1. ಸುದ್ದಿಗಳು

ರಾಜ್ಯಾದ್ಯಂತ ಇಂದಿನಂದ ರಾತ್ರಿ ಕರ್ಫ್ಯೂ ಜಾರಿ- ಇಂದಿನಿಂದ ಕಠಿಣ ನಿಯಮ ಜಾರಿ

Night curfew

ಕೊರೋನಾ ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ರಾತ್ರಿ 9 ಗಂಟೆಯಿಂದ ಮೇ.4 ರ ಬೆಳಗ್ಗೆ 6 ಗಂಟೆಯ ತನಕ‌ ರಾತ್ರಿ ಕರ್ಪ್ಯೂ ಮತ್ತಷ್ಟು ಕಠಿಣ ನಿಯಮ ಜಾರಿ ಮಾಡಿ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಲಾಕ್ಡೌನ್ ಬದಲಾಗಿ ರಾತ್ರಿ ಕರ್ಫ್ಯೂ ಹಾಗೂ ವಾರಾಂತ್ಯದ ಕರ್ಫ್ಯೂ ತಂತ್ರಕ್ಕೆ ಮೊರೆಹೋಗಿದೆ.

ಮಂಗಳವಾರ ರಾಜ್ಯಪಾಲ ವಜುಭಾಯಿ ವಾಲಾರವರ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷಗಳ ಸಭೆಯಬಳಿಕ  ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚನೆ ಮೇರೆಗೆ ರಾಜ್ಯ ಸರ್ಕಾರ ಏಪ್ರೀಲ್ 21 ರಿಂದ ಮೇ 4 ರವರೆಗೆ ಹದಿನೈದು ದಿನಗಳ ಕಾಲ ರಾಜ್ಯಾದ್ಯಂತ ರಾತ್ರಿ ಕರ್ಫ್ಯೂ ಹಾಗೂ ವಾರಾಂತ್ಯದ ಕರ್ಫ್ಯೂ ಜಾರಿಮಾಡಲು ನಿರ್ಧರಿಸಿದೆ.

ಅಗತ್ಯ ಸೇವೆಗಳನ್ನು ಹೊರತುಪಡಿಸಿ ಇನ್ನುಳಿದ ವೈಯಕ್ತಿಕವಾಗಿ ಸೇರಿದಂತೆ ಎಲ್ಲಾ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಿ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ರಾತ್ರಿ ಕರ್ಪ್ಯೂ ಜೊತೆಗೆ ವೀಕೇಂಡ್ ಕರ್ಪ್ಯೂ ನಿಯಮ ಕಠಿಣ ಮಾಡಿ ಸರ್ಕಾರ ಮಾರ್ಗ ಸೂಚಿ ಪ್ರಕಟಿಸಿದೆ.

ಶಾಲೆ-ಕಾಲೇಜು ತರಬೇತಿ ಸಂಸ್ಥೆಗಳು,ಶಿಕ್ಷಣ ಸಂಸ್ಥೆಗಳನ್ನು ಮುಚ್ಚುವಂತೆ ಆದೇಶಿಸಲಾಗಿದೆ ಆನ್ ಲೈನ್ ತರಗತಿಗಳು ಮತ್ತು ದೂರಶಿಕ್ಷಣ ತರಗತಿಗಳು ಎಂದಿನಂತೆ ಮುಂದುವರಿಯಲು ಅವಕಾಶ ಮಾಡಿಕೊಡಲಾಗಿದೆ‌. ಚಿತ್ರಮಂದಿರ , ಶಾಪಿಂಗ್ ಮಾಲ್, ವ್ಯಾಯಾಮ‌ಶಾಲೆ, ಯೋಗ ಕೇಂದ್ರಗಳು,ಸ್ಪಾ,ಕ್ರೀಡಾ ಸಂಕೀರ್ಣ, ಈಜುಕೊಳ ಮನರಂಜನಾ ಪಾರ್ಕ್ ಮತ್ತು ಮಲ್ಟಿಪ್ಲೆಕ್ಸ್ ಸಂಪೂರ್ಣವಾಗಿ ಮಚ್ಚುವಂತೆ ಸೂಚಿಸಲಾಗಿದೆ.

