ಕೃಷಿ ಹಾಗೂ ಬೆಳೆಗಳ ವಿಚಾರದಲ್ಲಿ ಯಾವುದೇ ನಷ್ಟ ಪರಿಹಾರ, ವಿಮೆ ಹಣ ಪಡೆಯಬೇಕಾದರೆ ಇದೀಗ ರೈತರೇ ತಮ್ಮ ಬೆಳೆಗಳ ವಿವರಗಳನ್ನು ದಾಖಲು ಮಾಡುವುದು ಕಡ್ಡಾಯ. ಇಲ್ಲವಾದರೆ ಸೌಲಭ್ಯಗಳಿಂದ ವಂಚಿತವಾಗಬೇಕಾಗುತ್ತದೆ..
ನಾಲ್ಕು ವರ್ಷಗಳಿಂದ ಜಾರಿಯಲ್ಲಿರುವ ಮೊಬೈಲ್ ಫೋನ್ ಬೆಳೆ ಸಮೀಕ್ಷಾ ಕಾರ್ಯ ಈ ವರ್ಷ ಮತ್ತೆ ಬಂದಿದೆ. ಇದಕ್ಕಿಂತ ಮೊದಲು ಖಾಸಗಿಯವರು ಸಮೀಕ್ಷೆ ಮಾಡುತ್ತಿದ್ದರು. ಆದರೆ ಈಗ ರೈತರು ಸಮೀಕ್ಷೆ ಮಾಡಬೇಕಾಗುತ್ತದೆ. ಎಷ್ಟು ರೈತರ ಹತ್ತಿರ Android Phone) ಇದೆಯೇ ಗೊತ್ತಿಲ್ಲ. ಆದರೆ ಆಗಸ್ಟ್ 24ರೊಳಗೆ ರೈತರು ತಮ್ಮ ಜಮೀನಿನಲ್ಲಿರುವ ಬೆಳೆಗಳ ವಿವರವನ್ನು ಮೊಬೈಲ್ ಆ್ಯಪ್ನಲ್ಲಿ ಅಪ್ಲೋಡ್ ಮಾಡಬೇಕು. ಇದರಿಂದ ಮುಂದೆ ಕೃಷಿ ಇಲಾಖೆಯಿಂದ ದೊರೆಯುವ ನಾನಾ ಸೌಲಭ್ಯಗಳಿಗೆ ಈ ಸಮೀಕ್ಷೆ ಸಹಕಾರಿಯಾಗಲಿದೆ.
ರೈತರಿಗೆ ತನ್ನ ಹೊಲಕ್ಕೆ ತಾನೇ ಸರ್ಟಿಫಿಕೇಟ್ ಕೊಡುವ ಸಂಪೂರ್ಣ ಸ್ವಾತಂತ್ರ್ಯ ಬೆಳೆ ಸಮೀಕ್ಷೆ (crop Survey) ಮೊಬೈಲ್ ಆ್ಯಪ್ ಮೂಲಕ ಸಿಕ್ಕಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.
