ಕೊರೋನಾ ಸೋಂಕು ತಡೆಯಲು ಸಮರ್ಪಕ ಹೋರಾಟ ನಡೆಯುತ್ತಿದ್ದರೂ ಸಹ ಭಾರತದಲ್ಲಿ ನಿಯಂತ್ರಣವಾಗುವ ಲಕ್ಷಣಗಳು ಕಾಣುತ್ತಿಲ್ಲ. ಪ್ರತಿದಿನ 6 ಸಾವಿರಕ್ಕೂ ಹೆಚ್ಚು ಜನರು ಸೋಂಕಿತರಾಗುತ್ತಿದ್ದಾರೆ. ಕೇವಲ ಭಾರತವಷ್ಟೇ ಅಲ್ಲ, ಜಗತ್ತಿನಾದ್ಯಂತ ಕೊರೋನಾ ತನ್ನ ಅಟ್ಟಹಾಸ ಮುಂದುವರೆಸಿದೆ. ವಿಶ್ವದ 214 ದೇಶಗಳಿಗೂ ಹಬ್ಬಿದ ಈ ಸೋಂಕು ಜಗತ್ತಿನೆಲ್ಲೆಡೆ ತನ್ನ ರಕ್ಕಸ ಸ್ವರೂಪ ತಾಳಿದೆ. ಮೇ 26 ರವರೆಗೆ ಜಗತ್ತಿನಲ್ಲಿ 55.5 ಲಕ್ಷಕ್ಕಿಂತಲೂ ಹೆಚ್ಚು ಸೋಂಕಿತರು ಹಾಗೂ 3.50 ಲಕ್ಷಕ್ಕಿಂತಲೂ ಹೆಚ್ಚು ಜನ ಸೋಂಕಿಗೆ ಬಲಿಯಾಗಿದ್ದಾರೆ.
ಎರಡು ತಿಂಗಳ ಹಿಂದೆ 50ನೇ ಸ್ಥಾನದಲ್ಲಿದ್ದ ಬಾರತ ಈಗ ಇರಾನ್ ದೇಶವನ್ನು ಹಿಂದಿಕ್ಕಿ 10ನೇ ಸ್ಥಾನಕ್ಕೆ ತಲುಪಿದೆ. ಕೇವಲ 25 ದಿನಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಜನರು ಸೋಂಕಿತರಾಗಿದ್ದಾರೆ. ಇದೇ ವೇಗದಲ್ಲಿ ಸಾಗಿದರೆ ಮುಂದಿನ ವಾರದಲ್ಲಿ 7ನೇ ಸ್ಥಾನಕ್ಕೆ ತಲುಪುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.
ಯಾವ ದೇಶದಲ್ಲಿ ಎಷ್ಟು ಜನ ಸೋಂಕಿತರಿದ್ದಾರೆ ಇಲ್ಲಿದೆ ಮಾಹಿತಿ:
1. ಅಮೇರಿಕಾ 17 ಲಕ್ಷ ಸೋಂಕಿತರು 1 ಲಕ್ಷಕ್ಕೂ ಹೆಚ್ಚು ಸಾವು
2. ಬ್ರೇಜಿಲ್ 3.76 ಲಕ್ಷ ಸೋಂಕಿತರು 22,800ಕ್ಕೂ ಹೆಚ್ಚು ಸಾವು
3. ರಷ್ಯಾ 3.62 ಲಕ್ಷ ಸೋಂಕಿತರು 3700 ಕ್ಕೂ ಹೆಚ್ಚು ಸಾವು
4. ಸ್ಪೇನ್ 2.82 ಲಕ್ಷ ಸೋಕಿತರು 28800 ಕ್ಕೂ ಹೆಚ್ಚು ಸಾವು
5. ಬ್ರಿಟೆನ್ 2.61 ಲಕ್ಷ ಸೋಂಕಿತರು 36800 ಕ್ಕೂ ಹೆಚ್ಚು ಸಾವು
6. ಇಟಲಿ 2.30 ಲಕ್ಕ ಸೋಂಕಿತರು 32700 ಕ್ಕೂ ಹೆಚ್ಚು ಸಾವು
7. ಫ್ರಾನ್ಸ್ 1.83 ಲಕ್ಷ ಸೋಂಕಿತರು 28,400 ಕ್ಕೂ ಹೆಚ್ಚು ಸಾವು
