ಇದೇ ಮೊದಲ ಬಾರಿ ಶಾಸಕರೊಬ್ಬರು (MLA Pradeep Eshwar) ಖಾಸಗಿ ವಾಹಿನಿ ನಡೆಸಿಕೊಡುವ ಬಿಗ್ಬಾಸ್ ರಿಯಾಲಿಟಿ ಶೋನಲ್ಲಿ
ಭಾಗವಹಿಸಿದ್ದು, ಟ್ರೋಲ್ಗೆ ಗುರಿಯಾಗಿದ್ದಾರೆ.
ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ಅವರು ಬಿಗ್ಬಾಸ್ನಲ್ಲಿ ಭಾಗವಹಿಸಿರುವುದಕ್ಕೆ ಪರ- ವಿರೋಧ ವ್ಯಕ್ತವಾಗಿದ್ದು, ಟ್ರೋಲ್ಗಳು ಪ್ರಾರಂಭವಾಗಿವೆ.
ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್ ಈಶ್ವರ್ ಅವರು ಖಾಸಗಿಯ ಬಿಗ್ಬಾಸ್ ರಿಯಾಲಿಟಿ ಶೋನಲ್ಲಿ ಪಾಲ್ಗೊಳ್ಳುತ್ತಿದ್ದು,
ಈ ಮೂಲಕ ಇದೇ ಪ್ರಥಮವಾಗಿ ಜನಪ್ರತಿನಿಧಿಯೊಬ್ಬರು ಬಿಗ್ಬಾಸ್ ಮನೆ ಪ್ರವೇಶಿಸಿದಂತಾಗಿದ್ದು, ರಾಜಕೀಯವಾಗಿಯೂ ಚರ್ಚೆಗೆ ಕಾರಣವಾಗಿದೆ.
ಬರಪೀಡಿತ ಜಿಲ್ಲೆಯ ಗತಿಯೇನು
ಈ ಬಾರಿ ರಾಜ್ಯದಲ್ಲಿ ಮುಂಗಾರು ಮಳೆ ಕೊರತೆ ಇರುವುದು ಎಲ್ಲರಿಗೂ ತಿಳಿದಿರುವ ವಿಷಯ.
ಹೀಗಾಗಿ, ಚಿಕ್ಕಬಳ್ಳಾಪುರವೂ ಬರಪೀಡಿತವಾಗಿದೆ. ಇಲ್ಲಿ ಮಳೆಯಾಗದೆ ಜನ ಹಾಗೂ ರೈತರು ತೀವ್ರ ಸಂಕಷ್ಟದಲ್ಲಿ ಇದ್ದಾರೆ.
ಇಂಥಹ ಸಂದರ್ಭದಲ್ಲಿ ಚಿಕ್ಕಬಳ್ಳಾಪುರದ ಶಾಸಕರು ಬಿಗ್ಬಾಸ್ಗೆ ಹೋದರೆ ಹೇಗೆ ಎಂದು ಜನ ಪ್ರಶ್ನಿಸುತ್ತಿದ್ದಾರೆ.
ಅತಿಥಿಯೋ, ಸ್ಪರ್ಧಿಯೋ ಎನ್ನುವುದೇ ಪ್ರಶ್ನೆ!
ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್ ಈಶ್ವರ್ ಅವರು ಬಿಗ್ಬಾಸ್ನಲ್ಲಿ ಅತಿಥಿಯೋ
ಅಥವಾ ಸ್ಪರ್ಧಿಯೋ ಎನ್ನುವುದೇ ಈಗ ಪ್ರಶ್ನೆಯಾಗಿದೆ.
ಕೆಲವರ ಪ್ರಕಾರ ಬಿಗ್ಬಾಸ್ಗೆ ಪ್ರದೀಪ್ ಈಶ್ವರ್ ಅತಿಥಿಯಾಗಿ ಹೋಗಿದ್ದಾರೆ.
ಹೊರತು ಸ್ಪರ್ಧಿಯಲ್ಲ. ಎರ್ಡೂರು ದಿನದಲ್ಲಿ ಬರ್ತಾರೆ ಎಂದಿದ್ದಾರೆ.
ಟ್ರೋಲ್ಗೆ ಗುರಿಯಾದ ಶಾಸಕ
ಇದೀಗ ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್ ಈಶ್ವರ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟ್ರೋಲ್ಗೆ ಗುರಿಯಾಗಿದ್ದಾರೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಡಾ.ಕೆ.ಸುಧಾಕರ್ ಅವರು, ಜನಪ್ರತಿನಿಧಿ ಬಿಗ್ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿರುವ
ಯಾವುದೇ ಉದಾಹರಣೆ ಎಲ್ಲಿಯೂ ಇಲ್ಲ. ರಾಜ್ಯದ ಜನರಿಗೆ ಇವರು ಆಹಾರವಾಗಿದ್ದಾರೆ.
ಇವರಿಂದ ಚಿಕ್ಕಬಳ್ಳಾಪುರದ ಜನತೆ ನಗೆಪಾಟಲಿಗೆ ಈಡಾಗಿದ್ದೇವೆ ಎಂದಿದ್ದಾರೆ.
ಬಿಜೆಪಿಯಿಂದ ಟೀಕೆ
ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ಬಿಗ್ಬಾಸ್ಗೆ ಹೋಗಿರುವುದಕ್ಕೆ ಬಿಜೆಪಿ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.
ಈ ಸಂಬಂಧ ಸಾಮಾಜಿ ಜಾಲತಾಣದಲ್ಲಿ ಬರೆದುಕೊಂಡಿರುವ ಬಿಜೆಪಿ, "ಬಡ ಜನರನ್ನು ಒಕ್ಕಲೆಬ್ಬಿಸುವ ಸರ್ಕಾರದ ಷಡ್ಯಂತ್ರದ ವಿರುದ್ಧ
ಜನಸ್ಪಂದನೆಯಲ್ಲಿ ನಿರತರಾದ ಬಿಜೆಪಿ ಶಾಸಕರು ಒಂದು ಕಡೆಯಾದರೆ…"
"ಬರ, ಕೋಮುಗಲಭೆ, ಕಾವೇರಿ, ರೈತರ ಆತ್ಮಹತ್ಯೆ, ಆರ್ಥಿಕ ಕುಸಿತಗಳಂತಹ ಜ್ವಲಂತ ಸಮಸ್ಯೆಗಳ ನಡುವೆ ಬಿಗ್ ಬಾಸ್ ಮನೆಯಲ್ಲಿ
ಮನೋರಂಜನೆಯಲ್ಲಿ ತಲ್ಲೀನರಾದ ಕಾಂಗ್ರೆಸ್ ಶಾಸಕರು ಮತ್ತೊಂದು ಕಡೆ…" ಎಂದು ವ್ಯಂಗ್ಯವಾಡಿದೆ.
Share your comments