1. ಸುದ್ದಿಗಳು

ಇಂದು ಗುರು ಪೂರ್ಣಿಮೆ; ನಿಸ್ವಾರ್ಥ, ನಿತ್ಯ ಕಾಯಕಯೋಗಿ ‘ಗುರು’ವ ಗೌರವಿಸುವ ದಿನ

ಗುರುರ್ ಬ್ರಹ್ಮ

ಗುರುರ್ ವಿಷ್ಣು

ಗುರುರ್ ದೇವೋ ಮಹೇಶ್ವರಃ

ಗುರುರ್ ಸಾಕ್ಷಾತ್ ಪರಬ್ರಹ್ಮ

ತಸ್ಮೈ ಶ್ರೀ ಗುರುವೇ ನಮಹಃ

ಇದರರ್ಥ; ಗುರು ಎಂದರೆ ನಮ್ಮೊಳಗೆ ಜ್ಞಾನದ ಬೆಳಕು ಹರಿಸುವ ಬ್ರಹ್ಮನಂತೆ, ಅಜ್ಞಾನ ಕಳೆದು ಜ್ಞಾನದ ಸರಿ ದಾರಿಗೆ ಕರೆದೊಯ್ಯುವ ವಿಷ್ಣುವಿನಂತೆ, ಬುದ್ಧಿಗೆ ಅಂಟಿಕೊಂಡ ಜಾಢ್ಯವನ್ನು ನಾಶಪಡಿಸುವ ಶಿವನಂತೆ. ಹಾಗಾಗಿ ಗುರುವು ನಮಗೆ ಪರಮ ದೈವ. ದೈವ ಸ್ವರೂಪಿ ಗುರುವನ್ನು ನಾವು ಸದಾ ಪೂಜಿಸಬೇಕು, ಗೌರವಿಸಬೇಕು ಎಂಬುದಾಗಿದೆ.

‘ಒAದಕ್ಷರವ ಕಲಿಸಿದಾತನೂ ಗುರು’ ಎನ್ನುತ್ತಾರೆ. ಹೀಗಾಗಿ, ನಾವು ಹುಟ್ಟಿದಾಗಿನಿಂದ ಬೆಳೆದು ದೊಡ್ಡವರಾಗುವವರೆಗೆ ಇರಿಸುವ ಪ್ರತಿ ಒಂದು ಹೆಜ್ಜೆಗೂ ಒಬ್ಬೊಬ್ಬ ಗುರು ಇರುತ್ತಾರೆ. ಅದರಲ್ಲೂ ನಮಗೆ ಜ್ಞಾನದ ಬೆಳಕು ನೀಡಿದ ಗುರುವಿನ ಸ್ಥಾನ ಅತ್ಯಂತ ಶ್ರೇಷ್ಠವಾದುದು. ಇಂತಹ ಗುರುವಿಗೆ ಗೌರವ ಸಮರ್ಪಿಸಲು, ಭಕ್ತಿಯ ನಮನ ಸಲ್ಲಿಸಲು ಇರುವ ಒಂದು ಅವಕಾಶವೇ ಗುರು ಪೂರ್ಣಿಮೆ.

ಇಂದು, ಅಂದರೆ ಜುಲೈ 24ರ ಶನನಿವಾರ ಭಾರತದಲ್ಲಿ ಗುರು ಪೂರ್ಣಿಮೆ (ಗುರು ಪೌರ್ಣಿಮೆ) ಆಚರಿಸಲಾಗುತ್ತದೆ. ‘ಗುರುಗಳ ಗುರು’ ಎಂಬ ಗೌರವಕ್ಕೆ ಪಾತ್ರರಾಗಿರುವ ದತ್ತಾತ್ರೇಯರ ಗುರುಗಳಿಗೇ ಗುರುಗಳಾಗಿದ್ದ, ಮಹಾಗುರು ಶ್ರೀ ವೇದವ್ಯಾಸರ ಆರಾಧನೆ, ಸ್ಮರಣಾರ್ಥ ಗುರು ಪೂರ್ಣಿಮೆ ಆಚರಿಸಲಾಗುತ್ತದೆ. ಇದೇ ವೇಳೆ ಜಗತ್ತಿನ ಎಲ್ಲ ಗುರುಗಳನ್ನೂ ಗೌರವಿಸುವ ಕಾರ್ಯವನ್ನು ಭಾರತ ಮಾಡುತ್ತದೆ.