8. ಜರ್ಮನಿ 1.80 ಲಕ್ಷ ಸೋಂಕಿತರು 8390 ಕ್ಕೂ ಹೆಚ್ಚು ಸಾವು
9. ಟರ್ಕಿ 1.57 ಲಕ್ಷ ಸೋಂಕಿತರು 4340 ಕ್ಕೂ ಹೆಚ್ಚು ಸಾವು
10. ಭಾರತ 1.50 ಲಕ್ಷಕ್ಕೂ ಹೆಚ್ಚು ಸೋಂಕಿತರು 4200 ಗಿಂತ ಹೆಚ್ಚು ಸಾವು
ಮಹಾರಾಷ್ಟ್ರದಲ್ಲಿ 54 ಸಾವಿರಕ್ಕೂ ಹೆಚ್ಚು ಜನ ಸೋಂಕಿತರು:
ಭಾರತದಲ್ಲಿ ಮಹಾರಾಷ್ಟ್ರವೂ ಕೊರೋನಾ ಸೋಂಕಿತರ ಪಟ್ಟಿಯಲ್ಲಿ ಟಾಪ್ ಸ್ಥಾನದಲ್ಲಿದೆ. ನಂತರ ತಮಿಳುನಾಡು ಗುಜರಾತ್ ರಾಜ್ಯಗಳಿವೆ. ಮೇ 26ರವರೆಗೆ ಕೊರೋನಾ ಸೋಂಕಿತರ ಸಂಖ್ಯೆ ಈ ಕೆಳಗಿನಂತಿತ್ತು.
ಮಹಾರಾಷ್ಟ್ರ 54,758, ತಮಿಳುನಾಡು 17,728, ಗುಜರಾತ 14,739, ದೆಹಲಿ 14,465,ರಾಜಸ್ಥಾನ 7476, ಮಧ್ಯಪ್ರದೇಶ 7024, ಉತ್ತರಪ್ರದೇಶ 6600, ಪಶ್ಚಿಮಬಂಗಾಳ 4009, ಆಂಧ್ರಪ್ರದೇಶ 2983, ಬಿಹಾರ 2870, ಕರ್ನಾಟಕ 2283 ಸೋಂಕಿತರಿರುವ ಟಾಪ್ ರಾಜ್ಯಗಳಾಗಿವೆ. ಕರ್ನಾಟಕದಲ್ಲಿ ಕೊರೋನಾ ತನ್ನ ಅಟ್ಟಹಾಸ ಮುಂದುವರೆಸಿದೆ. ಪ್ರತಿದಿನ 100ಕ್ಕೂ ಹೆಚ್ಚು ಸೋಂಕಿತರಾಗುತ್ತಿದ್ದಾರೆ. ಮುಂಬೈದಿಂದ ಬಂದ ವಲಸೆ ಕಾರ್ಮಿಕರಿಂದ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿಯೂ ಕೊರೋನಾ ತನ್ನ ಅಟ್ಟಹಾಸ ಮುಂದುವರೆಸಿದೆ.
ಕೊರೋನಾ ಸೋಂಕಿತರ ಕ್ಷಣ ಕ್ಷಣದ ಮಾಹಿತಿ ಬೇಕೇ ಈ ಲಿಂಕ್ ಒತ್ತಿ. https://www.covid19india.org/ಎಲ್ಲಾ ಮಾಹಿತಿ ಕ್ಷಣಾರ್ಧದಲ್ಲಿ ಪಡೆಯುವಿರಿ. ಪ್ರತಿನಿತ್ಯ ಇಲ್ಲಿ ಅಪ್ಡೆಟ್ ಮಾಡಲಾಗಿರುತ್ತದೆ. ಯಾವುದೇ ಸಮಯದಲ್ಲಿ ಕ್ಲಿಕ್ ಮಾಡಿದರೂ ಯಾವ ರಾಜ್ಯದಲ್ಲಿ ಎಷ್ಟು ಜನ ಕೊರೋನಾಗೆ ಸೋಂಕಿತರಾಗಿದ್ದಾರೆ. ಎಷ್ಟು ಜನ ಗುಣಮುಖರಾಗಿದ್ದಾರೆ ಹಾಗೂ ಎಷ್ಟು ಜನ ಬಲಿಯಾಗಿದ್ದಾರೆ ಎಂಬ ಮಾಹಿತಿ ಸಿಗುತ್ತದೆ.
Share your comments