1. ಸುದ್ದಿಗಳು

Chandrayaan 3: ISRO ಚಂದ್ರಯಾನ ಸಕ್ಸಸ್‌..ಸಾಫ್ಟ್‌ ಲ್ಯಾಂಡಿಂಗ್‌ ಮಾಡಿದ ವಿಕ್ರಂ!

Maltesh
Maltesh
Chandrayaan 3

ಚಂದ್ರಯಾನ 3 ವಿಕ್ರಮ್ ಲ್ಯಾಂಡರ್ ಅಂತಿಮವಾಗಿ  ಪೂರ್ವನಿರ್ಧರಿತ ಸಮಯದಲ್ಲಿ ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್‌ ಲ್ಯಾಂಡಿಂಗ್‌  ಮಾಡಿದೆ.

ಈ ಮೂಲಕ ಕೋಟ್ಯಾಂತರ ಭಾರತೀಯರ ಹರಕೆ, ಹಾರೈಕೆ, ಕನಸುಗಳು ಸಾಕಾರಗೊಂಡಿವೆ. ವಿಕ್ರಂ ಲ್ಯಾಂಡರ್‌ ಚಂದ್ರನ ಮೇಲೆ ಸಾಫ್ಟ್‌ ಲ್ಯಾಂಡಿಂಗ್‌ ಮಾಡಿರುವುದಾಗಿ ಇಸ್ರೋ ಅಧಿಕೃತವಾಗಿ ಘೋಷಿಸಿದೆ. ಈ ಮೂಲಕ ಭಾರತ ಅಂತರಾಷ್ಟ್ರೀಯ ಬಾಹ್ಯಕಾಶ ಕ್ಷೇತ್ರದಲ್ಲಿ ಐತಿಹಾಸಿಕ ದಾಖಲೆ ನಿರ್ಮಾಣ ಮಾಡಿದೆ.

ಜುಲೈ 14ರ ಮಧ್ಯಾಹ್ನ 2.30-3.30ರ ನಡುವೆ ಉಡಾವಣೆಗೊಂಡಿದ್ದ ರಾಕೆಟ್‌ ಇದೀಗ ಯಶಸ್ವಿಗೊಂಡಿದ್ದು, ಈ ಯಶಸ್ಸು ಕಂಡು ಚಂದ್ರನ ಮೇಲೆ ಸಾಫ್ಟ್‌ ಲ್ಯಾಂಡಿಂಗ್‌ ಆಗುವ ಮೂಲಕ ಭಾರತವು ಅಮೆರಿಕ, ರಷ್ಯಾ ಮತ್ತು ಚೀನಾದ ನಂತರ ನಾಲ್ಕನೇ ರಾಷ್ಟ್ರವಾಗಿ ಹೊರಹೊಮ್ಮಿದೆ.

ISRO ಈ ಮೊದಲು Chandrayaan-2 ಅನ್ನು2008 ರಲ್ಲಿ  ಉಡಾವಣೆ ಮಾಡಿತ್ತು. ಆದರೆ ಚಂದ್ರಯಾನ-2 ಮಿಷನ್ ಇನ್ನೇನು ಯಶಸ್ವಿಯಾಗುತ್ತೆ ಎನ್ನುವಷ್ಟರಲ್ಲಿ  ಕೊನೆಯ ಹಂತದಲ್ಲಿ ವಿಫಲವಾಗಿ ನಿರಾಸೆ ಮೂಡಿಸಿತ್ತು.  ಲ್ಯಾಂಡರ್ ಚಂದ್ರನ ಮೇಲ್ಮೈಗೆ ಜೋರಾಗಿ ಅಪ್ಪಳಿಸಿದ ಪರಿಣಾಮ, ನಂತರ ಲ್ಯಾಂಡರ್‌ ನಿಯಂತ್ರಣ ಕೊಠಡಿಯೊಂದಿಗೆ ಸಂಪರ್ಕವನ್ನು ಕಳೆದುಕೊಂಡಿತ್ತು.

