1. ಸುದ್ದಿಗಳು

ರೈತರ ಬೆಳೆ ಸಮೀಕ್ಷೆಗೆ ಕೃಷಿ ಸಚಿವರಿಂದ ಆ್ಯಪ್ (APP) ಲೋಕಾರ್ಪಣೆ

ರೈತರ ಬೆಳೆ ಸಮೀಕ್ಷೆಯ (crop survey) ಮಹತ್ವಾಕಾಂಕ್ಷಿ ಆ್ಯಪ್‌ನ್ನು ಕೃಷಿ ಸಚಿವ ಬಿ.ಸಿ. ಪಾಟೀಲ್ (B.C. patil) ಬುಧವಾರ ಲೋಕಾರ್ಪಣೆ ಮಾಡಿದರು. ಕೃಷಿಕರು ಮತ್ತು ಕೃಷಿ ಇಲಾಖೆ ನಡುವೆ ಇನ್ನಷ್ಟು ಉತ್ತಮ ಬಾಂಧವ್ಯ ವೃದ್ಧಿಸಲು ರೈತರ ಅನುಕೂಲಕ್ಕಾಗಿ ಈ ಆ್ಯಪ್‌ನ್ನು ಬಿಡುಗಡೆ (Released) ಮಾಡಲಾಗಿದೆ ಎಂದರು. ಅವರು  ಆನ್‌ಲೈನ್ ಮೂಲಕ ಆ್ಯಪ್ (APP) ಬಿಡುಗಡೆ ಮಾಡಿದ ನಂತರ ಮಾತನಾಡಿ, ಈ ಆ್ಯಪ್ ಮೂಲಕ ಅಂತರ್ಜಾಲದ ಸಹಾಯದಿಂದ ಕೃಷಿಕರು ತಮ್ಮಅಂಗೈನಲ್ಲಿಯೇ ಇನ್ನುಮುಂದೆ ಬೆಳೆ ಸಮೀಕ್ಷೆಗೆ ಸಂಬಂಧಿಸಿದ ಮಾಹಿತಿ ಹಾಗೂ ಸಮೀಕ್ಷೆ ನಡೆಸುವವರ ವಿವರ ಪಡೆಯಬಹುದು ಎಂದರು.

ಈ ಮೊಬೈಲ್ ಅಪ್ಲೀಕೇಷನ್ ಅನ್ನು ರೈತರು ಆಂಡ್ರೈಡ್ ಮೊಬೈಲ್ ಸಹಾಯದಿಂದ ಪ್ಲೇ ಸ್ಟೋರ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು. ಸುಮಾರು 60 ಎಂಬಿ ಸಾಮರ್ಥ್ಯವುಳ್ಳ ಈ ಆ್ಯಪ್ ರೈತರು ತಮ್ಮ ಅಂಡ್ರೈಡ್ ಮೊಬೈಲ್ನಲ್ಲಿ ಪ್ಲೇಸ್ಟೋರ್ ಮೂಲಕ ಬೆಳೆ ಸಮೀಕ್ಷೆ ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಂಡು ತಮ್ಮ ಮೊಬೈಲ್ (Mobile) ನಂಬರ್ ಅನ್ನು ಓಟಿಪಿ (OTP) ಮೂಲಕ ರಿಜಿಸ್ಟರ್ ಮಾಡಿಕೊಳ್ಳಬೇಕು. ನೋಂದಣಿಯಾದ ನಂತರ ತಮ್ಮ ಜಮೀನಿನ ಜಿಲ್ಲೆ, ತಾಲೂಕು, ಗ್ರಾಮ, ಸರ್ವೆ ನಂಬರ್ ಸೇರಿದಂತೆ ಜಮೀನಿನ ವಿವರಗಳುನ್ನು ನಮೂದಿಸಿ ಜಮೀನಿನ ಮಾಹಿತಿ ಹಾಗೂ ತಮ್ಮ ಗ್ರಾಮದ GIS ನಕ್ಷೆಯನ್ನು ಡೌನ್ಲೋಡ್ ಮಾಡಿ ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ಹಾಗೂ ಇತರೆ ವಿವರಗಳನ್ನು ಮತ್ತು ಛಾಯಾಚಿತ್ರಗಳನ್ನು ಮೊಬೈಲ್ ಆ್ಯಪ್ ನಲ್ಲಿಸಂಗ್ರಹಿಸಿ ಅಪ್ಲೋಡ್ (Upload) ಮಾಡಬೇಕು. ಆಗ ರೈತರ ಸರ್ವೆ ನಂಬರ್ (survey number) ವಾರು ಜಮೀನಿನ ಬೆಳೆಯ ವಿವರಗಳನ್ನು “ಕರ್ನಾಟಕ ಸ್ಟೇಟ್ ಡಾಟಾ ಸೆಂಟರ್” ನಲ್ಲಿ ಸಂಗ್ರಹಣೆ ಮಾಡಿ ವಿವಿಧ ಯೋಜನೆಗಳಿಗೆ ಬಳಸಲಾಗುತ್ತದೆ. ರೈತರ ಅನುಕೂಲಕ್ಕಾಗಿ ಹಾಗೂ ಸೌಲಭ್ಯದಿಂದ ವಂಚಿತರಾಗಬಾರದು ಎಂಬ ಸದುದ್ದೇಶದಿಂದ ಈ ಆ್ಯಪ್ ಪರಿಚಯಿಸಲಾಗುತ್ತಿದ್ದು, ರೈತರು ಇದರ ಸದುಪಯೋಗಪಡಿಸಿಕೊಳ್ಳುವಂತೆ ಸಚಿವ ಬಿ.ಸಿ ಪಾಟೀಲ್ ರೈತರಲ್ಲಿ ಮನವಿ ಮಾಡಿದ್ದಾರೆ.

ಬೆಳೆ ಸಮೀಕ್ಷೆ 2020-21ಸಾಲಿನಲ್ಲಿ ರೈತ ಬಾಂಧವರು ತಮ್ಮ ಜಮೀನಿನ ಮುಂಗಾರು ಹಂಗಾಮಿನ ಬೆಳೆ ವಿವರಗಳನ್ನು ತಾವೇ ಸ್ವತಃ ಮೊಬೈಲ್ ತಂತ್ರಾಶದ ಮೂಲಕ ದಾಖಲಿಸಬಹುದು. ಕೆಳಗಿನ ಲಿಂಕ್ ಮೂಲಕ https://play.google.com/store/apps/details?id=com.csk.KariffTPKfarmer.cropsurvey ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಬೆಳೆ ವಿವರ ದಾಖಲಿಸಲು ಕೊನೆಯ ದಿನಾಂಕ 24-08-2020 ಆಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಕೃಷಿ ಇಲಾಖೆ, ಕಂದಾಯ ಇಲಾಖೆ ಹಾಗೂ ತೋಟಗಾರಿಕೆ (Horticulture) ಇಲಾಖೆಯ ಸಂಪರ್ಕಿಸಬೇಕಾಗಿದೆ.

Published On: 12 August 2020, 05:25 PM English Summary: crop survey app released

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.