1. ಸುದ್ದಿಗಳು

ಬ್ರೇಕಿಂಗ್‌: ಕೇಂದ್ರ ಸರ್ಕಾರಿ ನೌಕರರೇ ಗಮನಿಸಿ..ಇನ್ಮುಂದೆ ಹೀಗೆ ಮಾಡಿದರೆ ನಿಮ್ಮ ನೌಕರಿಗೆ ಎದುರಾಗಲಿದೆ ಕುತ್ತು! ಏನದು ಗೊತ್ತೆ?

Kalmesh T
Kalmesh T
Breaking: Bitter news for central government employees

ಕೇಂದ್ರ ಸರ್ಕಾರಿ ನೌಕರರಿಗೆ ಇಲ್ಲಿದೆ ಸರ್ಕಾರದಿಂದ ಕಹಿ ಸುದ್ದಿ. ಏನೆಂದು ತಿಳಿಯಲು ಇದನ್ನೂ ಓದಿರಿ

ಮತ್ತಷ್ಟು ಓದಿರಿ: ನಬಾರ್ಡ್‌ನಲ್ಲಿ ನೇಮಕಾತಿ; ತಿಂಗಳಿಗೆ 4.5 ಲಕ್ಷ ಸಂಬಳ..! ಅರ್ಜಿ ಸಲ್ಲಿಕೆಗೆ ಜೂನ್‌ 30 ಕೊನೆ ದಿನ..

Monsoon: ಜೂನ್‌ 19ರ ಒಳಗೆ ರಾಜ್ಯದಲ್ಲಿ ಮುಂಗಾರು ಮಳೆ ನಿರೀಕ್ಷೆ! ಹವಾಮಾನ ಇಲಾಖೆ ಸೂಚನೆಯಲ್ಲಿ ಯಾವ ಯಾವ ಜಿಲ್ಲೆಗಳಿವೆ ಗೊತ್ತೆ?

ಕೇಂದ್ರ ಸರಕಾರಿ ಉದ್ಯೋಗಿಗಳು ಇನ್ನು ಮುಂದೆ ಗೂಗಲ್ ಡ್ರೈವ್ ಮತ್ತು ಡ್ರಾಪ್‌ಬಾಕ್ಸ್‌ನಂತಹ ಕ್ಲೌಡ್ ಸೇವೆಗಳಲ್ಲಿ ಯಾವುದೇ ಗೌಪ್ಯ ಸರ್ಕಾರಿ ಫೈಲ್‌ಗಳನ್ನು ಉಳಿಸದಂತೆ ಸರ್ಕಾರವು ಆದೇಶ ಹೊರಡಿಸಿದೆ.

ಗೂಗಲ್ ಡ್ರೈವ್ ಅಥವಾ ಡ್ರಾಪ್‌ಬಾಕ್ಸ್‌ನಂತಹ ಯಾವುದೇ ಸರ್ಕಾರೇತರ ಕ್ಲೌಡ್ ಸೇವೆಯಲ್ಲಿ ಯಾವುದೇ ಇಂಟರ್ನಲ್‌, ನಿರ್ಬಂಧಿತ ಅಥವಾ ಗೌಪ್ಯ ಸರ್ಕಾರಿ ಡೇಟಾ ಫೈಲ್‌ಗಳನ್ನು ಉಳಿಸದಂತೆ ಕೇಂದ್ರ ಸರಕಾರ ತನ್ನ ಉದ್ಯೋಗಿಗಳಿಗೆ ಸುತ್ತೋಲೆ ಹೊರಡಿಸುವ ಮೂಲಕ ತಿಳಿಸಿದೆ.

ದಿನದಿಂದ ದಿನಕ್ಕೆ ಸೈಬರ್‌ ಕ್ರೈಂ (Cyber Crime)  ಪ್ರಕರಣಗಳು ಹೆಚ್ಚುತ್ತಲಿರುವ ಕಾರಣ ದೇಶದ ಭದ್ರತೆ ಮತ್ತು ಗೌಪ್ಯತೆಗೆ ಸಂಬಂಧಿಸಿದ ಮಾಹಿತಿಗಳು ಸೋರಿಕೆಯಾಗಿದೆ. ಮತ್ತು ಆಗುತ್ತಲೇ ಇದೆ.

