
ಕೋವಿಡ್ 19 ಲಾಕ್‌ಡೌನ್ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಮಹಿಳೆಯರ ಜನಧನ ಖಾತೆಗಳಿಗೆ ತಲಾ 500 ರೂ. ನೇರ ನಗದು ಎರಡನೇ ಕಂತಿನ ಹಣ ಜಮೆ ಮಾಡಲಾಗಿದೆ.
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಫಲಾನುಭವಿ ಮಹಿಳೆಯರ ಖಾತೆಗೆ ಹಣ ವರ್ಗಾಯಿಸಲಾಗಿದೆ ಎಂದು ವಿತ್ತ ಸಚಿವಾಲಯ ಶನಿವಾರ ತಿಳಿಸಿದೆ.
ಲಾಕ್‌ಡೌನ್ ಘೋಷಿಸಿದ್ದರಿಂದ ಜನರಿಗೆ ನೆರವಾಗಲು ಮೂರು ತಿಂಗಳು ತಲಾ 500 ರೂ. ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿತ್ತು. ಈಗಾಗಲೇ ಏಪ್ರಿಲ್ ಕಂತಿನ ಹಣವನ್ನು ನೀಡಲಾಗಿದೆ.
ನಿಗದಿತ ದಿನದಂದೇ ಹಣ ಬಿಡಿಸಿಕೊಳ್ಳುವ ನಿಟ್ಟಿನಲ್ಲಿ ಖಾತೆ ಸಂಖ್ಯೆಯ ಕಡೆಯ ಅಂಕಿ 0,1 ಇದ್ದವರಿಗೆ ಮೇ 4ರಂದು ಹಣ ಜಮೆ ಆಗಲಿದೆ. ಕಡೆಯ ಅಂಕಿ 2, 3 ಇದ್ದವರಿಗೆ ಮೇ 5 ರಂದು, ಕಡೆಯ ಅಂಕಿ 4, 5 ಇದ್ದವರಿಗೆ ಮೇ 6, ಕಡೆಯ
ಅಂಕಿ 6, 7 ಇದ್ದವರಿಗೆ ಮೇ 8, ಕಡೆಯ ಅಂಕಿ 9, 10 ಇದ್ದವರಿಗೆ ಮೇ 11 ರಂದು ಹಣ ವರ್ಗಾವಣೆ ಆಗಲಿದೆ.
ಆಯಾ ದಿನದಂದು ಜನರು ಹಣ ಬಿಡಿಸಿಕೊಳ್ಳಬಹುದಾಗಿದೆ, ಇಲ್ಲವೇ ಮೇ 11ರ ಬಳಿಕ ಯಾವಾಗ ಬೇಕಾದರೂ ಡ್ರಾ ಮಾಡಿಕೊಳ್ಳಬಹುದು. ಇದರಿಂದ ಒಮ್ಮೆಲೆ ಜನರು ಬ್ಯಾಂಕ್‌ಗಳ ಮುಂದೆ ಮುಗಿ ಬೀಳುವುದು ತಪ್ಪಲಿದೆ.
Share your comments