ಹಿಂದೂ ಪಂಚಾAಗದ ಪ್ರಕಾರ ಆಷಾಢ ಮಾಸದ ಹುಣ್ಣಿಮೆಯನ್ನು ಹಿಂದೂಗಳು ಸಾಂಪ್ರದಾಯಿಕವಾಗಿ ಗುರು ಪೂರ್ಣಿಮೆ ಎಂದು ಆಚರಿಸುತ್ತಾರೆ. ಮಹಾಗುರು ಹಾಗೂ ಮಹಾಭಾರತದ ಕರ್ತೃಗಳಾಗಿರುವ ಶ್ರೀ ವೇದವ್ಯಾಸರು, ಪರಾಶರ ಋಷಿಗಳು ಹಾಗೂ ಸತ್ಯವತಿ ದಂಪತಿಯ ಪುತ್ರರಾಗಿ ಜನಿಸಿದ ದಿನ ಕೂಡ ಇಂದೇ ಎಂಬ ನಂಬಿಕೆ ಇದೆ.

ಶ್ರೀ ಗುರುಭ್ಯೋ ನಮಃ

‘ಗುರು’ ಅನ್ನುವ ಶಬ್ದವು ‘ಗು’ ಮತ್ತು ‘ರು’ ಅನ್ನುವ ಮೂಲ ಅಕ್ಷರಗಳನ್ನು ಹೊಂದಿದೆ. ಸಂಸ್ಕೃತ ಭಾಷೆಯಲ್ಲಿ ‘ಗು’ ಅಂದರೆ ‘ಅಂಧಕಾರ’ ಅಥವಾ ‘ಅಜ್ಞಾನ’ ಎಂದಾಗಿದ್ದು, ‘ರು’ ಅಂದರೆ ‘ಕಳೆಯುವ’ ಅಥವಾ ‘ದೂರ ಮಾಡುವ’ ಎಂಬ ಅರ್ಥವಿದೆ. ಹೀಗಾಗಿ ‘ಅಜ್ಞಾನದ ಕತ್ತಲೆಯಿಂದ ಜ್ಞನದ ಬೆಳಕಿನೆಡೆಗೆ ಕರೆದೊಯ್ಯುವವನೇ ಗುರು’ವಾಗಿರುತ್ತಾನೆ. ಒಂದಕ್ಷರ ಕಲಿಸಿದ ವ್ಯಕ್ತಿಯೂ ನಮಗೆ ಗುರು ಸಮಾನ ಎಂದು ಗೌರವಿಸುವ ಗುಣ ಭಾರತೀಯರಲ್ಲಿದೆ. ಇದಲ್ಲದೇ ವೇದ ವೇದಾಂಗದ ಜೊತೆಗೆ ಜೀವನ ಶೈಲಿಯನ್ನು ಕಲಿಸುವ ಗುರುಗಳನ್ನು ಭಾರತೀಯರು ನಿತ್ಯ ನಿರಂತರ ಸ್ಮರಿಸುತ್ತೇವೆ. ಹಾಗಾಗಿಯೇ ದೇವರನ್ನು ಭಜಿಸುವ ಮೊದಲು ‘ಶ್ರೀ ಗುರುಭ್ಯೋ ನಮಃ’ ಎಂದು ಗುರುಗಳನ್ನು ನೆನೆಯಲಾಗುತ್ತದೆ.