ಎಲ್ಲ ರಾಜಕೀಯ ಧಾರ್ಮಿಕ ಮನರಂಜನಾತ್ಮಕ ಸಭೆ-ಸಮಾರಂಭಗಳನ್ನು ಕಟ್ಟುನಿಟ್ಟಾಗಿ ನಿಷೇಧ ಹೇರಲಾಗಿದೆ. ರೆಸ್ಟೋರೆಂಟ್ ಗಳು ಮತ್ತು ಹೋಟೆಲ್ ನಲ್ಲಿ ಮನೆಗೆ ಪಾರ್ಸೆಲ್ ಕೊಡಲು ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಏಪ್ರಿಲ್ 23ರ ಬಳಿಕ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇರುವ ಪ್ರಮುಖ ಮಾರುಕಟ್ಟೆಗಳನ್ನು ವಿಶಾಲ ಪ್ರದೇಶಕ್ಕೆ ಸ್ಥಳಾಂತರ ಮಾಡುವುದಾಗಿ ಅವರು ತಿಳಿಸಿದ್ದಾರೆ. ಮಧ್ಯದಂಗಡಿಗೆ ಹೋಟೆಲ್ ರೆಸ್ಟೋರೆಂಟ್ ಗಳಲ್ಲಿ ಮನೆಗೆ ತೆಗೆದುಕೊಂಡು ಹೋಗಲು ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಕೋರೋನಾ ಸೋಂಕಿನ ನಡುವೆ ಹಲವು ನಿರ್ಬಂಧಗಳನ್ನು ಸರ್ಕಾರ ಜಾರಿಗೊಳಿಸಿದ್ದರೂ‌ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಅನುಮತಿ ನೀಡಿದೆ. ಜೊತೆಗ ಕೃಷಿ ಚಟುವಟಿಕೆಗಳಿಗೂ ಅವಕಾಶ ಮಾಡಿಕೊಡಲಾಗಿದೆ. ಕೋಲ್ಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಈ ಚಟುವಟಿಕೆಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಮಾರ್ಗಸೂಚಿ ಯಲ್ಲಿ ಅನುವು ಮಾಡಿಕೊಟ್ಟಿದೆ.

ರಾಜ್ಯದಲ್ಲಿ ಪಡಿತರ ಅಂಗಡಿಗಳನ್ನು ತೆರೆಯಲು ಸರ್ಕಾರ ಅವಕಾಶ ಮಾಡಿಕೊಡಲಾಗಿದೆ ಇದರ ಜೊತೆಗೆ ಹಣ್ಣಿನ ಅಂಗಡಿ , ತರಕಾರಿ ಹಾಲು, ನೀರು ಜಾನುವಾರುಗಳ ಮೇವು ಸೇರಿದಂತೆ ಇನ್ನಿತರ ಅಗತ್ಯ ಕೆಲಸಗಳಿಗೆ ಅವಕಾಶ ಮಾಡಿಕೊಡಲಾಗಿದೆ.

ಯಾವುದಕ್ಕೆಲ್ಲಾ ಅವಕಾಶ:

ಅಗತ್ಯ ಸೇವೆಗಳಿಗೆ ಅವಕಾಶ,

ಬ್ಯಾಂಕುಗಳು ವಿಮಾ ಕಂಪನಿಗಳು ಕಾರ್ಯನಿರ್ವಹಣೆ

ಕೈಗಾರಿಕೆಗಳು ಮತ್ತು ಉತ್ಪಾದನಾ ವಲಯಗಳು ಎಂದಿನಂತೆ ಕಾರ್ಯನಿರ್ವಹಣೆ ಸಿಬ್ಬಂದಿಗಳು ಗುರುತಿನ ಚೀಟಿ ತೋರಿಸಿ ಸಂಚಾರಕ್ಕೆ ಅನುವು

ಮಾಧ್ಯಮಗಳಿಗೆ ಅವಕಾಶ

ಹಣ್ಣು ತರಕಾರಿ ಸೇರಿದಂತೆ ಇನ್ನಿತರ ಅಗತ್ಯ ಸೇವೆಗಳ ಅವಕಾಶ

ಯಾವುದಕ್ಕೆ ನಿರ್ಭಂಧ:

ಶಾಲಾ ಕಾಲೇಜು ಬಂದ್

ಏಪ್ರಿಲ್ 23ರಿಂದ ಮಾರುಕಟ್ಟೆಗಳು ಸ್ಥಳಾಂತರ

ಈಜುಕೊಳ ವ್ಯಾಯಾಮ ಶಾಲೆ, ಸ್ಪಾ ಬಂದ್,

ಚಿತ್ರಮಂದಿರ ಮಲ್ಟಿಪ್ಲೆಕ್ಸ್ ಗಳು ಕೂಡ ಬಂದ್.

ಹೋಟೆಲ್ ಮತ್ತು ಬಾರ್ಗಳಲ್ಲಿ ಮನೆಗೆ ತೆಗೆದುಕೊಂಡು ಹೋಗಲು ಅವಕಾಶ

Published On: 21 April 2021, 10:46 AM English Summary: covid-19 effect tuff rules in Karnataka full details

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.