ರಾಜ್ಯದಲ್ಲಿ ಸೋಂಕಿನ ಪ್ರಮಾಣ ಕೊಂಚ ಇಳಿಕೆ ಕಂಡಿದ್ದು ಇಂದು 35297 ಮಂದಿಗೆ ಹೊಸ ಸೋಂಕು ತಗುಲಿದೆ. ಸಾವಿನ ಸಂಖ್ಯೆಯಲ್ಲಿ ಕಡಿಮೆಯತ್ತ ಸಾಗಿದ್ದು ಇಂದು 344 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಇಂದು 34,057 ಜನರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇದರೊಂದಿಗೆ ಒಟ್ಟು ಸೋಂಕಿತರ ಪ್ರಕರಣ ಸಂಖ್ಯೆ 1474678 ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ 593078 ಸಕ್ರಿಯ ಪ್ರಕರಣಗಳಿವೆ. ಮೃತರ ಸಂಖ್ಯೆ ಒಟ್ಟು 20712 ಏರಿದೆ. 2088488 ಖಚಿತ ಪ್ರಕರಣಗಳಿವೆ ಎಂದು ಮಾಹಿತಿ ನೀಡಿದೆ.
ಬೆಂಗಳೂರಿನಲ್ಲಿ ಸಾವಿನ ಸಂಖ್ಯೆಯು ಕಡಿಮೆಯಾಗಿದೆ. ಇಂದು 161 ಮಂದಿ ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ 9125 ಕ್ಕೆ ಏರಿಕೆಯಾಗಿದ್ದು, ಇಂದು 16084 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇಂದು 15191 ಹೊಸ ಸೋಂಕಿನ ಪ್ರಕರಣಗಳು ದಾಖಲಾಗಿವೆ. ಒಟ್ಟು ಸೋಂಕಿತರ ಸಂಖ್ಯೆ 1014996 ಏರಿಕೆಯಾಗಿದೆ ಎಂದು ಮಾಹಿತಿ ನೀಡಿದೆ.
ರಾಜ್ಯದ ಜಿಲ್ಲೆಗಳಲ್ಲಿ ಸೋಂಕಿನ ವಿವರ ಹೀಗಿದೆ:
ಬಾಗಲಕೋಟೆ 520, ಬಳ್ಳಾರಿ 1865, ಬೆಳಗಾವಿ 713, ಬೆಂಗಳೂರು ಗ್ರಾಮಾಂತರ 1079, ಬೆಂಗಳೂರು ನಗರ 15119, ಬೀದರ್ 257, ಚಾಮರಾಜನಗರ 842, ಚಿಕ್ಕಬಳ್ಳಾಪುರ 354, ಚಿಕ್ಕಮಗಳೂರು 445, ಚಿತ್ರದುರ್ಗ 292, ದಕ್ಷಿಣ ಕನ್ನಡ 812, ದಾವಣಗೆರೆ 494, ಧಾರವಾಡ 737, ಗದಗ 430, ಹಾಸನ 792, ಹಾವೇರಿ 160, ಕಲಬುರಗಿ 497, ಕೊಡಗು 425, ಕೋಲಾರ 488, ಸಕ್ಪ್ಪರಿಳ 437, ಮಂಡ್ಯ 1153, ಮೈಸೂರು 1260, ರಾಯಚೂರು 170, ರಾಮನಗರ 518, ಶಿವಮೊಗ್ಗ 880, ತುಮಕೂರು 1798, ಉಡುಪಿ 891, ಉತ್ತರ ಕನ್ನಡ 792, ವಿಜಯಪುರ 331 ಮತ್ತು ಯಾದಗಿರಿಯಲ್ಲಿ 675 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.
ಗುರುವಾರ ಕೇವಲ 68,658 ಡೋಸ್ ಲಸಿಕೆಯನ್ನಷ್ಟೆ ನೀಡಲಾಗಿದೆ. ನೀಡಲಾದ ಲಸಿಕೆಗಳ ಸಂಖ್ಯೆ ಒಂದು ದಿನ ಏರಿಕೆಯಾಗಿ, ಇನ್ನೊಂದು ದಿನ ಇಳಿಕೆಯಾಗುತ್ತಾ ಸಾಗಿದ್ದು, ಇದು ಕೊನೆ ಮುಟ್ಟುವ ಲಕ್ಷಣಗಳು ಕಾಣುತ್ತಿಲ್ಲ. ಇಲ್ಲಿಯವರೆಗೆ ರಾಜ್ಯದಲ್ಲಿ 1,09,76,189 ಡೋಸ್ ಲಸಿಕೆ ನೀಡಲಾಗಿದೆ.
Share your comments