1. ಸುದ್ದಿಗಳು

ಕೊರೊನಾಗೆ ತತ್ತರಿಸಿದ ಚೀನಾ; 10 ಲಕ್ಷ ಸಾವು ಸಾಧ್ಯತೆ: ವರದಿ

Hitesh
Hitesh
China shaken by Corona; 10 lakh deaths likely: report

ಕೊರೊನಾ ಸೋಂಕಿಗೆ ಮತ್ತೆ ಚೀನಾ ತತ್ತರಿಸಿದ್ದು, 2023ನೇ ಸಾಲಿನಲ್ಲಿ ಅಂದಾಜು 10 ಲಕ್ಷಕ್ಕೂ ಹೆಚ್ಚು ಜನ ಸಾವನ್ನಪ್ಪವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. 2019ರಿಂದ ಚೀನಾದಲ್ಲಿ ಇನ್ನಿಲ್ಲದೆ ಕೊರೊನಾ ಸೋಂಕು ಅಲ್ಲಿನ ಜನರನ್ನು ಕಾಡಿತ್ತು. ಇದೀಗ ಮತ್ತೆ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದು, ಮತ್ತಷ್ಟು ಜನರು ಸಾವನ್ನಪ್ಪುವ ಆತಂಕ ಎದುರಾಗಿದೆ.  

2023ರಲ್ಲಿ ಸುಮಾರು 10 ಲಕ್ಷ ಚೀನಿಯರು ಕೋವಿಡ್‌ನಿಂದ ಮೃತಪಡುವ ಅಂದಾಜಿದೆ ಎಂದು ಅಮೆರಿಕ ಮೂಲದ ಅಧ್ಯಯನ ವರದಿ ಎಚ್ಚರಿಕೆಯನ್ನು ನೀಡಿವೆ.  

ಕೊರೊನಾ ಸೋಂಕಿನ ಪ್ರಕರಣಗಳು ಚೀನಾದ ಉತ್ತರದಿಂದ ದಕ್ಷಿಣಕ್ಕೆ ನಗರ ಕೇಂದ್ರಗಳಿಗೆ ವ್ಯಾಪಕವಾಗಿ ಹೆಚ್ಚಾಗಿವೆ. ಚೀನಾದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನರು ತಮ್ಮನ್ನು ರಕ್ಷಿಸಿಕೊಳ್ಳಲು ಮನೆಯಿಂದ ಹೊರಗಡೆ ಕಾಲಿಡಲಿಲ್ಲ. ಇದರಿಂದ ಶಾಂಘೈ, ಬೀಜಿಂಗ್‌, ಷಿಯಾನ್‌, ಚೆಂಗ್ಡುನಂತಹ ಪ್ರಮುಖ ನಗರಗಳಲ್ಲಿನ ಬೀದಿಗಳು ಬಿಕೋ ಎನ್ನಲು ಪ್ರಾರಂಭಿಸಿವೆ.

ಪ್ರಸಕ್ತ ಚಳಿಗಾಲದ ಮೂರು ತಿಂಗಳು  ಕೋವಿಡ್‌ ಪ್ರಕರಣಗಳ ಮೂರು ಅಲೆ ಎದುರಾಗಲಿದೆ. ದೇಶವು ಪ್ರಸ್ತುತ ಮೊದಲನೇ ಅಲೆ ಎದುರಿಸುತ್ತಿದೆ. ಹೊಸ ವರ್ಷದಲ್ಲಿ ಜನರು ತಮ್ಮ ಕುಟುಂಬಗಳೊಂದಿಗೆ ರಜೆ ಕಳೆಯಲು ಸಾರ್ವಜನಿಕ ಸಾರಿಗೆಗಳ ಮೂಲಕ ಮನೆಗಳಿಗೆ ದೊಡ್ಡ ಸಂಖ್ಯೆಯಲ್ಲಿ ಹಿಂದಿರುಗುವ ಸಾಧ್ಯತೆ ಇರುವುದು ಸಹ ಕೊರೊನಾ ಸೋಂಕು ಹೆಚ್ಚಾಗುವ ಭೀತಿಯನ್ನು ಹೆಚ್ಚಳ ಮಾಡಿದೆ. ಜನದಟ್ಟಣೆಯ ಪ್ರಯಾಣದಿಂದ ಕೋವಿಡ್‌ ಪ್ರಕರಣಗಳು ದ್ವಿಗುಣವಾಗುವ ಸಾಧ್ಯತೆ ಇದೆ.

