1. ಸುದ್ದಿಗಳು

5 Guarantees ಕಾಂಗ್ರೆಸ್‌ 5 ಗ್ಯಾರಂಟಿ; ಸರಣಿ ಸಭೆ

Hitesh
Hitesh
Congress 5 guarantees; Series meeting

ಇಂದಿನ ಪ್ರಮುಖ ಹಾಗೂ ಸಂಕ್ಷಿಪ್ತ ಸುದ್ದಿಗಳ ವಿವರ ಇಲ್ಲಿದೆ.

DA Hike ಸರ್ಕಾರಿ ನೌಕರರಿಗೆ ಬಂಪರ್‌ ಗಿಫ್ಟ್‌; ತುಟ್ಟಿ ಭತ್ಯೆ ಭರ್ಜರಿ ಹೆಚ್ಚಳ!

  • ಜಿ-20: ಗೋವಾದಲ್ಲಿ ಮಹತ್ವದ ಸ್ಟಾರ್ಟ್‌ಅಪ್ ಸಭೆ
  • ಕಾಂಗ್ರೆಸ್‌ 5 ಗ್ಯಾರಂಟಿ; ಸರಣಿ ಸಭೆ
  • ಇಂದು- ನಾಳೆ ಧಾರಾಕಾರ ಮಳೆ; ಎಚ್ಚರ!
  • ಚೆನ್ನೈ ಸೂಪರ್‌ ಕಿಂಗ್ಸ್‌ ಐದನೇ ಬಾರಿ ಚಾಂಪಿಯನ್ಸ್‌! 

1. ಭಾರತವು ಈ ಬಾರಿ ಜಿ-20 ಅಧ್ಯಕ್ಷತೆಯನ್ನು ವಹಿಸಿದ್ದು, ಭಾರತದಲ್ಲಿ ಹಲವು ಪ್ರಮುಖ ಸಭೆಗಳು ನಡೆಯುತ್ತಿವೆ.

ಇನ್ನು ಭಾರತದ ಜಿ-20 ಅಧ್ಯಕ್ಷತೆ ಅವಧಿಯ ಭಾಗವಾಗಿ ಜೂನ್ 3 ಹಾಗೂ 4 ರಂದು ಗೋವಾದಲ್ಲಿ ಸ್ಟಾರ್ಟ್‌ಅಪ್ ಕಾರ್ಯಪಡೆ

ಗುಂಪಿನ ಮೂರನೇ ಸಭೆ ನಡೆಯಲಿದೆ. ಈ ಸಭೆಯಲ್ಲಿ ಸ್ಟಾರ್ಟ್‌ಅಪ್ ಉದ್ಯಮಿಗಳು ಮತ್ತು ಪ್ರತಿನಿಧಿಗಳೊಂದಿಗೆ ಸಂವಾದ,

ಸ್ಟಾರ್ಟ್‌ಅಪ್ ಉತ್ತೇಜನದ ಸರ್ಕಾರಿ ಉಪಕ್ರಮಗಳು, ಕರಡು ನೀತಿ ಸೇರಿದಂತೆ ಹಲವು ಪ್ರಮುಖ ವಿಷಯಗಳ

ಕುರಿತು ಸುದೀರ್ಘ ಚರ್ಚೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

--------------------------

2. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ, 5 ಪ್ರಮುಖ ಗ್ಯಾರಂಟಿಗಳನ್ನು ಜಾರಿ ಮಾಡುವುದಾಗಿ ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿತ್ತು.

ಇದೀಗ ಈ ವಿಷಯ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಗ್ಯಾರಂಟಿಗಳನ್ನು ಜಾರಿ ಮಾಡುವುದರ ಕುರಿತು ಒತ್ತಡ ಹೆಚ್ಚಾಗುತ್ತಿದ್ದು,

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೇರಿದಂತೆ ವಿವಿಧ ಸಚಿವರು ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಪ್ರಮುಖ "5 ಗ್ಯಾರಂಟಿ"

ಯೋಜನೆಗಳ ಅನುಷ್ಠಾನದ ಕುರಿತು ಮುಖ್ಯಮಂತ್ರಿ Siddaramaiah ಅವರು ಸೋಮವಾರ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದ್ದಾರೆ.

