1. ಸುದ್ದಿಗಳು

ಮೊಬೈಲಿನಲ್ಲಿ ಬೆಳೆಹಾನಿ ಪರಿಹಾರ ಹಣ ಜಮೆಯಾಗಿದ್ದನ್ನು ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಕಳೆದ ವರ್ಷ ಸುರಿದ ಮಳೆಯಿಂದಾಗಿ ರಾಜ್ಯದಲ್ಲಿ ಅಪಾರ ಬೆಳೆಹಾನಿಯಾಗಿತ್ತು. ಲಕ್ಷಾಂತರ ಎಕರೆ ಬೆಳೆ ಮಳೆಯಲ್ಲಿ ಕೊಚ್ಚಿಕೊಂಡು ಹೋಗಿತ್ತು. ಅತೀವೃಷ್ಟಿಯಿಂದ ಬೆಳೆ ಕಳೆದುಕೊಂಡ ರೈತರಿಗೆ ಈಗಾಗಲೇ ಆರು ಹಂತಗಳಲ್ಲಿ ಜಿಲ್ಲಾವಾರು ಹಣ ಬಿಡುಗಡೆ ಮಾಡುತ್ತಿದೆ.

ಕಳೆದ ವಾರ ಕಲಬುರಗಿ ಜಿಲ್ಲೆಯ ರೈತರಿಗೆ ಉಳಿದ ರೈತರ ಖಾತೆಗೆ ಹಣ ಜಮೆಯಾಗಿತ್ತು. ಈ ವಾರ ಬೀದರ್ ಜಿಲ್ಲೆಯ ಉಳಿದ ರೈತರ ಖಾತೆಗೆ ಹಣ ಜಮೆ ಮಾಡಲಾಗುವುದು ಎಂದು ಬೀದರ್ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯಾದ್ಯಂತ ಈಗಾಗಲೇ ಆರು ಹಂತಗಳಲ್ಲಿ  ರೈತರ ಖಾತೆಗೆ ಹಣ ಜಮೆ ಮಾಡಲಾಗಿದೆ. ಇತ್ತೀಚೆಗೆ 7ನೇ ಕಂತಿನ ಹಣವೂ ಬೆಳೆಹಾನಿಯಾದ ರೈತರ ಖಾತೆಗೆ ಜಮೆ ಮಾಡಲಾಗಿದೆ. ಈ ಹಣ ಜಮೆಯಾಗಿದನ್ನು ಮನೆಯಲ್ಲಿಯೇ ಕುಳಿತು ನಿಮ್ಮ ಮೊಬೈಲ್ ನಲ್ಲಿಯೇ ನೋಡಬಹುದು. …ಇಲ್ಲಿದೆ ಮಾಹಿತಿ

ಅತೀವೃಷ್ಟಿಯಿಂದ ಹಾನಿಗೊಳಗಾದ ರೈತರ ಖಾತೆಗೆ ಬೆಳೆ ಪರಿಹಾರ ಹಣ ಜಮೆಯಾಗಿದ್ದನ್ನು ನೋಡಲು  https://landrecords.karnataka.gov.in/PariharaPayment/ ಈ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಇಲ್ಲಿ ಆಧಾರ್ ಸಂಖ್ಯೆ ಆಯ್ಕೆ ಮಾಡಬೇಕು. ನಂತರ  Select Calamity type ನಲ್ಲಿ  ಫ್ಲಡ್ ಆಯ್ಕೆ ಮಾಡಿಕೊಳ್ಳಬೇಕು. ನಂತರ 2020-21 ವರ್ಷ ಆಯ್ಕೆ ಮಾಡಿಕೊಳ್ಳಬೇಕು.. ಕೆಳಗಡಿ ಆಧಾರ್ ಸಂಖ್ಯೆ ನಮೂದಿಸಿ ಕ್ಯಾಪ್ಚಾ ಕೋಡ್ ಎಂಟರ್ ಮಾಡಿದ ನಂತರ ಫೆಟ್ಚ್ ಡಿಟೇಲ್ಸ್ ಮೇಲೆ ಕ್ಲಿಕ್ ಮಾಡಬೇಕು.

ಆಗ ನಿಮ್ಮ ಜಿಲ್ಲೆ, ಬ್ಯಾಂಕಿನ ಹೆಸರು, ನಿಮ್ಮ ಹೆಸರು, ಬ್ಯಾಂಕ್ ಅಕೌಂಟ್ ನಂಬರ್, ಹಣ ಸಂದಾಯವಾದ ಸ್ಥಿತಿಗತಿ, ಯಾವುದರಿಂದ ಹಣ ಬಂದಿದೆ ಉದಾಹರಣೆಗೆ ಫ್ಲಡ್ (ಅತೀವೃಷ್ಟಿ) ಸಂದಾಯವಾದ ಕಾಲ (ಖಾರಿಪ್ ಅಥವಾ ರಬ್ಬಿ)  ಮತ್ತು ಯಾವ ವರ್ಷ ಹಣ ಬಂದಿದೆ ಎಂಬ ವರದಿ ಓಪನ್ ಆಗುತ್ತದೆ. ಇದೇ ರೀತಿ ನೀವು ಕಳೆದ ನಾಲ್ಕೈದು ವರ್ಷದ ರಿಪೋರ್ಟ್ ಸಹ ನೋಡಬಹುದು.

Published On: 23 March 2021, 09:03 AM English Summary: Crop Damage Compensation amount deposited to farmers account

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.