1. ಸುದ್ದಿಗಳು

ವಿಶ್ವಾದ್ಯಂತ 1.42 ಕೋಟಿ ಜನರಿಗೆ ಕೊರೋನಾ- 6.05 ಲಕ್ಷ ಜನ ಸಾವು

covid-19

ದೇಶದಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ತೀವ್ರಗತಿಯಲ್ಲಿ ಏರುತ್ತಿದೆ. ನಿಯಂತ್ರಣಕ್ಕೆ ಬರುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಸೋಂಕಿನ ನಡುವೆ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿದ್ದರಿಂದ ಇಡೀ ದೇಶ ಕೊರೋನಾ ಸೋಂಕಿಗೆ ತತ್ತರಿಸಿದೆ.

ಜನತೆ ಮನೆಬಿಟ್ಟು ಹೊರಬರದೆ ಭಯದಲ್ಲಿಯೇ ಬದುಕುವುಂತಾಗಿದೆ.

ಕಳೆದ ಒಂದು ವಾರದಿಂದ ಪ್ರತಿ ದಿನ 30 ಸಾವಿರಕ್ಕೂ ಹೆಚ್ಚುಜನರಿಗೆ ಕೊರೋನಾ ಸೋಂಕು ತಗುಲುತಿತ್ತಿದ್ದು. ಆದರೆ ಭಾನುವಾರ ಒಂದೇ ದಿನ 40243 ಜನರಿಗೆ ಕೋರೋನಾ ಪಾಸಿಟಿವ್ ಬಂದಿದೆ. ಇದರಿಂದಾಗಿ ಜುಲೈ 19 ರ ಮಧ್ಯರಾತ್ರಿಯವರೆಗೆ ದೇಶದಲ್ಲಿ 11,18,107 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. 3,89,803 ಜನರು ಕೊರೋನಾ ಸೋಂಕಿನಿಂದಾಗಿ ಗುಣಮಖರಾಗಿದ್ದಾರೆ. 27503 ಜನ ಪ್ರಾಣ ಕಳೆದುಕೊಂಡಿದ್ದಾರೆ.

ವಿಶ್ವಾದ್ಯಂತ (world) 1.42 ಕೋಟಿ ಜನರಿಗೆ ಕೊರೋನಾ- 6.05 ಲಕ್ಷ ಜನ ಸಾವು

ಜಗತ್ತಿನಾದ್ಯಂತ ಸೋಂಕಿನಿಂದ ಅಸುನೀಗಿದವರ ಸಂಖ್ಯೆ 6 ಲಕ್ಷ ದಾಟಿದೆ(Global death toll crosses 6 lakh) . ಅಮೆರಿಕ, ದಕ್ಷಿಣ ಆಫ್ರಿಕಾ, ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಸೋಂಕಿನ ಮತ್ತು ಸಾವಿನ ಸಂಖ್ಯೆ ಏರುಗತಿಯಲ್ಲಿದೆ. 1.42 ಕೋಟಿಗೂ ಹೆಚ್ಚು ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.

ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಕೊರೋನಾ ವೈರಸ್ ರಿಸೋರ್ಸ್ ಸೆಂಟರ್ ಮಾಹಿತಿ ಪ್ರಕಾರ ಜಗತ್ತಿನಾದ್ಯಂತ ಇಲ್ಲಿಯವರೆಗೆ 14,448,751 ಜನರಿಗೆ ಕೊರೋನಾ ಸೋಂಕು (14 million Covid-19 cases worldwide ) ದೃಢಪಟ್ಟಿದೆ. 6,05,116 ಜನ ಪ್ರಾಣ ಕಳೆದುಕೊಂಡಿದ್ದಾರೆ.

ಅಮೇರಿಕಾ ಮೊದಲನೇ ಸ್ಥಾನದಲ್ಲಿದ್ದು 37,68,055  ಸೋಂಕಿತರು, 1,40,500 ಜನ ಮೃತಪಟ್ಟಿದ್ದಾರೆ. ಬ್ರೆಜಿಲ್ ಎರಡನೇ ಸ್ಥಾನದಲ್ಲಿದ್ದು 20,98,389 ಜನ ಸೋಂಕಿತರು, 79,488 ಜನ ಮೃತಪಟ್ಟಿದ್ದಾರೆ.

ಭಾರತದಲ್ಲಿ 11 ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು:

ಕೊರೋನಾ ಸೋಂಕಿತರಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. 11,18,107 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. 3,89,803 ಜನರು ಕೊರೋನಾ ಸೋಂಕಿನಿಂದಾಗಿ ಗುಣಮಖರಾಗಿದ್ದಾರೆ. 27503 ಜನ ಪ್ರಾಣ ಕಳೆದುಕೊಂಡಿದ್ದಾರೆ.

ಭಾರತದಲ್ಲಿ ಮಹಾರಾಷ್ಟ್ರದಲ್ಲಿ 310455 ಜನರಿಗೆ ಸೋಂಕು, 11854 ಜನಪ್ರಾಣ ಕಳೆದುಕೊಂಡಿದ್ದಾರೆ. ಅದೇ ರೀತಿ ದ್ವಿತೀಯ ಸ್ಥಾನದಲ್ಲಿರುವ ತಮಿಳುನಾಡಿನಲ್ಲಿ 170693 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. 2481 ಜನ ಮೃತಪಟ್ಟಿದ್ದಾರೆ. ಮೂರನೇ ಸ್ಥಾನದಲ್ಲಿರುವ ದೆಹಲಿಯಲ್ಲಿ 122793 ಕೊರೋನಾ ಸೋಂಕು ದೃಢಪಟ್ಟಿದೆ. 3628 ಜನರು ಸಾವನ್ನಪ್ಪಿದ್ದಾರೆ.

ನಾಲ್ಕನೇ ಸ್ಥಾನದಲ್ಲಿರುವ ಕರ್ನಾಟಕದಲ್ಲಿ 63772 ಜನರಿಗೆ ಸೋಂಕು, 1336 ಜನ ಮೃತಪಟ್ಟಿದ್ದಾರೆ. ಆಂಧ್ರಪ್ರದೇಶದಲ್ಲಿ 49650 ಜನರಿಗೆ ಕೊರೋನಾ ಸೋಂಕು ತಗುಲಿದೆ. 642 ಜನ ಮೃತಪಟ್ಟಿದ್ದಾರೆ.

Published On: 20 July 2020, 11:12 AM English Summary: Coronavirus : Global death toll crosses 6 lakh, now over 14 million Covid-19 cases worldwide

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.