ಗುರು ಪೂರ್ಣಿಮೆಗೆ ಧಾರ್ಮಿಕ ಪ್ರಾಮುಖ್ಯತೆ ಮಾತ್ರವಲ್ಲದೆ, ಶೈಕ್ಷಣಿಕ ಮತ್ತು ವಿದ್ವಾಂಸರ ವೃಂದದಲ್ಲೂ ಮಹತ್ವ ಇದೆ. ಈ ದಿನ ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗೆ, ಶಿಕ್ಷಕರು ಅವರ ಗುರುಗಳಿಗೆ ಕೃತಜ್ಞತೆ ಸಲ್ಲಿಸುತ್ತಾರೆ. ಗುರುಗಳನ್ನು ಸ್ಮರಿಸಲು ಇಂಥದ್ದೇ ದಿನ ಆಗಬೇಕೆಂದೇನಿಲ್ಲ. ಅವರನ್ನು ನಿತ್ಯ, ನಿರಂತರ ಸ್ಮರಿಸುತ್ತಲೇ ಇರಬೇಕು. ಅದರಲ್ಲೂ ಗುರು ಪೂರ್ಣಿಮೆಯ ದಿನ ವಿಶೇಷವಾಗಿ ಸ್ಮರಿಸಲೇಬೇಕು. ಕಾರಣ, ಪರ್ವತೋಪಾದಿಯಲ್ಲಿ ರಾಶಿಯಾಗಿದ್ದ ವೇದ(ಜ್ಞಾನ) ಸಂಗ್ರಹವನ್ನು, ಆಷಾಢ ಮಾಸದ ಹುಣ್ಣಿಮೆಯಂದು ಶ್ರೀ ವೇದವ್ಯಾಸರು, ಋಗ್ವೇದ, ಯಜುರ್ವೇದ, ಸಾಮವೇದ ಹಾಗೂ ಅಥರ್ವಣ ವೇದ ಎಂದು ನಾಲ್ಕು ವಿಭಾಗಗಳಾಗಿ ಮಾಡಿದ ದಿನ ಕೂಡ ಇದುವೇ ಎನ್ನಲಾಗುತ್ತದೆ. ಜ್ಞಾನದಾಹಿಗಳು ಜ್ಞಾನ ಸಂಪತ್ತನ್ನು ಗಳಿಸುವ ಹಾದಿಯನ್ನು ಸುಲಭ ಮಾಡಿಕೊಟ್ಟ ಈ ದಿನವನ್ನು ಗುರು ಪೂರ್ಣಿಮೆ ಎಂದು ಆಚರಿಸಲಾಗುತ್ತದೆ ಎನ್ನುತ್ತಾರೆ ಆನೇಕಲ್‌ನ ಶ್ರೀ ಲಕ್ಷಿö್ಮÃನಾರಾಯಣಾಚಾರ್ಯ ಅವರು.

ವ್ಯಾಸ ಪೂರ್ಣಿಮಾ

ಯೋಗ ಸಂಪ್ರದಾಯದಲ್ಲಿ ಈ ದಿನವನ್ನು ಶಿವನು ಸಪ್ತರ್ಷಿಗಳಿಗೆ ಯೋಗ ವಿದ್ಯೆಯನ್ನು ಧಾರೆಯೆರೆದು ಪ್ರಥಮ ಗುರು ಆದ ದಿನ ಎಂಬ ನಂಬಿಕೆಯಿAದ ಆಚರಿಸುತ್ತಾರೆ. ಹಲವಾರು ಹಿಂದೂಗಳು, ಹಿಂದೂ ಪರಂಪರೆಯ ಶ್ರೇಷ್ಠ ಗುರುಗಳಲ್ಲಿ ಒಬ್ಬರಾದ ವೇದವ್ಯಾಸ ಮಹರ್ಷಿಗಳ ಜನ್ಮದಿನದ ಅಂಗವಾಗಿ ಈ ಹಬ್ಬವನ್ನು ಆಚರಿಸುತ್ತಾರೆ. ವೇದವ್ಯಾಸ ಮಹರ್ಷಿಗಳು ಆಷಾಢ ಶುಕ್ಲ ಪಕ್ಷದ ಪ್ರಾರಂಭದಿAದ ಬ್ರಹ್ಮಸೂತ್ರಗಳ ರಚನೆ ಪ್ರಾರಂಭಿಸಿದರು. ಈ ದಿನ ಆ ಶುಕ್ಲ ಪಕ್ಷ ಕೊನೆಗೊಳ್ಳುತ್ತದೆ. ಇದರ ಸ್ಮರಣಾರ್ಥಕವಾಗಿ ಈ ದಿನದಂದು ಬ್ರಹ್ಮಸೂತ್ರಗಳ ಪಠಣ ಮಾಡಲಾಗುತ್ತದೆ ಹಾಗೂ ಈ ದಿನವನ್ನು ವ್ಯಾಸ ಪೂರ್ಣಿಮಾ ಎಂದೂ ಕರೆಯುತ್ತಾರೆ.