ಈ ಅಪಾಯವನ್ನು ತಡೆಗಟ್ಟುವ ನಿಟ್ಟಿನಲ್ಲಿ  ಮೂರನೇ ವ್ಯಕ್ತಿಯ ವರ್ಚುವಲ್ ಖಾಸಗಿ ನೆಟ್‌ವರ್ಕ್‌ಗಳನ್ನು (VPN) ಬಳಸುವುದನ್ನು ನಿಷೇಧಿಸುವಂತೆ ಹೇಳಿದೆ. Nord VPN, ExpressVPN ಮತ್ತು Tor ನಂತಹ ಕಂಪನಿಗಳು ನೀಡುವ ಯಾವುದೇ ಅನಾಮಧೇಯ ಸೇವೆಗಳನ್ನು ಬಳಸದಂತೆ  ಕೇಂದ್ರ ಸರಕಾರಿ ನೌಕರರಿಗೆ ನಿರ್ಬಂಧ ಹೇರಲಾಗಿದೆ.

ರೈತರಿಗೆ ಗುಡ್ ನ್ಯೂಸ್: ಸರ್ಕಾರಿ ಭೂಮಿಯಲ್ಲಿ ಕೃಷಿ: ಕೃಷಿ ಆಕಾಂಕ್ಷಿಗಳಿಗೆ ವರದಾನ ಈ ಯೋಜನೆ

PM ಉಚಿತ ಹೊಲಿಗೆ ಯಂತ್ರ ಯೋಜನೆ; ಒಂದು ಅರ್ಜಿ ಸಲ್ಲಿಸಿ ಉಚಿತ ಹೊಲಿಗೆ ಯಂತ್ರ ಪಡೆಯಿರಿ..! ಈಗಲೇ ಅರ್ಜಿ ಸಲ್ಲಿಸಿ

ಜೊತೆಗೆ  ಉದ್ಯೋಗಿಗಳು ಇನ್ನು ಮುಂದೆ ಗೂಗಲ್ ಡ್ರೈವ್ ಮತ್ತು ಡ್ರಾಪ್‌ಬಾಕ್ಸ್‌ನಂತಹ ಕ್ಲೌಡ್ ಸೇವೆಗಳಲ್ಲಿ ಯಾವುದೇ ಗೌಪ್ಯ ಸರ್ಕಾರಿ ಫೈಲ್‌ಗಳನ್ನು ಉಳಿಸದಂತೆ ಸೂಚನೆ ಹೊರಡಿಸಿದೆ.

ವರದಿಯ ಪ್ರಕಾರ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ  ( Ministry of Electronics and Information Technology) ಅಡಿಯಲ್ಲಿ  ರಾಷ್ಟ್ರೀಯ ಮಾಹಿತಿ ಕೇಂದ್ರ (NIC) ನಿಗದಿಪಡಿಸಿರುವ ಈ ನಿಯಮಗಳು ಸರ್ಕಾರದ ಭದ್ರತೆಯನ್ನು ಸುಧಾರಿಸುವ ಗುರಿ ಹೊಂದಿವೆ.

ವಿಪಿಎನ್ ಸೇವೆಗಳನ್ನು ಭಯೋತ್ಪಾದಕ ಸಂಘಟನೆಗಳು ಬಳಸಿಕೊಳ್ಳಬಹುದು ಮತ್ತು ಅವುಗಳನ್ನು ಪತ್ತೆಹಚ್ಚಲು ಅಸಾಧ್ಯವಾಗುವುದರಿಂದ ದೇಶದ ಭದ್ರತೆಗೆ ಅಪಾಯವಿದೆ ಎಂದು ಭಾರತ ಸರ್ಕಾರವು ಅಭಿಪ್ರಾಯಪಟ್ಟಿದೆ.

