ಜಿಲ್ಲೆಯ ವಿವಿಧ ವಿಧಾನಸಭಾ ಮತಕ್ಷೇತ್ರಗಳಿಗೆ ಚುನಾವಣಾ ಮತ್ತು ವೆಚ್ಚ ವೀಕ್ಷಕರಾಗಿ ಆಗಿಮಿಸಿರುವ ಬೇರೆ ಬೇರೆ ರಾಜ್ಯಗಳ ಹಿರಿಯ ಐಎಎಸ್, ಐ.ಆರ್.ಎಸ್ ಅಧಿಕಾರಿಗಳು ಸಾರ್ವಜನಿಕರಲ್ಲಿ ಮತದಾನದ ಮಹತ್ವ ಸಾರಲು ಧಾರವಾಡದಿಂದ ಹುಬ್ಬಳ್ಳಿವರೆಗೆ ಇಂದು ಬೆಳಿಗ್ಗೆ ಸೈಕಲ್ ಜಾಥಾ ಮಾಡಿದರು.
ಇಂದು ಬೆಳಿಗ್ಗೆ 6 ಗಂಟೆಗೆ ಧಾರವಾಡ ಕೋರ್ಟ್ ಸರ್ಕಲ್ ದಲ್ಲಿ ಎಲ್ಲ ಅಬ್ಸರ್ವರ್ ಸೇರಿದಂತೆ ನಂತರ ನೆರೆದ ಸಾರ್ವಜನಿಕರಿಗೆ ಕೈ ಕುಲುಕಿ, ತಪ್ಪದೇ ಮೇ.10 ರಂದು ಮತದಾನ ಮಾಡಲು ತಿಳಿಸಿದರು.
ಮತದಾನದ ಮಹತ್ವ, ಪ್ರಜಾಪ್ರಭುತ್ವದ ಸದೃಡತೆ, ಮತದಾರನ ಕರ್ತವ್ಯದ ಬಗ್ಗೆ ತಿಳುವಳಿಕೆ ನೀಡಿದರು.
ಹುಬ್ಬಳ್ಳಿಗೆ ಹೋಗುವ ದಾರಿಯುದ್ದಕ್ಕೂ ಅಲ್ಲಲ್ಲಿ ನಿಂತು, ಗುಂಪು ಸೇರಿದ್ದ ಜನರಿಗೆ, ಬಿ.ಆರ್.ಟಿ.ಎಸ್. ನಿಲ್ದಾಣದಲ್ಲಿರುವ ಪ್ರಯಾಣಿಕರಿಗೆ ಮತದಾನದ ತಿಳುವಳಿಕೆ ನೀಡಿದರು.
ಸೈಕಲ್ ಜಾಥಾದಲ್ಲಿ ನವಲಗುಂದ-69 ವಿಧಾನಸಭಾ ಮತಕ್ಷೇತ್ರ ಮತ್ತು ಕುಂದಗೋಳ-70 ವಿಧಾನಸಭಾ ಮತಕ್ಷೇತ್ರದ ವೀಕ್ಷಕರಾದ ಆದಿತ್ಯಕುಮಾರ ಆನಂದ,
ಧಾರವಾಡ-71 ವಿಧಾನಸಭಾ ಮತಕ್ಷೇತ್ರ ಹಾಗೂ ಹುಬ್ಬಳ್ಳಿ ಧಾರವಾಡ ಪೂರ್ವ-72 ವಿಧಾನಸಭಾ ಮತಕ್ಷೇತ್ರದ ವೀಕ್ಷಕರಾದ ಪವನ ಕುಮಾರ ಸೇನ್,
ಹುಬ್ಬಳ್ಳಿ ಧಾರವಾಡ ಕೇಂದ್ರ-73 ಹಾಗೂ ಹುಬ್ಬಳ್ಳಿ ಧಾರವಾಡ ಪಶ್ಚಿಮ-74 ವಿಧಾನಸಭಾ ಮತಕ್ಷೇತ್ರದ ವೀಕ್ಷಕರಾದ ಮುತ್ತುಕೃಷ್ಣನ್ ಶಂಕರನಾರಾಯಣನ್,
ಕಲಘಟಗಿ-75 ವಿಧಾನ ಸಭಾ ಕ್ಷೇತ್ರದ ವೀಕ್ಷಕರಾದ ಮನೋಜ್ ಪುಷ್ಪ ಹಾಗೂ ಧಾರವಾಡ ಸೈಕ್ಲಿಂಗ್ ತಂಡದ ಸದಸ್ಯರು ಭಾಗವಹಿಸಿದ್ದರು.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರ ಮಾರ್ಗದರ್ಶನದಲ್ಲಿ ಜಿಲ್ಲಾಡಳಿತದಿಂದ ಸೈಕಲ್ ಜಾಥಾ ಸಿದ್ದತೆ ಮಾಡಿಕೊಳ್ಳಲಾಗಿತ್ತು.
Share your comments