪೂರ್ವ ಸಮಭಾಜಕ ಹಿಂದೂ ಮಹಾಸಾಗರದ ಮೇಲೆ ಗುರುವಾರ, ಮಾರ್ಚ್ 17 ರಂದು ಬೆಳಿಗ್ಗೆ 8.30 ಕ್ಕೆ ಕೇಂದ್ರೀಕೃತವಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.. ಬಂಗಾಳಕೊಲ್ಲಿಯ ಆಗ್ನೇಯ ಪ್ರದೇಶದಲ್ಲಿ ಕಡಿಮೆ ಒತ್ತಡದ ಪ್ರದೇಶ ಮಾರ್ಚ್ 21 ರ ವೇಳೆಗೆ ಸೈಕ್ಲೋನಿಕ್ ಚಂಡಮಾರುತವಾಗಿ ತೀವ್ರಗೊಳ್ಳುವ ಸಾಧ್ಯತೆಯಿದೆ.

ಇದನ್ನೂ ಓದಿ:

#Holi2022 ಅಪ್ಪಿ ತಪ್ಪಿ ಹೋಳಿ ಗುಂಗಲ್ಲಿ ಈ ಕೆಲಸ ಮಾಡಿದ್ರೆ Case ಬೀಳೋದು ಪಕ್ಕಾ..!

2022 ರಲ್ಲಿ ಮೊದಲ ಬಾರಿಗೆ ಅಸಾನಿ ಚಂಡಮಾರುತವು ಮಾರ್ಚ್ 21 ರಂದು ಅಂಡಮಾನ್ ನಿಕೋಬಾರ್ ಅನ್ನು ಅಪ್ಪಳಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅಸಾನಿ ಚಂಡಮಾರುತವು 2022 ರ ಮೊದಲ ಚಂಡಮಾರುತವಾಗಿದೆ. ಇದು ಮಾರ್ಚ್ 21 ರಂದು ಅಂಡಮಾನ್ ಮತ್ತು ನಿಕೋಬಾರ್ ಅನ್ನು ಅಪ್ಪಳಿಸಿ ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ಕಡೆಗೆ ಚಲಿಸುವ ಸಾಧ್ಯತೆಯಿದೆ. ಬಂಗಾಳಕೊಲ್ಲಿಯ ಆಗ್ನೇಯ ಪ್ರದೇಶದಲ್ಲಿ ಕಡಿಮೆ ಒತ್ತಡದ ಪ್ರದೇಶವು ಸೈಕ್ಲೋನಿಕ್ ಚಂಡಮಾರುತವಾಗಿ ತೀವ್ರಗೊಳ್ಳಬಹುದು ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ:Petrol-Diesel Price Hike! Petrol-Diesel ಬೆಲೆ 110 ರೂ.ಗಿಂತ ಹೆಚ್ಚಿಗೆಯಾಗಿದೆ! ಗ್ರಾಹಕರಿಗೆ ಮತ್ತಷ್ಟು ಚಿಂತೆ!

ಭಾರತದ ಕರಾವಳಿ ಮೇಲೆ ಪರಿಣಾಮವಿಲ್ಲ?

ಸದ್ಯಕ್ಕೆ ಈ ಸೈಕ್ಲೋನ್‌ ಭಾರತದ ಕರಾವಳಿಯ ಭಾಗದ ಮೇಲೆ ಪರಿಣಾಮ ಬೀರುವಂತೆ ಇಲ್ಲ ಎಂದು ತಜ್ಞರು ತಿಳಿಸಿದ್ದಾರೆ. ನಮ್ಮಲೆಕ್ಕಾಚಾರಗಳು ಅಸಾನಿ ಬಾಂಗ್ಲಾದೇಶ ಅಥವಾ ಪಕ್ಕದ ಉತ್ತರ ಮ್ಯಾನ್ಮಾರ್ ಕರಾವಳಿಯನ್ನು ದಾಟಬಹುದು ಎಂದು ಸೂಚಿಸುತ್ತದೆ. ಆದರೆ ನಿರ್ದಿಷ್ಟವಾದ ದಾರಿ ಹೀಗೆಯೇ ಇರುತ್ತೆ ಎಂದು ಹೇಳಲು ಆಗೋಲ್ಲ ಎಂದಿದ್ದಾರೆ. ಚಂಡಮಾರುತದ ರಚನೆ ಮತ್ತು ತೀವ್ರತೆಗೆ ಎಲ್ಲಾ ಪರಿಸ್ಥಿತಿಗಳು ಅನುಕೂಲಕರವಾಗಿವೆ ಎನ್ನಲಾಗಿದೆ..

ಇದನ್ನೂ ಓದಿ: ಪಳ-ಪಳ ಹೊಳೆಯುವ ಸೌಂದರ್ಯ ನಿಮ್ಮದಾಗಬೇಕೆ? Vitamin E ನಲ್ಲಿದೆ ರಹಸ್ಯ.

 

Published On: 19 March 2022, 01:49 PM English Summary: Cyclone Asani Over Andaman Islands

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.