ದೀರ್ಘ ರಜೆಗಳಿಂದಾಗಿ ಮುಂದಿನ ಜನವರಿ ಅಂತ್ಯದಿಂದ ಫೆಬ್ರುವರಿ ಮಧ್ಯದವರೆಗೆ ನಗರ ಪ್ರದೇಶಗಳಲ್ಲಿ ಭಾರಿ ಸಂಖ್ಯೆಯಲ್ಲಿ ಎರಡನೇ ಅಲೆಯ ಸೋಂಕು ಕಾಡಲಿದೆ.

ಸಿರಿಧಾನ್ಯಗಳಲ್ಲಿ ಅಡಗಿರುವ ಪೌಷ್ಟಿಕತೆ ಮತ್ತು ಉಪಯೋಗ

ದೀರ್ಘ ರಜೆಗಳಿಂದಾಗಿ ಮುಂದಿನ ಜನವರಿ ಅಂತ್ಯದಿಂದ ಫೆಬ್ರುವರಿ ಮಧ್ಯದವರೆಗೆ ನಗರ ಪ್ರದೇಶಗಳಲ್ಲಿ ಭಾರಿ ಸಂಖ್ಯೆಯಲ್ಲಿ ಎರಡನೇ ಅಲೆಯ ಸೋಂಕು ಕಾಡಲಿದೆ. ಫೆಬ್ರುವರಿ ಕೊನೆಯಿಂದ ಮಾರ್ಚ್‌ ಮಧ್ಯದವರೆಗೆ ಮೂರನೇ ಅಲೆಯ ಸೋಂಕು ಎದುರಾಗಲಿದೆ ಎಂದು ಅಂದಾಜಿಸಲಾಗಿದೆ.

China shaken by Corona; 10 lakh deaths likely: report

ಓಮೈಕ್ರಾನ್‌ ರೂಪಾಂತರದಿಂದ ಈಗಾಗಲೇ ಬೀಜಿಂಗ್‌ ನಗರದಲ್ಲಿ ಆಹಾರ ಪಾರ್ಸೆಲ್‌ ಪೂರೈಕೆ ಸೇವೆಗೆ ದೊಡ್ಡ ಹೊಡೆತ ನೀಡಿದೆ. 2.2 ಕೋಟಿ ಜನಸಂಖ್ಯೆ ಇರುವ ಈ ನಗರದಲ್ಲಿ ಅಗತ್ಯ ಸಂಖ್ಯೆಯ ಚಿತಾಗಾರ ಮತ್ತು ಸ್ಮಶಾನ ಸೌಲಭ್ಯ ಕಲ್ಪಿಸಲು ಆಡಳಿತ ಹೆಣಗಾಡುತ್ತಿದೆ.

ಅಮೆರಿಕದ ಸಂಶೋಧನಾ ಸಂಸ್ಥೆಯು ಈ ವಾರ ಚೀನಾದಲ್ಲಿ ಕೋವಿಡ್‌ ಸ್ಫೋಟ ಸಂಭವಿಸಲಿದೆ. 2023ರಲ್ಲಿ ಚೀನದಾದ್ಯಂತ  10 ಲಕ್ಷಕ್ಕೂ ಹೆಚ್ಚು ಜನರು ಸಾವಿಗೀಡಾಗುವ ಸಾಧ್ಯತೆ ಇದೆ ಎಂದು ಹೇಳಿದೆ.  

PM Kisan| ಪಿ.ಎಂ ಕಿಸಾನ್‌ 13ನೇ ಕಂತು: ಹೊಸ ವರ್ಷದ ಮೊದಲು ಬಿಡುಗಡೆ 

Published On: 19 December 2022, 04:03 PM English Summary: China shaken by Corona; 10 lakh deaths likely: report

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.