ರಾಮನಗರ ಕೃಷಿ ಇಲಾಖೆಯಿಂದ 2020 ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯವು ಜಿಲ್ಲೆಯಲ್ಲಿ ಪೂರ್ಣಗೊಂಡಿದ್ದು, ಇದೇ ನವೆಂಬರ್ 16 ರೊಳಗಾಗಿ ಬೆಳೆ ದರ್ಶಕ್ ಆ್ಯಪ್ ಮುಖಾಂತ್ ಧ್ವನಿ ಮುದ್ರಣ ಮಾಡುವುದರ ಮೂಲಕ ಅಥವಾ ಬೆಳೆ ಸಮೀಕ್ಷೆ ತಂತ್ರಾಂಶ ಅಥವಾ ಲಿಖಿತ ರೂಪದಲ್ಲಿ ಆಕ್ಷೇಪಣೆ ಸಲ್ಲಿಸಬಹುದು.
ಜಿಲ್ಲೆಯಲ್ಲಿ ಒಟ್ಟು 6,77,365 ರೈತರು ಬೆಳೆದಿರುವ ಬೆಳೆಗಳ ವಿವರವನ್ನು ರೈತರ ಮೊಬೈಲ್ ಆ್ಯಪ್ ಅಥವಾ ಖಾಸಗೀ ನಿವಾಸಿಗಳ ಆಪ್ ಬಳಸಿಕೊಂಡು ಸಂಗ್ರಹಿಸಲಾಗಿದೆ. ಈ ಮಾಹಿತಿಯನ್ನು ಬೆಳೆ ವಿಮೆ, ಕನಿಷ್ಠ ಬೆಂಬಲ ಬೆಲೆ, ವಿಪತ್ತು ನಿರ್ವಹಣೆಯಲ್ಲಿ ಬರ ಮತ್ತು ನೆರೆಯಿಂದ ಬೆಳೆ ಹನಿಯಾದರೆ ಬೆಳೆ ನಷ್ಟ ಪರಿಹಾರ, ಡಿ.ಬಿ.ಟಿ ಆಧಾರಿತ ಕಾರ್ಯಕ್ರಮಗಳು ಮೊದಲಾದ ಫಲಾನುಭವಿ ಆಧಾರಿತ ಯೋಜನೆಗಳಿಗೆ ಬೆಳೆ ಸಮೀಕ್ಷೆ ದತ್ತಾಂಶವನ್ನು ಬಳಸಿಕೊಳ್ಳಲಾಗುವುದು.
ಈಗಾಗಲೇ ದಾಖಲಾಗಿರುವ ಬೆಳೆ ಮಾಹಿತಿಯನ್ನು ರೈತರು ಗೂಗಲ್ ಪ್ಲೇ ಸ್ಟೋರ್ನಿಂದ ಬೆಳೆ ದರ್ಶಕ್ ಆ್ಯಪ್ ಡೌನ್ಲೋಡ್ ಮಾಡಿಕೊಂಡು ತಮ್ಮ ಜಮೀನಿಲ್ಲಿ ಬೆಳೆದ ಬೆಳೆ ಮಾಹಿತಿಯನ್ನು ಛಾಯಾಚಿತ್ರದ ಸಮೇತ ವೀಕ್ಷಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ... ರೈತರೇ ನಡೆಸಿದ ಬೆಳೆ ಸಮೀಕ್ಷೆ ಮಾದರಿಯಲ್ಲಿ ಹಿಂಗಾರು ಬೆಳೆ ಸಮೀಕ್ಷೆ : ಬಿ.ಸಿ ಪಾಟೀಲ್
ಹಾವೇರಿ ಜಿಲ್ಲೆಯ ರೈತರು ನ. 10 ರೊಳಗೆ ಬೆಳೆ ವಿಮೆ ಸಮೀಕ್ಷೆ ಆಕ್ಷೇಪಣೆ ಸಲ್ಲಿಸಲು ಅವಕಾಶ
ಹಾವೇರಿ ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆ ಮೂಲಕ ಸಂಗ್ರಹಿಸಲಾದ ಬೆಳೆ ಮಾಹಿತಿ ಕುರಿತು ಆಕ್ಷೇಪಣೆಗಳನ್ನು ಸಲ್ಲಿಸಲು ನ.10ರವರೆಗೆ ಅವಕಾಶ ಕಲ್ಪಿಸಲಾಗಿದೆ. ರೈತರು ಬೆಳೆ ಮಾಹಿತಿ/ ವಿಸ್ತೀರ್ಣದ ಮಾಹಿತಿ ಕುರಿತು ‘ಬೆಳೆ ದರ್ಶಕ’ ಮೊಬೈಲ್ ಆ್ಯಪ್ ಮೂಲಕ ಆಕ್ಷೇಪಣೆ ಸಲ್ಲಿಸಬಹುದು.
ತಾವು ಬೆಳೆದ ಬೆಳೆ ಹಾಗೂ ಬೆಳೆ ಸಮೀಕ್ಷೆಯಲ್ಲಿ ದಾಖಲಾದ ಬೆಳೆಯು ಒಂದೇ ಇರುವ ಕುರಿತು ಬೆಳೆ ದರ್ಶಕ ಮೊಬೈಲ್ ಆ್ಯಪ್ ಮೂಲಕ ಖಾತರಿ ಪಡಿಸಿಕೊಳ್ಳ ಬೇಕು. ಒಂದು ವೇಳೆ ಭಿನ್ನವಾಗಿದ್ದಲ್ಲಿ, ಆಕ್ಷೇಪಣೆಗಳನ್ನು ನಿಗದಿತ ಕಾಲಾವಧಿಯಲ್ಲಿ ಸಲ್ಲಿಸಬಹುದು
ರೈತರು ಮತ್ತಿತರ ಹೆಚ್ಚಿನ ಮಾಹಿತಿಗಾಗಿ ರೈತರು ಕೃಷಿ ಇಲಾಖೆ, ಕಂದಾಯ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದು.
Share your comments