ಭಾರತದಲ್ಲಿ ವಿಪಿಎನ್ ಕಂಪನಿಗಳು ಹೇಗೆ ಕಾರ್ಯನಿರ್ವಹಿಸಬೇಕು ಎಂಬುದರ ಕುರಿತು ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (ಸರ್ಟ್-ಇನ್) ನಿರ್ದೇಶನ ನೀಡಿತ್ತು. ಅದರ ಬೆನ್ನಲ್ಲೇ ದೇಶದಲ್ಲಿ ತಮ್ಮ ಸೇವೆಗಳನ್ನು ಸ್ಥಗಿತ ಮಾಡುವುದಾಗಿ ಎಕ್ಸ್‌ಪ್ರೆಸ್‌ ವಿಪಿಎನ್, ಸರ್ಫ್‌ಶಾರ್ಕ್ ಮತ್ತು ನಾರ್ಡ್‌ ವಿಪಿಎನ್ ಹೇಳಿದ್ದವು. ಇದಾದ ಕೆಲವೇ ದಿನಗಳಲ್ಲಿ ಸರ್ಕಾರದಿಂದ ಈ ಆದೇಶ ಹೊರಬಿದ್ದಿದೆ.

7th Pay : ಸಂಬಳದ ಹೊರತಾಗಿಯೂ ನೌಕರರಿಗೆ ದೊರೆಯಲಿದೆ ಲಾಭ! ಏನಿದು ಗೊತ್ತೆ!

EPFO: 6 ಕೋಟಿಗೂ ಹೆಚ್ಚು ಸರ್ಕಾರಿ ನೌಕರರಿಗೆ ಭರ್ಜರಿ ಸುದ್ದಿ; ಈ ದಿನದಂದು ನಿಮ್ಮ ಖಾತೆಗೆ ಬರಲಿದೆ ₹80,000!

ಹೆಚ್ಚುವರಿಯಾಗಿ, ಇಲಾಖೆಯು ಸರ್ಕಾರಿ ಉದ್ಯೋಗಿಗಳಿಗೆ ತಮ್ಮ ಮೊಬೈಲ್ ಫೋನ್‌ಗಳನ್ನು 'ಜೈಲ್ ಬ್ರೇಕ್' ಅಥವಾ 'ರೂಟ್' ಮಾಡದಂತೆ ಅಥವಾ "ಆಂತರಿಕ ದಾಖಲೆಗಳನ್ನು" ಸ್ಕ್ಯಾನ್ ಮಾಡಲು Cam Scanner ನಂತಹ ಯಾವುದೇ ಬಾಹ್ಯ ಮೊಬೈಲ್ ಅಪ್ಲಿಕೇಶನ್ ಆಧಾರಿತ ಸ್ಕ್ಯಾನರ್ ಸೇವೆಗಳನ್ನು ಬಳಸದಂತೆ ಸೂಚಿಸಿದೆ.

ಜುಲೈ 2020ರಲ್ಲಿ ಸರ್ಕಾರ ನಿಷೇಧಿಸಿದ ಹಲವಾರು ಚೀನೀ ಅಪ್ಲಿಕೇಶನ್‌ಗಳಲ್ಲಿ CamScanner ಕೂಡ ಒಂದು. ನಿಷೇಧದ ಬಳಿಕವೂ ಇದು ಕೆಲವು ಆವೃತ್ತಿಗಳ ಮೂಲಕ ಕಾರ್ಯನಿರ್ವಹಿಸುತ್ತಿದೆ.

ಗಡಿ ಹಗೆತನ ಸೇರಿದಂತೆ ಅನೇಕ ರೀತಿಯ ಭದ್ರತಾ ಕಾಳಜಿಯ ನಿಟ್ಟಿನಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ. ದೇಶಾದ್ಯಂತ ಸರ್ಕಾರಿ ಕಚೇರಿಗಳಲ್ಲಿ ಏಕರೂಪದ ಸೈಬರ್ ಭದ್ರತಾ ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ಸರ್ಕಾರದ ಭದ್ರತೆಗೆ ಸಂಬಂಧಪಟ್ಟ ಗೌಪ್ಯತೆಯನ್ನ ಕಾಯ್ದುಕೊಳ್ಳಬೇಕೆಂದು ಎಂದು ನೌಕರರಿಗೆ ಸೂಚಿಸಿದೆ.

Published On: 18 June 2022, 04:05 PM English Summary: Breaking: Bitter news for central government employees

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.