ಇನ್ನು ಮಹಿಳೆಯರಿಗೆ ಉಚಿತ ಬಸ್ ಸಂಚಾರ ಯೋಜನೆ ಜಾರಿ ಸಂಬಂಧ ಮಂಗಳವಾರ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ

ಅವರು ಸಾರಿಗೆ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ.

--------------------------  

3. ರಾಜ್ಯದಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆ ಆಗುತ್ತಿದೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಂಗಳವಾರ ಹಾಗೂ ಬುಧವಾರ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ತಿಳಿಸಿದೆ.

ಇನ್ನು ಮಂಗಳವಾರ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ.

ಒಳನಾಡಿನ ಜಿಲ್ಲೆಗಳಲ್ಲಿ ಗಾಳಿಯ ವೇಗವು 40ರಿಂದ 50 ಕಿ.ಮೀ ಇರಲಿದೆ. ಅಲ್ಲದೇ ಕರಾವಳಿ ಭಾಗದಲ್ಲಿ ಗಾಳಿಯ ವೇಗವು 30ರಿಂದ 40 ಕಿ.ಮೀ ವೇಗದಲ್ಲಿ ಬೀಸಲಿದೆ

ಎಂದು ಮುನ್ಸೂಚನೆ ನೀಡಲಾಗಿದೆ. ಇನ್ನು ಕೊಡಗು, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ

ಇರುವುದರಿಂದ ಈ ಭಾಗದಲ್ಲಿ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ. ಉಳಿದಂತೆ ರಾಜ್ಯದ ಕೆಲವು ಕಡೆಗಳಲ್ಲಿ ಗರಿಷ್ಠ

ಉಷ್ಣಾಂಶವು 2ರಿಂದ 3 ಡಿಗ್ರಿ ಸೆಲ್ಸಿಯಸ್‌ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ತಿಳಿಸಿದೆ.

--------------------------
4. ಈ ಬಾರಿಯ ಐಪಿಎಲ್‌ನ ರೋಚಕ ಹಣಾಹಣಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಚಾಂಪಿಯನ್‌ ಆಗಿದೆ.

ಸೋಮವಾರ ಗುಜರಾತಿನ ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2023ರ ಫೈನಲ್ ಪಂದ್ಯದಲ್ಲಿ ಚೆನ್ನೈ

ಸೂಪರ್‌ ಕಿಂಗ್ಸ್‌ ತಂಡವು ಗುಜರಾತ್ ಟೈಟನ್ಸ್ ವಿರುದ್ಧ 5 ವಿಕೆಟ್‌ಗಳ ಅಮೋಘ ಜಯ ಸಾಧಿಸಿದೆ.

ಐಪಿಎಲ್ 2023ರ ಫೈನಲ್ ಪಂದ್ಯ ದೊಡ್ಡ ರನ್‌ಗಳ ಗುರಿಯನ್ನು ನೀಡುವುದರ ಹೊರತಾಗಿಯೂ ಗುಜರಾತ್ ಟೈಟನ್ಸ್ ತಂಡ ನಿರಾಸೆ ಅನುಭವಿಸಿದೆ.

ಈ ಮೂಲಕ ಐಪಿಎಲ್‌ನಲ್ಲಿ ಐದನೇ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಟ್ರೋಫಿ ಜಯಿಸಿದೆ.
--------------------------- 

DA Hike ಸರ್ಕಾರಿ ನೌಕರರಿಗೆ ಬಂಪರ್‌ ಗಿಫ್ಟ್‌; ತುಟ್ಟಿ ಭತ್ಯೆ ಭರ್ಜರಿ ಹೆಚ್ಚಳ!

Published On: 30 May 2023, 06:09 PM English Summary: Congress 5 guarantees; Series meeting

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.