ದಕ್ಷಿಣ ಧ್ರುವದ ಅಧ್ಯಯನ

ಈ ಬಾರಿ ಚಂದ್ರಯಾನ ಮಿಷನ್‌ನಲ್ಲಿ ಅತ್ಯಂತ ಸೂಕ್ಷ್ಮ ಹಾಗೂ ಅತ್ಯಾಧುನಿಕವಾದ ತಂತ್ರಜ್ಞಾನಗಳ ನೆರವನ್ನು ಚಂದ್ರಯಾನದಲ್ಲಿ ಬಳಸಿಕೊಳ್ಳಲಾಗಿದೆ. ಇನ್ನು ಈ ಯಾನದ ಮುಖ್ಯ ಉದ್ದೇಶ ವಿಜ್ಞಾನಿಗಳ ಕುತೂಹಲದ ಕೇಂದ್ರ ಬಿಂದುವಾಗಿರುವ ಚಂದ್ರನ ದಕ್ಷಿಣ ಧ್ರುವದ ಅಧ್ಯಯನ ನಡೆಸುವುದೇ ಆಗಿದೆ.

ಚಂದ್ರಯಾನ-3 ತಗುಲಿದ ವೆಚ್ಚ ಎಷ್ಟು ?

ಸದ್ಯದ ಮಾಹಿತಿ ಪ್ರಕಾರ ಚಂದ್ರಯಾನ-3 ರ ಒಟ್ಟು ವೆಚ್ಚ ರೂ. 615 ಕೋಟಿ. ಎಂದು ಹೇಳಲಾಗುತ್ತಿದೆ,  ಲ್ಯಾಂಡರ್, ರೋವರ್ ಮತ್ತು ಪ್ರೊಪಲ್ಷನ್ ಮಾಡ್ಯೂಲ್‌ ಸೇರಿ 215 ಕೋಟಿ.  ಮತ್ತು ಉಡಾವಣೆ ವೆಚ್ಚ ಸುಮಾರು 365 ಕೋಟಿ ಸೇರಿ 615 ಕೋಟಿ ರೂ ಎಂದು ಹೇಳಲಾಗುತ್ತಿದೆ.

ವರದಿಗಳ ಪ್ರಕಾರ ಹಾಲಿವುಡ್‌ ಚಿತ್ರಗಳಾದ "ದಿ ಮಾರ್ಟಿಯನ್" (ಮತ್ತು "ದಿ ಇಂಟರ್ ಸ್ಟೆಲ್ಲರ್" ನಂತಹ ಅನೇಕ ಹೈ ಬಜೆಟ್‌ ಸಿನಿಮಾಗಳ ಬಂಡವಾಳಕ್ಕಿಂತ ಕಡಿಮೆ ಚಂದ್ರಯಾನ-3 ವೆಚ್ಚ ಮಾಡಲಾಗಿದೆ. ಇನ್ನಿ ಬಾಲಿವುಡ್‌ನ  "ಆದಿಪುರುಷ" ($88) ಸಿನಿಮಾಗೆ ಮಾಡಲಾದ ವೆಚ್ಚಕ್ಕಿಂತ ಕಡಿಮೆ ವೆಚ್ಚದಲ್ಲಿ ಈ ಮಿಷನ್‌ ಅನ್ನು ರೂಪಿಸಲಾಗಿದೆ. ಮತ್ತು ಈ ವೆಚ್ಚ $96.5 ಮಿಲಿಯನ್ ಬಜೆಟ್ ಹೊಂದಿದ್ದ ಚಂದ್ರಯಾನ-2 ಗಿಂತ ಕಡಿಮೆಯಾಗಿದೆ.

LIVE ವೀಕ್ಷಣೆ ಎಲ್ಲಿ..?

ಇನ್ನು ಇಸ್ರೋದ  ಜಾಲತಾಣ  ಹಾಗೂ ಯೂಟ್ಯೂಬ್ ವಾಹಿನಿ, ಡಿಡಿ ನ್ಯಾಷನಲ್ ವಾಹಿನಿಗಳಲ್ಲಿ ಸಂಜೆ 5.25 ರಿಂದ ಚಂದ್ರಯಾನದ ನೇರಪ್ರಸಾರ ಮೂಡಿಬರುತ್ತಿದೆ.

Published On: 23 August 2023, 05:30 PM English Summary: Chandrayaan 3: ISRO Chandrayaan success..Vikram made a soft landing!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.