ಬಹುವಿಧವಾಗಿ ಆಚರಣೆ

ಹಿಂದೂ ಧರ್ಮದ ಆಧ್ಯಾತ್ಮಿಕ ಪರಂಪರೆಯಲ್ಲಿ ತಮ್ಮ ಗುರುಗಳಿಗೆ ಕೃತಜ್ಞತೆ ಸಲ್ಲಿಸುವ ಈ ದಿನವನ್ನು ಅತ್ಯಂತ ಶ್ರದ್ಧೆ, ಭಕ್ತಿಯಿಂದ ಆಚರಿಸಲಾಗುತ್ತದೆ. ಮಳೆಗಾಲದ ನಾಲ್ಕು ತಿಂಗಳುಗಳಾದ ಚಾತುರ್ಮಾಸದಲ್ಲಿ ಬರುವ ಈ ಗುರುಪುರ್ಣಿಮೆಯಂದು ಸನ್ಯಾಸಿಗಳು ತಮ್ಮ ಗುರುಗಳನ್ನು ಪೂಜಿಸುತ್ತಾರೆ. ಈ ಚಾತುರ್ಮಾಸದಲ್ಲಿ ಸನ್ಯಾಸಿಗಳು ಸಾಮಾನ್ಯವಾಗಿ ಒಂದೇ ಸ್ಥಳದಲ್ಲಿ ಇದ್ದು, ಭಕ್ತರಿಗೆ ಪ್ರವಚನ ನೀಡುವ ಸಂಪ್ರದಾಯವೂ ಇದೆ. ಭಾರತ ಶಾಸ್ತಿçÃಯ ಸಂಗೀತವು ಗುರು ಶಿಷ್ಯ ಪರಂಪರೆ ಪಾಲಿಸುವುದರಿಂದ, ವಿಶ್ವಾದ್ಯಂತ ಸಂಗೀತ ವಿದ್ಯಾರ್ಥಿಗಳು, ಉಪಾಸಕರು, ವಿದ್ವಾಂಸರು ಗುರು ಪೂರ್ಣಿಮೆ ಆಚರಿಸುತ್ತಾರೆ. ಇನ್ನು ಗೌತಮ ಬುದ್ಧನ ಪ್ರಥಮ ಧರ್ಮೋಪದೇಶದ ಅಂಗವಾಗಿ ಬೌದ್ಧರು ಈ ದಿನವನ್ನು ಅತ್ಯಂತ ಸಾಂಪ್ರದಾಯಿಕವಾಗಿ ಆಚರಿಸುತ್ತಾರೆ. ಈ ದಿನ ಗೌತಮ ಬುದ್ಧನು ಉತ್ತರ ಪ್ರದೇಶದ ಸಾರನಾಥದಲ್ಲಿ ತನ್ನ ಪ್ರಥಮ ಧರ್ಮೋಪದೇಶ ನೀಡಿದ ಎನ್ನಲಾಗುತ್ತದೆ. ಜೈನ ಧರ್ಮದಲ್ಲಿ ಗುರು ಪೂರ್ಣಿಮೆಯನ್ನು, ಭಗವಾನ್ ಮಹಾವೀರನು ಗೌತಮ ಸ್ವಾಮಿಯನ್ನು ತಮ್ಮ ಪ್ರಥಮ ಶಿಷ್ಯನನ್ನಾಗಿ ಸ್ವೀಕರಿಸಿದ ಅಂಗವಾಗಿ ಇಂದು ಗುರು ಪೂರ್ಣಿಮೆ ಆಚರಿಸಲಾಗುತ್ತದೆ.

ಕೃಷಿ ವಲಯಕ್ಕೂ ಮಹತ್ವದ ದಿನ

ಕೃಷಿಕರಿಗೆ ಗುರು ಪೂರ್ಣಿಮೆಯು ಅತ್ಯಂತ ಪವಿತ್ರ ದಿನವಾಗಿದೆ. ಏಕೆಂದರೆ ಈ ದಿನವನ್ನು ಮಳೆಯ ಆಗಮನದ ದಿನವೆಂದು ಪರಿಗಣಿಸಲಾಗುತ್ತದೆ. ವೇದಗಳ ಪ್ರಕಾರ ಆಷಾಢ ಮಾಸದ ಹುಣ್ಣಿಮೆಯ ದಿನ ಮಳೆ ಅಥವಾ ಮಳೆಗಾಲ ಆರಂಭವಾಗುತ್ತದೆ. ಕೃಷಿ ಚಟುವಟಿಕೆಗಳಿಗೆ ಮಳೆಯು ಮೂಲಾಧಾರವಾಗಿದೆ. ಹೀಗಾಗಿ ಮಳೆಗಾಲ ಆರಂಭವಾಗುವ ಈ ದಿನ ಕೃಷಿ ವಲಯದಲ್ಲೂ ಮಹತ್ವ ಪಡೆದಿದೆ.

Published On: 24 July 2021, 02:49 PM English Summary: celebration and importance of guru poornima

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.