ಅವರು ಚಿತ್ರದುರ್ಗ ತಾಲ್ಲೂಕಿನ ಕಸ್ತೂರಿ ರಂಗಪ್ಪನ ಹಳ್ಳಿಯ ರೈತರೊಬ್ಬರ ಜಮೀನಿನಲ್ಲಿ ಮೊಬೈಲ್ ಆ್ಯಪ್ ಮೂಲಕ ಬೆಳೆ ಸಮೀಕ್ಷೆ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಹಿಂದಿನ ಮೂರು ವರ್ಷಗಳಿಂದ ಮೊಬೈಲ್ ಆ್ಯಪ್ ಮೂಲಕ ಬೆಳೆ (Crop) ಸಮೀಕ್ಷೆ ನಡೆಯುತ್ತಿದ್ದರೂ ಹತ್ತಾರು ದೋಷಗಳಿದ್ದವು. ಒಂದು ಸರ್ವೆ ನಂಬರಿನ ಭೂಮಿಯಲ್ಲಿ 2–3 ವಿಧದ ಬೆಳೆ ಇದ್ದರೆ ದಾಖಲು ಮಾಡಲು ಬರುತ್ತಿರಲಿಲ್ಲ. ಈಗ ರೂಪಿಸಿರುವ ಆ್ಯಪ್ನಲ್ಲಿ ಎಲ್ಲ ವಿಧದ ಬೆಳೆಗಳ ವಿವರವನ್ನು ಆಂಡ್ರಾಯ್ಡ್ ಮೊಬೈಲ್ ಇರುವ ಯಾವ ರೈತರು ಬೇಕಾದರೂ ಅಪ್ಲೋಡ್ ಮಾಡಬಹುದು. ತಮಗೆ ಸಮೀಕ್ಷೆ ಮಾಡುವುದು ಕಷ್ಟ ಎನಿಸಿದಲ್ಲಿ ತಂತ್ರಾಂಶದ ಜ್ಞಾನವಿರುವ ಖಾಸಗಿ ಯುವಕರ ಸಹಾಯ ಪಡೆಯಬಹುದು. ಈ ಎರಡೂ ಆಗದಿದ್ದರೆ ಖಾಸಗಿ ನಿವಾಸಿಗಳು ಮತ್ತು ಸರ್ಕಾರದ ಸಿಬ್ಬಂದಿ ಸಮೀಕ್ಷೆ ಕೈಗೊಳ್ಳುತ್ತಾರೆ. ಬೆಳೆ ವಿವರವನ್ನು ಅಪ್ಲೋಡ್(Upload) ಮಾಡಲು ಆಗಸ್ಟ್ 24ರ ವರೆಗೆ ಸಮಯವಿದೆ ಎಂದು ತಿಳಿಸಿದರು.
ರೈತರು (farmers) ತೆಗೆದ ಫೊಟೋಗೆ ಗೌರವವಿದೆ. ರೈತರು ತಮ್ಮ ಭೂಮಿಗೆ ಒಡೆಯರಾಗಿದ್ದು, ನನ್ನ ಬೆಲೆ ನನ್ನು ಹಕ್ಕು ಎಂಬುದನ್ನು ರೈತರು ಸಾಬೀತು ಪಡೆಸಿದ್ದಾರೆ ಎಂದ ಅವರು ‘ಹೊಸ ಆ್ಯಪ್ನಿಂದ ಅತಿವೃಷ್ಟಿ–ಅನಾವೃಷ್ಟಿ ಸಂದರ್ಭಗಳಲ್ಲಿ ಪರಿಹಾರ ಪಡೆಯಲು ಅಡ್ಡಿ ಆಗುವುದಿಲ್ಲ. ಇದು ರೈತರಿಗೆ ವರದಾನವಾಗಲಿದೆ ಎಂದರು.
ಕೃಷಿ ಯಂತ್ರಧಾರೆಗಳಿಗೆ ನೆರವು:
ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ರೈತರಿಗೆ ಬೇಕಾಗಿರುವ ಸಣ್ಣ ಮತತ್ ದೊಡ್ಡ ಟ್ರ್ಯಾಕ್ಟರಗಳನ್ನು ಖರೀದಿಸಲು ಈ ವರ್ಷದಿಂದ ರೈತ ಸಹಕಾರಿ ಸಂಘಗಳಿಗೆ 8 ಲಕ್ಷ ರುಪಾಯಿಯವರೆಗೆ ಸಹಾಯಧನ ನೀಡಲಾಗುವುದು. ಕನಿಷ್ಟ 10 ರೈತರು ಸಂಘ ರಚಿಸಿ ಸಹಕಾರ ಸಂಘಗಳ ನಿಯಮದಡಿ ನೋಂದಣಿಯಾಗಿ ಶೇ. 20 ರಷ್ಟು ಭರಿಸಿದಲ್ಲಿ ಶೇ. 80 ರಷ್ಟು ಸರ್ಕಾರದಿಂದ ಸಹಾಯಧನ ನೀಡಲಾಗುತ್ತಿದೆ ಎಂದರು.
https://kannada.krishijagran.com/news/darshak-mobile-app-for-crop-survey/
ಬೆಳೆ ಸಮೀಕ್ಷೆಗೆ (Bele Darshak) ಬೆಳೆ ದರ್ಶಕ್ ಆ್ಯಪ್
Share your comments